god-says-trust-me

ದೇವರು “ನನ್ನನ್ನು ನಂಬಿರಿ” ಎಂದು ಹೇಳಿದನು – ಯೋಹಾನ 14:1 – ಯೇಸು ಈ ಭೂಮಿಯನ್ನು ಬಿಟ್ಟು ಹೋಗುವುದನ್ನು ತಿಳಿದ ಶಿಷ್ಯರ ಹೃದಯಗಳು ಕಳವಳಗೊಂಡವು. ಈ ಎಲ್ಲಾ ದಿನಗಳಲ್ಲಿ ಶಿಷ್ಯರು ಯೇಸುವಿನ ಜೊತೆ ನಡೆದಾಡಿದರು, ಮಾತನಾಡಿದರು, ನಕ್ಕರು, ತಮ್ಮ ಎಲ್ಲಾ ಸಂತೋಷ ಮತ್ತು ದುಖಃಗಳನ್ನು ಆತನ ಜೊತೆ ಹಂಚಿಕೊಂಡರು. ಆದರೆ ಯೇಸು ತನ್ನ ಶಿಷ್ಯರಿಗೆ “ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ” ಎಂದು ಹೇಳಿದನು. ಸ್ನೇಹಿತರೇ, ನಿಮ್ಮ ಹೃದಯವು ನಿಮ್ಮ ಭವಿಷ್ಯ, ನಿಮ್ಮ ಪೋಷಕರು, ನಿಮ್ಮ ಮಕ್ಕಳು ಅಥವಾ ನಿಮ್ಮ ಕೆಲಸದ ಬಗ್ಗೆ ಆತ೦ಕಿತವಾಗಿದೆಯಾ. “ನನ್ನನ್ನು ನಂಬಿರಿ” ಎಂದು ಯೇಸು ನಿಮಗೆ ಹೇಳಿದ ವೈಯಕ್ತಿಕ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಹೃದಯವನ್ನು ಶಾಂತಗೊಳಿಸಲು ಮತ್ತು ಆತನ ಸಂತೋಷವನ್ನು ಸ್ವೀಕರಿಸಲು ಯೇಸುವಿನ ಮೇಲೆ ನಂಬಿಕೆಯಿಡುತ್ತೀರಾ?

faith-lessons

ನಂಬಿಕೆಯ ಪಾಠಗಳು – ಯೋಹಾನ 13:37-38b – ಯಾವ ನಂಬಿಕೆಯ ಪಾಠಗಳನ್ನು ಯೇಸುವಿನಿಂದ ಕಲಿತುಕೊಳ್ಳಬಹುದು. 1) ಈ ದಿನ ನಂಬಿಕೆಯ ಕಡೆ ಗಮನಹರಿಸಿ – ಯೇಸುವಿಗೋಸ್ಕರ ಪ್ರಾಣ ನೀಡುವುದಕ್ಕೆ ಪೇತ್ರನು ಮಹೋನ್ನತ ಯೋಜನೆಯನ್ನು ಹೊಂದಿದ್ದನು, ಆದರೆ ಯೇಸು ಆ ರಾತ್ರಿಯ ಪೇತ್ರನ ನಂಬಿಕೆಗೋಸ್ಕರ ಪ್ರಾರ್ಥಿಸಿದನು. 2) ಕುಸಿದು ಬಿದ್ದ ಜನರಿಗೆ ಸಹಾಯ ಮಾಡಿರಿ – ವಿಫಲತೆಯ ನಂತರ ಪೇತ್ರನನ್ನು ಯೇಸು ನಂಬಿಕೆಯಲ್ಲಿ ಬಲಯೀನತೆಯುಳ್ಳವರಿಗೆ ಸಹಾಯ ಮಾಡಿ ಅವರನ್ನು ಬಲಪಡಿಸಲು ಬಯಸಿದನು. ನಮ್ಮ “ನಂಬಿಕೆಯ ವಿಫಲತೆ” ಗಳನ್ನು ಇತರರಿಗೆ ಬಲಪಡಿಸಲು ಉಪಯೋಗಿಸುವುದನ್ನು ಯೇಸು ಬಯಸುತ್ತಾನೆ. ಅನೇಕ ವರ್ಷಗಳ ನಂತರ ಪೇತ್ರನು ಯೇಸುವಿಗೋಸ್ಕರ ತಲೆಕೆಳಗಾದ ಶಿಲುಬೆಯಲ್ಲಿ ಮೊಳೆ ಜಡಿಸಿಕೊಂಡು ಮರಣ ಹೊಂದಿದನು.

faith-attack

ನಂಬಿಕೆಯೆಡೆಗೆ ದಾಳಿ – ಯೋಹಾನ 13:37-38a – ರಲ್ಲಿ ಪೇತ್ರನು ಯೇಸುವಿಗೆ – ನಾನು ನಿನಗೋಸ್ಕರ ಪ್ರಾಣ ನೀಡುವುದಕ್ಕೆ ಸಾಕಷ್ಟು ನಂಬಿಕೆಯುಳ್ಳವನಾಗಿದ್ದೇನೆ ಎಂದು ಹೇಳಿದನು. ಆದರೆ ಸೈತಾನನು ಪೇತ್ರನ ನಂಬಿಕೆಯ ಮೇಲೆ ದಾಳಿ ಮಾಡಲು ಬಯಸುತ್ತಿದ್ದಾನೆ ಎಂದು ಯೇಸುವಿಗೆ ತಿಳಿದಿತ್ತು. ಹೇಗೆ ಸೈತಾನನು ದಾಳಿ ಮಾಡುತ್ತಾನೆ? 1) ಪೇತ್ರನು ತನ್ನ ವೈಯಕ್ತಿಕ ನಂಬಿಕೆಯಲ್ಲಿ ಸ್ವ-ಭರವಸೆಯುಳ್ಳವನಾಗಿದ್ದನು. 2) “ಇತರರು ಬಿದ್ದರೂ ಸಹ, ನಾನು ಬೀಳುವುದಿಲ್ಲ” ಎಂದು ಅವನು ತನ್ನ ನಂಬಿಕೆಯನ್ನು ಇತರೊಂದಿಗೆ ಹೋಲಿಸಿಕೊಂಡನು. ನಮ್ಮ ಸ್ವಯಂ ಮೇಲೆ ವಿಶ್ವಾಸವಿಡದೆ ಯೇಸುವಿನ ಮೇಲೆ ವಿಶ್ವಾಸವಿಡೋಣ (ಪಿಲಿಪ್ಪಿ 3:3). ಇದು ನಾವು ಹೇಗೆ ಸ್ವ-ಹೆಮ್ಮೆ ಮತ್ತು ಹೋಲಿಸುವ ಸ್ವಭಾವದ ಆತ್ಮೀಕ ದಾಳಿಗಳನ್ನು ಜಯಿಸುವುದು ಎಂಬುದಾಗಿದೆ.

not-now-but-later

ಈಗ ಅಲ್ಲ, ಆದರೆ ನಂತರ – ಯೋಹಾನ 13:36 – ರಲ್ಲಿ ಯೇಸು ಪೇತ್ರನಿಗೆ ನಾನು ಹೋಗುವಲ್ಲಿಗೆ ನೀನು ಈಗ ಬರಲಾರಿ ಎಂದು ಹೇಳಿದನು. ಅನೇಕ ವೇಳೆಗಳಲ್ಲಿ ನಾವು ಕೆಲವು ವಿಷಯಗಳು ತಕ್ಷಣ ಸಂಭವಿಸಬೇಕೆಂದು ಬಯಸುತ್ತೇವೆ. ಅಂದರೆ ನಾವು ಮುಟ್ಟಿದ ತಕ್ಷಣ ಬಾಗಿಲು ತೆರೆಯುವಂತೆ. ಆದರೆ ದೇವರು ನಮ್ಮ ಜೀವನದ ಲೇಖಕರಾಗಿದ್ದಾರೆ ಮತ್ತು ಆತನಿಗೆ ಪ್ರತಿ ಚಿಕ್ಕ ವಿಷಯವೂ ತಿಳಿಯುತ್ತದೆ. ನಾವು ದೇವರ ವಾಗ್ಧಾನಗಳು ನೆರವೇರುವ ತನಕ ಕಾಯಬೇಕು. ಅಬ್ರಹಾಮನು ಹೆಚ್ಚು ಕಡಿಮೆ 25 ವರ್ಷ ಕಾದನು. ಹಿಬ್ರಿಯ 6:15 ರಲ್ಲಿ ಹೇಳಿದಂತೆ ಅವನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಹೊಂದಿದನು. ನಾವು ಸಹ ತಾಳ್ಮೆಯಿಂದಿದ್ದು ದೇವರ ವಾಗ್ಧಾನವನ್ನು ಹೊಂದಿಕೊಳ್ಳೋಣವೇ?

the-mark-of-a-christian

ಕ್ರೈಸ್ತರ ಒಂದು ಗುರುತು – ಯೋಹಾನ 13:34-35b – ಜನರಿಗೆ ನೀವು ಸಭೆಗೆ ಹೋಗುವುದರಿಂದ ಅಥವಾ ಶಿಲುಬೆಯನ್ನು ಧರಿಸುವುದರಿಂದ ಕ್ರೈಸ್ತರೆಂದು ತಿಳಿಯುವುದಿಲ್ಲ. ನೀವು ಮತ್ತೊಬ್ಬರನ್ನು ಪ್ರೀತಿಸುವುದರ ಮೂಲಕ ಮಾತ್ರ ಅವರಿಗೆ ನೀವು ಕ್ರೈಸ್ತರೆಂದು ತಿಳಿಯುತ್ತದೆ. ಜನರು ನೀವು ಪತ್ನಿಗೆ ನ್ಯಾಯ ತೀರಿಸದಿರುವುದನ್ನು, ನಿಮ್ಮ ಕೋಪವುಳ್ಳ ಸಹೋದರನೊಂದಿಗೆ ತಾಳ್ಮೆಯಿಂದಿರುವುದನ್ನು, ದುರ್ಬಲ ಮತ್ತು ನೋಯಿಸುವ ವ್ಯಕ್ತಿಗೆ ನೀವು ತೋರುವ ಕಾಳಜಿಯನ್ನು, ಅಸೂಯೆ ವ್ಯಕ್ತಿಯೆಡೆಗೆ ನಿಮ್ಮ ಸೌಜನ್ಯತೆ ತೋರುವುದನ್ನು, ಕುಟುಂಬದ ಸದಸ್ಯರಿಂದ ಅವಮಾನ ಭಾರವನ್ನು ಸಂತೋಷದಿಂದ ಹೊರುವುದನ್ನು ನೋಡಿದಾಗ ಜನರಿಗೆ ನೀವು ಕ್ರೈಸ್ತರೆಂದು ತಿಳಿಯುತ್ತದೆ.

how-love-one-another

ಹೇಗೆ ಒಬ್ಬರನ್ನೊಬ್ಬರು ಪ್ರೀತಿಸಬೇಕು? – ಯೋಹಾನ 13:34-35a – ರಲ್ಲಿ ಯೇಸು ತನ್ನ ಪ್ರೀತಿಯನ್ನು ಅನುಭವಿಸಿದರೆ ಮಾತ್ರ ನೀವು ಮತ್ತೊಬ್ಬರನ್ನು ಪ್ರೀತಿಸಲು ಸಾಧ್ಯ ಎಂದು ಹೇಳುತ್ತಾನೆ. ರೋಮ 2:4 ರಲ್ಲಿ ನಮ್ಮ ಮೇಲಿರುವ ಕೆಲವು ದೇವರ ಪ್ರೀತಿಯ ಗುಣಾತಿಶಯಗಳನ್ನು ನಾವು ನೋಡಬಹುದು. ನೀವು ದೇವರ ದಯೆಯ ಅನುಭವವನ್ನು ಪಡೆದಿದ್ದೀರಾ? ನಿಮ್ಮೊಂದಿಗೆ ದೇವರು ಸಹಿಷ್ಣುತೆಯಿಂದ ಇಲ್ಲವೇ? ದೇವರು ನಿಮ್ಮೊಂದಿಗೆ ತಾಳ್ಮೆಯಿಂದ ಇಲ್ಲವೇ? ನಾವು ಸಹ ದಯೆ, ಸಹಿಷ್ಣುತೆ ಮತ್ತು ತಾಳ್ಮೆಯಿಂದ ಇರಬೇಕಾದರೆ ಈ ಎಲ್ಲಾ ಗುಣಗಳನ್ನು ದೇವರಿಂದ ಅನುಭವಿಸಿರಬೇಕು. ಅದು ಟ್ಯಾಂಕಿನಿಂದ ನೀರನ್ನು ಪಡೆದುಕೊಂಡು ಅನೇಕ ಜನರಿಗೆ ತಲುಪಿಸುವ ನಳದ ಹಾಗಿರಬೇಕು.

how-jesus-calls-you

ಯೇಸು ಹೇಗೆ ನಿಮ್ಮನ್ನು ಕರೆಯು್ತತಾನೆ? – ಯೋಹಾನ 13:33 – ಯೇಸು ನಮ್ಮನ್ನು “ಚಿಕ್ಕಮಕ್ಕಳೇ” ಎಂದು ಕರೆಯುತ್ತಾನೆ. ನಮಗೆ ಮಾರ್ಗದರ್ಶನ ಮತ್ತು ಸಹಾಯದ ಅಗತ್ಯವಿರುವುದರಿಂದ ಆತನು ನಮ್ಮನ್ನು “ಚಿಕ್ಕ” ಎಂದು ಕರೆಯುತ್ತಾನೆ. ನಾವು ಆತನ ಕುಟುಂಬದ ಒಂದು ಭಾಗವಾಗಿರುವುದರಿಂದ ಆತನು ನಮ್ಮನ್ನು “ಮಕ್ಕಳೇ” ಎಂದು ಕರೆಯುತ್ತಾನೆ. ಸ್ನೇಹಿತರೇ, ನಮ್ಮ ರಕ್ಷಕನ ಮೃದುತ್ವ ಮತ್ತು ಪ್ರೀತಿಯನ್ನು ನೋಡಿರಿ. ನಾವು ಆತನ ರಾಜ್ಯವನ್ನು ಸೇರಲು ಚಿಕ್ಕ ಮಕ್ಕಳ ಹಾಗೆ ಮಾರ್ಪಡಿರಿ ಎಂದು ಯೇಸು ನಮ್ಮಲ್ಲಿ ಕೇಳಿಕೊಳ್ಳುತ್ತಾನೆ (ಮ್ತತಾಯ 18:3). ನಾವು ಯೇಸುವಿನ ಬಳಿಗೆ ಬರುವಾಗ ನಮ್ಮ ವರ್ತನೆ ಚಿಕ್ಕ ಮಕ್ಕಳ ರೀತಿಯದ್ದಾಗಿರಬೇಕು. ಅದು ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ತನ್ನ ತಾಯಿಯಿಂದ ಆಹಾರ ಸ್ವೀಕರಿಸಲು ಅಗಲವಾಗಿ ಬಾಯಿಯನ್ನು ತೆರೆಯುವ ಮರಿ ಗುಬ್ಬಚ್ಚಿಯ ಹಾಗೆ ಇರಲಿ.

Silhouette of Jesus with Cross over sunset concept for religion, worship, prayer and praise.

ಯೇಸು ದೇವರನ್ನು ಗೌರವಿಸಿದನು – ಯೋಹಾನ 13:31-32 – ಯೇಸು ಶಿಲುಬೆಯ ಮೇಲೆ ಮರಣವನ್ನು ಎದುರಿಸು್ತತಿರುವಾಗಲೂ ಸಹ ದೇವರನ್ನು ಗೌರವಿಸಿದನು (ಮಹಿಮೆಪಡಿಸಿದನು). ನಮ್ಮ ಜೀವಿತದ ಅತ್ಯಂತ ಕಠಿಣ ಸಂದರ್ಭಗಳಲ್ಲೂ ಸಹ ದೇವರು ಗೌರವಿಸಲ್ಪಡುತ್ತಾನೆ. ಉದಾಹರಣೆಗೆ, ತನ್ನ ಕೋಪ ಪಡುವ ಗಂಡನ ಕಷ್ಟಗಳನ್ನು ಸಂತೋಷದಾಯಕ ಕೈಗಳಿಂದ ಸ್ವೀಕರಿಸುವ ಹೆಂಡತಿಯನ್ನು ದೇವರು ಗೌರವಿಸು್ತತಾನೆ. ಯಾವ ಕಠಿಣ ಪರಿಸ್ಥಿತಿ/ವ್ಯಕ್ತಿ ನಿಮ್ಮ ಮುಂದೆ ಇರುವಾಗ ಯಾವುದು/ಯಾರ ದೇವರ ಹೆಸರು ಗೌರವಿಸಲ್ಪಡುತ್ತದೆ? ಯೇಸುವಿನ ಹಾಗೆ, ತೊಂದರೆಗಳ ಸಂದರ್ಭದಲ್ಲಿ ನಮ್ಮ ಆತ್ಮ ದೇವರನ್ನು ಮಹಿಮೆಪಡಿಸುವಂತೆ ಪ್ರಾರ್ಥನೆ ಮಾಡೋಣವೇ? (ಇಬ್ರಿಯ 12:2).

how-satan-works

ಸೈತಾನನು ಹೇಗೆ ಕೆಲಸ ಮಾಡುತ್ತಾನೆ – ಯೋಹಾನ 13:26-30 – ವ27 ರಲ್ಲಿ ನಾವು ನೋಡಿದ ಹಾಗೆ ಯೂದನು ರೊಟ್ಟಿಯನ್ನು ಸ್ವೀಕರಿಸಿದ ನಂತರ ಸೈತಾನನು ಅವನನ್ನು ಪ್ರವೇಶಿಸಿದನು. ಯೇಸುವಿಗೆ ದ್ರೋಹ ಮಾಡಲು ಯೂದನು ಆಗಲೇ ಹಣವನ್ನು ಪಡೆದುಕೊಂಡಿದ್ದನು (ಮತ್ತಾಯ 26:15). ಆದ್ದರಿಂದ ಸೈತಾನನು ಯೂದನ ಹಣದ ಆಸೆಯನ್ನು ಯೇಸುವಿಗೆ ದ್ರೋಹ ಮಾಡಲು ಉಪಯೋಗಿಸಿಕೊಂಡನು. ಈ ದಿನದಲ್ಲೂ ಸಹ “ಹಣದ ಆಸೆ” (ಹಣವಲ್ಲ) ನಮ್ಮ ಮತ್ತು ದೇವರ ನಡುವೆ ಅಗಲುವಿಕೆಯನ್ನು ಉಂಟುಮಾಡುತ್ತದೆ. ಹಣದ ಆಸೆಯ 4 ಅಡ್ಡ ಪರಿಣಾಮಗಳನ್ನು ನೀವು ನೋಡಲು ಬಯಸುವಿರಾ? ಹಾಗಾದರೆ ದಯವಿಟ್ಟು 1 ತೀಮೋಥಿ 6:9,10ನ್ನು ಓದಿರಿ ಮತ್ತು ಈ 4 ಅಡ್ಡಪರಿಣಾಮಗಳನ್ನು ನನಗೆ ಸಂದೇಶ ರೂಪದಲ್ಲಿ ಕಳುಹಿಸಿ.

betraying-jesus

ಯೇಸುವಿಗೆ ದ್ರೋಹ ಮಾಡುವುದು – ಯೋಹಾನ 13:21-25 – ರಲ್ಲಿ ಯೇಸು 3 ವರ್ಷಗಳ ಕಾಲ ತನ್ನ ಜೊತೆಯಲ್ಲಿ ಊಟ ಮಾಡಿದ, ನಡೆದಾಡಿದ ಮತ್ತು ಮಾತನಾಡಿದ ತನ್ನ ಶಿಷ್ಯರಲ್ಲೊಬ್ಬನು ತನಗೆ ದ್ರೋಹ ಮಾಡುವನು ಎಂದು ಹೇಳಿದನು. ವಿಶೇಷವಾಗಿ ನಾವು ಸಹ ಪ್ರಾರ್ಥನೆ ವೇಳೆಯ ನಂತರದಲ್ಲಿ “ಎಷ್ಟು ನಾನು ಅತನನ್ನು ಪ್ರೀತಿಸುತ್ತೇನೆ” ಎಂದು ಹೇಳುವ ಸಮಯಗಳಲ್ಲಿ ನಾವು ಯೇಸುವಿಗೆ ದ್ರೋಹ ಮಾಡಿದಂತಾಗುತ್ತದೆ. ಬಹುಶಃ ಯೇಸು ತನ್ನನ್ನು ಪ್ರೀತಿ ಮಾಡುವ ಜನರಿಂದ ಅತ್ಯಂತ ದ್ರೋಹ ಬಗೆಸಿಕೊಳ್ಳುವ ಏಕೈಕ ವ್ಯಕ್ತಿಯಾಗಿದ್ದಾನೆ. ನೀವು ಮತ್ತು ನಾನು ಯೇಸುವಿನ ಪ್ರೀತಿಯನ್ನು ಅನರ್ಹರಾಗಿ ಸ್ವೀಕರಿಸುವವರಾಗಿದ್ದೇವೆ, ನಮಗೆ ತಿಳಿದಿರುವ ಹಾಗೆ ನಮ್ಮನ್ನು ತಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳುವ ಜನರನ್ನು ಪ್ರೀತಿಸಲು ಬೇಕಾದ ಕೃಪೆಗೋಸ್ಕರ ದೇವರಲ್ಲಿ ಕೇಳೋಣವೇ? (ರೋಮ 5:8).

want-blessing

ನೀವು ಆಶೀರ್ವಾದಗಳನ್ನು ಬಯಸುವಿರಾ? – ಯೋಹಾನ 13:16-20 – ರಲ್ಲಿ ಯೇಸು “ಸಹಜವಾಗಿ ಇತರರ ಪಾದಗಳನ್ನು ತೊಳೆಯುವವರು ಮತ್ತು ಅದನ್ನು ಅರಿತವರು ಆಶೀರ್ವಾದಹೊಂದಿದವರು” ಎಂದು ಹೇಳಿದನು. ಯೇಸು ಇಲ್ಲಿ ಅರಿತುಕೊಳ್ಳುವುದು ಮತ್ತು ಮಾಡುವಿಕೆಯ ನಡುವೆ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾನೆ. ಯೂದನು ತನಗೆ ದ್ರೋಹ ಮಾಡುತ್ತಾನೆ ಎಂದು ತಿಳಿದಿದ್ದರೂ ಸಹ ಯೇಸು ಯೂದನ ಪಾದಗಳನ್ನು ತೊಳೆದನು. ನಿಮ್ಮ ಜೀವಿತದಲ್ಲೂ ಸಹ ನೀವು ಕಷ್ಟಪಡಬೇಕೆಂದು ಬಯಸುವ ಜನರಿರಬಹುದು. ನೀವು ಅವರನ್ನು ಕ್ಷಮಿಸಲು ಮತ್ತು ಅವರಿಗೆ ಅಗತ್ಯವಿ್ದದಲ್ಲಿ ಸಹಾಯ ಮಾಡಲು ಸಿದ್ಧರಿದ್ದೀರಾ? ನೀವು ಹೀಗೆ ಮಾಡುವುದಾದರೆ, ನೀವು ಆಶೀರ್ವಾದ ಹೊಂದಿದವರಾಗುತ್ತೀರಿ. ರೋಮ 12:20,21ನ್ನು ಓದಿರಿ. ಯೇಸುವಿನ ಹಾಗೆ ದೇವರೊಂದಿಗೆ ಸೈತಾನನನ್ನು ಜಯಿಸೋಣ.

wash-like-jesus

ಯೇಸುವಿನ ಹಾಗೆ ತೊಳೆಯಿರಿ – ಯೋಹಾನ 13:12-15b – 2 ಪರಿಸ್ಥಿತಿಗಳು 1) ಯೇಸು ನನ್ನ ಹೊಲಸಾದ ಪಾದಗಳನ್ನು ತೊಳೆದಿದ್ದಾನೆ. 2) ಆತನನ್ನು ನಾನು ಭೋಧಕನು ಮತ್ತು ದೇವರನ್ನಾಗಿ ಪರಿಗಣಿಸಿದ್ದೇನೆ. ಈ 2 ಪರಿಸ್ಥಿತಿಗಳು ನಮ್ಮ ಜೀವಿತದಲ್ಲಿ ನಿಜವಾಗಿರುವುದಾದರೆ ಯೇಸು ಇತರರ ಹೊಲಸಾದ ಪಾದಗಳನ್ನು ತೊಳೆಯಲು ನಮಗೆ ಆಜ್ಞಾಪಿಸುತ್ತಾನೆ. ಅಂದರೆ ನಾವು ನಮ್ಮನ್ನು ಬಡವರೊಂದಿಗೆ, ಅವಿಧ್ಯಾವಂತರೊಂದಿಗೆ ಮತ್ತು ಪಾಪಿಯಾದ ವ್ಯಕ್ತಿಯೊಂದಿಗೆ ಹೋಲಿಸಿಕೊಂಡು ನಮ್ಮ ಬಗ್ಗೆ ಬಹಳವಾಗಿ ಯೋಚಿಸದೆ ಇರುವುದು. ಅಂದರೆ ನಾವು ಯಾವ ವೇಳೆಯಲ್ಲಾದರೂ, ಯಾರಿಗಾದರೂ ಮತ್ತು ಅವರು ಒರಟು ಸ್ವಭಾವದವರಾಗಿದ್ದರೂ ಮತ್ತು ನಮ್ಮನ್ನು ಇಷ್ಟಪಡದಿದ್ದರೂ ಸಹ ಸೇವೆ ಮಾಡಲು ಸಿದ್ಧರಾಗಿರುವುದು. ಏಕೆ? ಏಕೆಂದರೆ ಯೇಸು ಸಹ ನಮಗಾಗಿ ಸೇವೆ ಮಾಡಲು ಬಂದನು ಮತ್ತು ಆತನು ನಮ್ಮ ದೇವರು.

waitingonthelord2

ಬೋಧಕನು ಮತ್ತು ಕರ್ತನು – ಯೋಹಾನ 13:12-15a – ರಲ್ಲಿ ಯೇಸು “ನೀವು ನನ್ನನ್ನು ಬೋಧಕನು ಮತ್ತು ಕರ್ತನು ಎಂದು ಕರೆಯುತ್ತೀರಿ” ಎಂದು ಹೇಳಿದನು. ಯೇಸು ನಮ್ಮ ಭೋಧಕನು ಎಂಬುದರ ಅರ್ಥ ನಾವು ಪ್ರತಿದಿನ ಜೀವನದ ಬಗ್ಗೆ, ನಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಆತನಿಂದ ಕಲಿತುಕೊಳ್ಳುವುದು ಮತ್ತು ಯೇಸು ನಮ್ಮ ಕರ್ತನು ಎಂಬುದರ ಅರ್ಥ ನಮ್ಮ ಜೀವಿತದ ಎಲ್ಲಾ ವಿಷಯಗಳಿಗೆ ಆತನೇ ಯಜಮಾನ ಎಂಬುದಾಗಿದೆ. ನಾವು ಈಗ ಯೋಚಿಸುವುದರ ಮೂಲಕ ಕೆಲವು ಪ್ರಶ್ನೆಗಳಿಗೆ ಉತ್ತರಿಸೋಣ ಮತ್ತು ಸಾಧ್ಯವಾದಲ್ಲಿ ಅವುಗಳನ್ನು ಈ ಕೆಳಗೆ ಬರೆಯೋಣ. ಇತ್ತೀಚೆಗೆ ನೀವು ಯೇಸುವಿನಿಂದ ಏನನ್ನು ಕಲಿತಿದ್ದೀರಿ? ಯೇಸುವೇ ನಿಮ್ಮ ಜೀವಿತದ ಎಲ್ಲಾ ಪ್ರದೇಶಗಳಿಗೆ ಯಜಮಾನ (ದೇವರು) ಆಗಿದ್ದಾರಾ? ನಿಮ್ಮ ಜೀವಿತದ ಕೆಲವು ಪ್ರದೇಶಗಳಿಗೆ ಯೇಸುವಿನ ಬದಲಿಗೆ ನೀವು ಯಜಮಾನರಾಗಿದ್ದೀರಾ?

washed-by-jesus

ಯೇಸುವಿನಿಂದ ತೊಳೆಯಲ್ಪಡಿರಿ – ಯೋಹಾನ 13:8-11 – ರಲ್ಲಿ ಯೇಸು ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲಿಲ್ಲ ಎಂದು ಹೇಳಿದನು. ಪೌಲನ ಹಾಗೆ ನಾವು ಸಹ ಯೇಸುವಿನಿಂದ ತೊಳೆಯಲ್ಪಡಬೇಕು ಮತ್ತು ಪೌಲನ ಹಾಗೆ ಯೇಸುವಿನಿಂದ ತೊಳೆಯಲ್ಪಡಲು ನಾವು ಆತನನ್ನು ಅನುಮತಿಸಬೇಕು. ಯೇಸು ನಮ್ಮ ಎಲ್ಲಾ ಅನೀತಿಯನ್ನು ಶುದ್ಧೀಕರಿಸು್ತತಾನೆ ಎಂದು ಯೋಹಾನನು ನಂತರದಲ್ಲಿ ಬರೆಯುತ್ತಾನೆ. ನಿಮ್ಮಲ್ಲೂ ಸಹ ನಿಮ್ಮನ್ನು ಯೇಸುವಿಗೆ ಒಪ್ಪಿಸಿಕೊಡಲಾಗದಂತಹ ಪಾಪಗಳು ಇರುವ ಭಾವನೆಯಿದ್ದರೆ, ಈ ದಿನವೇ ನಿಮ್ಮನ್ನು ಶುದ್ಧೀಕರಿಸಲು ಯೇಸುವನ್ನು ಕೇಳಿರಿ. ಯೇಸು ತನ್ನ ಶಿಷ್ಯರ ಕಾಲುಗಳನ್ನು ಮುಟ್ಟಿದನು ಮತ್ತು ತೊಳೆದನು. ನಮಗೂ ಸಹ ನಮ್ಮ ಹೃದಯವನ್ನು ಶುದ್ಧೀಕರಿಸಲು ಯೇಸುವಿನ ಗುಣಹೊಂದುವ ಸ್ಪರ್ಶದ ಅಗತ್ಯವಿದೆ.

who-is-wiser

ಯಾರು ಜ್ಞಾನವುಳ್ಳವರು? – ಯೋಹಾನ 13:6-8 – ರಲ್ಲಿ ಪೇತ್ರನು ತನ್ನ ಕಾಲುಗಳನ್ನು ಏಕೆ ಯೇಸು ತೊಳೆಯಬೇಕು ಎಂದು ಪ್ರಶ್ನೆ ಮಾಡಿದನು. ಆದರೆ ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಈಗ ನಿನಗೆ ತಿಳಿಯುವದಿಲ್ಲ; ಆದರೆ ಇನ್ನು ಮೇಲೆ ನಿನಗೆ ತಿಳಿಯುವದು ಎಂದು ಹೇಳಿದನು. ಅದೇ ರೀತಿಯಾಗಿ ನಿಮ್ಮ ಜೀವಿತದಲ್ಲಿ ಏನಾಗುತ್ತಿಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಆದರೆ ಅದಕ್ಕೆ ಉತ್ತರವನ್ನು ಯೇಸು ನಂತರದಲ್ಲಿ ತಿಳಿಸುತ್ತಾನೆ. ಆತನ ಜ್ಞಾನದಲ್ಲಿ ಮಾತ್ರ ನಂಬಿಕೆಯಿಡೋಣ ಮತ್ತು ನಮ್ಮನ್ನು ತೊಳೆಯಲು ಯೇಸುವನ್ನು ಅನುಮತಿಸೋಣ. “ಏಕೆ ದೇವರೇ” ಅಥವಾ “ಇಲ್ಲ ದೇವರೇ” ಎಂದು ಪೇತ್ರನ ಹಾಗೆ ನಾವು ಹೇಳುತ್ತಿದ್ದೇವಾ?. ನಮ್ಮ ಪ್ರಾರ್ಥನೆಯು ಈಗಿರಬೇಕು – ದೇವರೇ, ನೀನು ನನಗಿಂತ ಜ್ಞಾನವುಳ್ಳವನು. ನಿನ್ನ ಯೋಜನೆಯನ್ನು ಮತ್ತು ಸಮಯವನ್ನು ಸ್ವೀಕರಿಸಲು ಮತ್ತು ನಂಬಿಗಸ್ತನಾಗಿರಲು ಸಹಾಯ ಮಾಡು.

want-to-be-great

ದೊಡ್ಡವರಾಗಬೇಕೇ? – ಯೋಹಾನ 13:3-5 – ಶಿಷ್ಯರು ತಮ್ಮಲ್ಲಿ ಯಾರು ದೊಡ್ಡವರು ಎಂದು ವಾದಿಸುತ್ತಿದ್ದರು? ಈ ಲೋಕದಲ್ಲಿ, ದೊಡ್ಡಸ್ತಿಕೆ ಎಂದರೆ ತುಂಬಾ ಹಣ ಸಂಪಾದಿಸುವುದರಲ್ಲಿ ಮತ್ತು ತುಂಬಾ ಜ್ಞಾನವುಳ್ಳವುದರಲ್ಲಿ ಮೊದಲಿಗರಾಗುವುದು. ಆದರೆ ದೇವರ ರಾಜ್ಯದಲ್ಲಿ ಸೇವಕನ ಕಾಲುಗಳನ್ನು ತೊಳೆಯುವ ನಾಯಕನೇ ದೊಡ್ಡವನಾಗಿರುತ್ತಾನೆ. ಅಲ್ಲಿ ಯಾರು ಮೊದಲಿಗರು ಅಥವಾ ದೊಡ್ಡವರೆಂದು ಯೋಚಿಸಲು ಅಥವಾ ಮಾತನಾಡಲು ಸ್ಥಳವಿರುವುದಿಲ್ಲ. ದೊಡ್ಡವರಾಗಬೇಕೆಂದು ಬಯಸುವ ಜನರ ಮಧ್ಯದಲ್ಲಿ ನಾವು ಇದ್ದೇವೆ. ದೇವರು ಮಿಷನರಿಯಾಗಿ ನಮ್ಮನ್ನು ಈ ಲೋಕಕ್ಕೆ ಕಳುಹಿಸಿದ್ದಾನೆ ಆದ್ದರಿಂದ ನಾವು ಮತ್ತೊಬ್ಬರ ಪಾದಗಳನ್ನು ತೊಳೆಯಲು ಸಿದ್ಧರಾಗಿರಬೇಕು.

satan-entered-the-mind

ಸೈತಾನನು ಹೃದಯದಲ್ಲಿ ಪ್ರವೇಶಿಸಿದನು – ಯೋಹಾನ 13:2 – ರಲ್ಲಿ ಹೇಳಿದಂತೆ ಯೇಸುವಿಗೆ ದ್ರೋಹ ಮಾಡಲು ಸೈತಾನನು ಯೂದ ಇಸ್ಕರಿಯೋತನ ಹೃದಯದಲ್ಲಿ ಆಲೋಚನೆಯನ್ನು ಹುಟ್ಟಿಸಿದನು. ಈ ದಿನಗಳಲ್ಲೂ ಸಹ, ಸೈತಾನನು ದುರ್ಬಲ ಮನಸ್ಸುಳ್ಳವರನ್ನು ತನ್ನು ಅನುಕೂಲಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಎಫೆಸ 4:27 ರಲ್ಲಿ ಹೇಳಿದಂತೆ ನಾವು ಕೋಪಪಟ್ಟರೂ ಸಹ ಸೈತಾನನಿಗೆ ಮಾತ್ರ ಅವಕಾಶವನ್ನು ಮಾಡಿಕೊಡಬಾರದು. ನಮ್ಮ ಬಲಯೀನತೆಯ ಮೂಲಕ ಸೈತಾನನು ನಮ್ಮ ಸಂಬಂಧಗಳಲ್ಲಿ ಗೊಂದಲ ಸೃಷ್ಟಿಸಲು ಮತ್ತು ನಮ್ಮ ಹೃದಯದಲ್ಲಿ ಶಾಂತಿಯನ್ನು ನಾಶ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಯಾಕೋಬ 1:20 ರಲ್ಲಿ ಹೇಳಿದಂತೆ “ಮನುಷ್ಯನ ಕೋಪವು ದೇವರ ನೀತಿಯನ್ನು ನಡಿಸುವದಿಲ್ಲ”.

true-love

ನಿಜವಾದ ಪ್ರೀತಿ – ಯೋಹಾನ 13:1 – ಯೇಸು ಅವರನ್ನು ಅಂತ್ಯದವರೆಗೆ ಪ್ರೀತಿಸಿದನು. ಅಂತ್ಯದವರೆಗೆ ಎಂದರೇನು? ಮದುವೆಯ ಪ್ರತಿಜ್ಞೆ ಸಮಯದಲ್ಲಿ “ಸಾವಿನ ತನಕ ನಾವು ಭಾಗಿಗಳಾಗಿರುತ್ತೇವೆ” ಎಂದು ಜೋಡಿಗಳು ಹೇಳುತ್ತಾರೆ. ಆದರೆ ನೀವು ಊಹಿಸಲಾಗದಂತಹ ಕ್ರಿಸ್ತನ ಪ್ರೀತಿ ನಿಮ್ಮ ಮೇಲೆ ನಿರಂತರವಾಗಿದೆ. ಕೀರ್ತನೆ 73:25 ರಲ್ಲಿ ದಾವೀದನು “ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರಿದ್ದಾರೆ? ನಿನ್ನ ಹೊರತಾಗಿ ಭೂಮಿಯಲ್ಲಿ ನಾನು ಅಪೇಕ್ಷಿಸುವವರು ಯಾರೂ ಇಲ್ಲ” ಎಂದು ಹೇಳುತ್ತಾನೆ. ಚಿಂತಿಸುವುದನ್ನು, ಭಯಪಡುವುದನ್ನು, ಸಂದೇಹಪಡುವುದನ್ನು ನಿಲ್ಲಿಸಿ ಕ್ರಿಸ್ತನಲ್ಲಿ ಭರವಸೆಯುಳ್ಳವರಾಗಿರೋಣ. ಏಕೆಂದರೆ ಪ್ರತಿ ಕ್ಷಣದಲ್ಲೂ ಆತನ ಅಪಾರವಾದ ಪ್ರೀತಿ ನಿಮ್ಮನ್ನು ಸುತ್ತುವರಿದಿದೆ (ಎಫೆಸ 2:4, 3:18). ಆತನ ಪ್ರೀತಿಯು ನಮ್ಮನ್ನು ಬದಲಾಯಿಸುತ್ತದೆ.

tongue-that-listens

ಕೇಳಿದವುಗಳನ್ನು ಮಾತನಾಡೋಣ – ಯೋಹಾನ 12:49-50 – ರಲ್ಲಿ ಯೇಸು “ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡುತ್ತೇನೆ” ಎಂದು ಹೇಳಿದನು. ನಾವು ದೇವರಿಂದ ಪಡೆದುಕೊಂಡ ಒಂದು ಅದ್ಭುತ ಕೊಡುಗೆಯಾದ “ನಾಲಿಗೆ” ಯನ್ನು ಹೇಗೆ ಬಳಸುವುದು? ನನ್ನ ನಾಲಿಗೆ ದೇವರ ನಿರ್ದೇಶನವನ್ನು ಕೇಳುತ್ತಿದೆಯಾ, ನಂತರ ನನ್ನ ಮಾತುಗಳು ಸಮಾಧಾನವಾಗಿದೆಯಾ, ಶಾಂತಿಯನ್ನು ತರುತ್ತಿದೆಯಾ ಮತ್ತು ಹರಟೆ ಹೊಡೆಯುವುದನ್ನು ನಿರಾಕರಿಸುತ್ತಿದೆಯಾ ಎಂದು ಅರ್ಥೈಸಿಕೊಳ್ಳಬೇಕು. ನಾವು ದೇವರ ನಿರ್ದೇಶನವನ್ನು ಪಡೆಯುತ್ತಿರುವುದರಿಂದ ಪ್ರವರ್ತಿಸುವಾಗ ನಿಧಾನವಾಗಿ ಮಾತನಾಡಬೇಕು. ನಮ್ಮ ನಾಲಿಗೆಯಿಂದ ದೇವರನ್ನು ಸ್ತೋತ್ರಿಸುವುದು ಮಾತ್ರವಲ್ಲದೆ ಆತನು ತೋರ್ಪಡಿಸಿದ ಮಾತುಗಳನ್ನು ಮಾತನಾಡಬೇಕು. ಈ ದಿನ, ಯಾಕೋಬ 3:5-9 ರಲ್ಲಿ ಸಮಯವನ್ನು ಕಳೆಯುವುದರ ಮೂಲಕ ದೇವರ ಹೇಳಲು ಬಯಸಿದವುಗಳನ್ನು ಕೇಳೋಣವೇ.

words-of-life

ಜೀವ ಮಾತುಗಳು – ಯೋಹಾನ 12:47-48 – ರಲ್ಲಿ ಯೇಸು “ನನ್ನ ಮಾತುಗಳು ಕಡೇ ದಿನದಲ್ಲಿ ತೀರ್ಪು ಮಾಡುವದು” ಎಂದು ಹೇಳಿದನು. ಯೋಹಾನ 6:63 ರಲ್ಲಿ ಯೇಸು ಹೇಳಿದಂತೆ, “ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ”. ಯೇಸುವಿನ ಪ್ರತಿ ಮಾತುಗಳ ಉದ್ದೇಶ ಓದುವುದು, ಕಂಠಪಾಠ, ಅಧ್ಯಯನ ಮತ್ತು ಚರ್ಚಿಸುವುದು ಮಾತ್ರವಲ್ಲದೆ ಅವುಗಳನ್ನು ಹೃದಯದಿಂದ ಪಾಲಿಸಬೇಕು. ಒಬ್ಬ ಅವಿಧ್ಯಾವಂತ ಮನುಷ್ಯ ತನ್ನ ಸಂಬಂಧಿಗಳು ತನ್ನ ಬಲಹೀನತೆಯ ಬಗ್ಗೆ ಮಾತನಾಡುವಾಗ ಕೋಪ ಪಡುವುದಿಲ್ಲವೆಂದು ನಾನು ಗಮನಿಸಿದ್ದೇನೆ. ಏಕೆಂದರೆ ಯೇಸುವಿನ ಮಾತುಗಳು ಅವನ ಹೃದಯದಲ್ಲಿ ಮತ್ತು ವರ್ತನೆಯಲ್ಲಿ ಬೇರೂರಿರುತ್ತವೆ. ದೇವರೇ, ನಾನು ನಿಮ್ಮ ಮಾತುಗಳನ್ನು ಪಾಲಿಸಬೇಕೆಂದು ನನ್ನ ಇಚ್ಛೆಯನ್ನು ನಿಮಗೆ ಒಪ್ಪಿಸಿಕೊಡುತ್ತೇನೆ.

give-what-you-receive

ನೀವು ಪಡೆದುಕೊಂಡದ್ದನ್ನು ತಿರಿಗಿ ನೀಡಿರಿ – ಯೋಹಾನ 12:46 – ರಲ್ಲಿ ಯೇಸು “ನನ್ನಲ್ಲಿ ನಂಬಿಕೆಯಿಟ್ಟ ಯಾವನೂ ಕತ್ತಲೆಯಲ್ಲಿ ಇರುವುದಿಲ್ಲ” ಎಂದು ಹೇಳಿದನು. ಯೇಸುವಿನ ಬೆಳಕು ನನ್ನ ಮೇಲೆ ಪ್ರಕಾಶಿಸದೆ ಹೋಗಿದ್ದರೆ ನಾನು ಕತ್ತಲೆಯಲ್ಲೇ ಉಳಿಯುತ್ತಿದ್ದೆನು. ಉದಾಹರಣೆಗೆ, ನಾನು ಕೆಲವು ಜನರನ್ನು ಕ್ಷಮಿಸದೆ ಹೋದರೆ ನಾನು ಕತ್ತಲೆಯಲ್ಲಿ ಇದ್ದೇನೆಂದು ಅರ್ಥ. ಆದರೆ ನಾನು ಯೇಸುವನ್ನು (ಬೆಳಕು) ನನ್ನ ಜೀವಿತದಲ್ಲಿ ಅನುಮತಿಸಿದಾಗ ನಾನು ಕ್ಷಮಿಸದೆ ಹೇಗೆ ಇರುತ್ತೇನೆ. ಪ್ರತಿದಿನ ದೇವರು ನನ್ನ ಮೇಲೆ ಕನಿಕರ, ಸಮಾನತ್ವ ಮತ್ತು ಸಮಾಧಾನವನ್ನು ತೋರಿಸುತ್ತಿದ್ದಾನೆಂದು ಹೇಗೆ ಮರೆತುಹೋಗುತ್ತೇನೆ. ನಾವು ಪ್ರಾರ್ಥಿಸಿ ರೋಮಾ 2:4 ನ್ನು ಧ್ಯಾನಿಸೋಣ.

look-and-be-saved

ನೋಡಿ ರಕ್ಷಣೆ ಹೊಂದಿರಿ – ಯೋಹಾನ 12:44-45 -ರಲ್ಲಿ ಯೇಸು “ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ನೋಡುತ್ತಾನೆ” ಎಂದು ಹೇಳಿದನು. ಈ ವಚನದಲ್ಲಿ “ನೋಡು” ಎಂದರೆ ಗಮನಿಸು ಅಥವಾ ದಿಟ್ಟಿಸು ಎಂದರ್ಥ. ನೀವು ಯೇಸುವಿನ ಜೀವಿತವನ್ನು ಗಮನಿಸಿದ್ದೀರಾ? ನೀವು ಯೇಸುವನ್ನು ನಂಬುವಾಗ ನಿಮ್ಮ ಬಲಹೀನತೆಯನ್ನು ಆತನ ಬಲದ ಜೊತೆ, ನಿಮ್ಮ ಪಾಪವನ್ನು ಆತನ ನೀತಿಯ ಜೊತೆ, ನಿಮ್ಮ ತೊಂದರೆಗಳನ್ನು ಆತನ ಶಾಂತಿಯ ಜೊತೆ ಬದಲಾಯಿಸಿಕೊಳ್ಳಬಹುದು. ಯೇಶಾಯ 44:22 ರಲ್ಲಿ ಹೇಳಿದಂತೆ, “ನನ್ನ ಕಡೆಗೆ ತಿರಿಗಿಕೋ, ನಾನು ನಿನ್ನನ್ನು ವಿಮೋಚಿಸಿದ್ದೇನೆ”. ಈ ದಿನ ನೀವು ಪ್ರಾರ್ಥಿಸಿ ಮತ್ತು ನಿಮ್ಮನ್ನು ಪರಿಶೀಲಿಸಿಕೊಳ್ಳಿ, ನೀವು ಬಲ, ಶಾಂತಿ ಮತ್ತು ಪಾವಿತ್ರ್ಯತೆಗೋಸ್ಕರ ತಪ್ಪಾದ ಸ್ಥಳಗಳಲ್ಲಿ ಹುಡುಕುತ್ತಿದ್ದೀರಾ?

who-do-you-value-more

ನೀವು ಯಾವುದಕ್ಕೆ ಹೆಚ್ಚಾಗಿ ಮಹತ್ವವನ್ನು ನೀಡುತ್ತೀರಿ? – ಯೋಹಾನ 12:42-43 – ಜನರು ಯೇಸುವನ್ನು ನಿಜವಾಗಿ ಹಿಂಬಾಲಿಸದಿರಲು ಮೂರನೇಯ ಕಾರಣವೇನೆಂದರೆ ಅವರು ಜನರು ಏನೆಂದುಕೊಳ್ಳುತ್ತಾರೆಂದು ಭಯಬೀಳುತ್ತಾರೆ. ಅವರು ಜನರ ಅನುಮತಿಯನ್ನು ಬಯಸುತ್ತಾರೆ (ಕುಟುಂಬ, ಸ್ನೇಹಿತರು, ಸಹದ್ಯೋಗಿಗಳು). ಜನರ ಪ್ರವರ್ತನೆ ನಿಮ್ಮನ್ನು ಯೇಸುವಿನ ಜೊತೆ ಪ್ರೇಮಸಂಬಂಧವನ್ನು ಆನಂದಿಸದಂತೆ ಮಾಡುತ್ತದೆಯೇ? ಇನ್ನೂ ಆಲಸ್ಯ ಮಾಡಬೇಡಿರಿ. ಯೇಸುವಿನ ಜೊತೆ ಮಾತ್ರವೇ ನಿಲ್ಲುವುದಕ್ಕೆ ಇದೇ ಸಮಯ. ಜ್ಞಾನೋಕ್ತಿ 29:25 ರಲ್ಲಿ ಹೇಳಿದಂತೆ, “ಮನುಷ್ಯನ ಭಯವು ಉರುಲನ್ನು ತರುತ್ತದೆ; ಆದರೆ ಕರ್ತನಲ್ಲಿ ಭರವಸವಿಡುವವನು ಕ್ಷೇಮದಿಂದಿರುವನು”.

how-is-your-heart

ನಿಮ್ಮ ಹೃದಯವು ಹೇಗಿದೆ? – ಯೋಹಾನ 12:37-41b – ಜನರು ಯೇಸುವನ್ನು ನಿಜವಾಗಿ ಹಿಂಬಾಲಿಸದಿರಲು ಎರಡನೇಯ ಕಾರಣವೇನೆಂದರೆ ಅವರ ಹೃದಯ ಕಠಿಣವಾಗಿರುತ್ತದೆ. ಕಠಿಣ ಹೃದಯವುಳ್ಳ ಕ್ರೈಸ್ತರು ದೇವರ ಕೃಪೆಯು ತಮ್ಮ ಜೀವಿತದಲ್ಲಿ ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ಉದಾಹರಣೆಗೆ, ಕಠಿಣ ಹೃದಯವುಳ್ಳ ಕ್ರೈಸ್ತರು 20 ವರ್ಷಗಳು ಚರ್ಚ್ ಗೆ ಹೋದರೂ ಸಹ ಕೋಪವನ್ನು ಜಯಿಸಲು ಆಗುವುದಿಲ್ಲ. ಆದರೆ “ಯೇಸುವಿನ ಹೃದಯವುಳ್ಳ ಕ್ರೈಸ್ತರು” ಅಹಂಕಾರ ಮತ್ತು ಕೋಪವನ್ನು ತೊಡೆದುಹಾಕಲು ಪ್ರತಿದಿನ ದೇವರ ಕೃಪೆಯನ್ನು ಪಡೆದುಕೊಳ್ಳುತ್ತಾರೆ. ಹಾಗಾದರೆ ನೀವು ಸ್ವಯಂ ನಿರ್ಮಿತ ಕ್ರೈಸ್ತರಾ ಅಥವಾ ಯೇಸು ನಿರ್ಮಿತ ಕ್ರೈಸ್ತರಾ?

eyes-to-see-god

ದೇವರನ್ನು ನೋಡುವ ಕಣ್ಣುಗಳು – ಯೋಹಾನ 12:37-41 – ಏಕೆ ಜನರು ನಿಜವಾಗಿ ಯೇಸುವನ್ನು ನಂಬುವುದಿಲ್ಲ ಮತ್ತು ಹಿಂಬಾಲಿಸುವುದಿಲ್ಲ ಎಂದು ಯೋಹಾನನು 3 ಕಾರಣಗಳನ್ನು ನೀಡುತ್ತಾನೆ. ಮೊದಲನೆಯ ಕಾರಣವೇನೆಂದರೆ ಅವರು ತಮ್ಮ ಜೀವಿತದಲ್ಲಿ ಯೇಸುವಿನ ಕಾರ್ಯಗಳನ್ನು ಕಂಡಿರುವುದಿಲ್ಲ. ನಿಮ್ಮ ಕಣ್ಣುಗಳು ದೇವರು ಮಾಡಿರುವ ಕಾರ್ಯಗಳನ್ನು ಮತ್ತು ನಿಮ್ಮ ಜೀವಿತದಲ್ಲಿ ದೇವರು ಪ್ರತಿದಿನ ಮಾಡುವ ಕಾರ್ಯಗಳನ್ನು ನೋಡುತ್ತಿವೆಯೇ? ನಾವು ನಮ್ಮ ಜೀವನದ ಬಗ್ಗೆ ಆಷೇಪಣೆಮಾಡುವಾಗ ನಾವು ದೇವರ ಕಾರ್ಯಗಳನ್ನು ಕಂಡಿಲ್ಲ ಎಂದು ಅರ್ಥ. ಉದಾಹರಣೆಗೆ, ದೇವರು ಪ್ರತಿದಿನ ಮನ್ನವನ್ನು ಒದಗಿಸಿದರೂ ಸಹ ಇಸ್ರಾಯೇಲ್ಯರು ಮಾಂಸವನ್ನು ತಿನ್ನಲು ಬಯಸಿದರು. ದೇವರು ತನ್ನನ್ನು ಮತ್ತು ತನ್ನ ಕಾರ್ಯಗಳನ್ನು ನೋಡಲು ನಮ್ಮ ಕಣ್ಣುಗಳನ್ನು ತೆರೆಯಲಿ.

children-of-light

ಬೆಳಕಿನ ಮಕ್ಕಳು – ಯೋಹಾನ 12:36 – ರಲ್ಲಿ ಯೇಸು “ನೀವು ಬೆಳಕಿನ ಮಕ್ಕಳಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ” ಎಂದು ಹೇಳಿದನು. ಯೇಸು ಕ್ರೈಸ್ತರಿಗೆ “ಬೆಳಕಿನ ಮಕ್ಕಳು” ಎಂಬ ಹೆಸರನ್ನು ನೀಡಿದ್ದಾನೆ. ನೀವು ಯೇಸುವಿನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುವಾಗ, ನೀವು ಚಿಂತಿಸದಂತೆ, ಕೆೋಪಗೊಳ್ಳದಂತೆ ಅಥವಾ ನಂಬಿಕೆಯನ್ನು ಕಳೆದುಕೊಳ್ಳದಂತೆ ಕವಲು ಕಾಯುವಿರಿ ಎಂಬುದನ್ನು ಗಮನಿಸಿದ್ದೀರಾ? ಏಕೆಂದರೆ ಯೇಸುವಿನ ಬೆಳಕು ಪ್ರತಿದಿನ ನಿಮ್ಮ ಮೂಲಕ ಹೊಳೆಯುತ್ತಿರುತ್ತದೆ. ಆದರೆ ನಾವು ಯೇಸುವಿನೊಂದಿಗೆ ಅನ್ಯೋನ್ಯವಾಗಿ ಇಲ್ಲದಿರುವಾಗ, ಜೀವಿತವು ಹತಾಶೆಯಿಂದ, ಅಸಂತುಷ್ಟತೆಯಿಂದ ಮತ್ತು ಅಕೃತಜ್ಞತೆಯಿಂದ ಕೂಡಿರುತ್ತದೆ. (1 ಯೋಹಾನ 3:6).

finalcutpro-10-2-3

ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳುತ್ತಿದೆಯೇ? – ಯೋಹಾನ 12:35 – ರಲ್ಲಿ ಯೇಸು “ಕತ್ತಲೆ ನಿಮ್ಮನ್ನು ಮುಸುಕಿಕೊಳ್ಳದಂತೆ ನಿಮಗೆ ಬೆಳಕಿರುವಾಗಲೇ ನಡೆಯಿರಿ” ಎಂದು ಹೇಳಿದನು. ಕತ್ತಲೆಯೆಂಬುದು ನಮ್ಮ ಸುತ್ತಲೂ ಇರುತ್ತದೆ ಮತ್ತು ನಮ್ಮೊಳಗೂ ಸಹ ಇರುತ್ತದೆ. ನಮ್ಮ ಜೀವಿತದಲ್ಲಿ ಕತ್ತಲೆಯಲ್ಲಿರುವ ಗುಪ್ತವಾದ ಪಾಪಗಳನ್ನು ಯೇಸುವಿನ ಬೆಳಕು ಮಾತ್ರ ತೋರಿಸುತ್ತದೆ ಮತ್ತು ಅದನ್ನು ಜಯಿಸಲು ಸಹಾಯಮಾಡುತ್ತದೆ. ಎಫೆಸ 5:8-14 ನ್ನು ಓದುವುದರ ಮೂಲಕ ನಮ್ಮ ಜೀವಿತದಲ್ಲಿ ಯೇಸುವಿನ ಬೆಳಕು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳಬಹುದು. ನಮ್ಮ ಆಂತರಿಕ ಹೋರಾಟಗಳು ಯೇಸುವಿನ ಬೆಳಕನ್ನು ಕಣ್ಮರೆಯಾಗಿಸುತ್ತವೆ. ದೇವರೇ, ನಾನು ನಿಮಗೆ ಬದ್ಧವಾಗಿರಲು ನನ್ನ ಜೀವಿತದಲ್ಲಿನ ತಪ್ಪುಗಳನ್ನು ತೋರಿಸಿಕೊಡು.

jesus-made-his-own

ಯೇಸು ನಮ್ಮನ್ನು ತನ್ನ ಸ್ವಂತವಾಗಿಸಿಕೊಂಡನು – ಯೋಹಾನ 12:31-34 – ರಲ್ಲಿ ಯೇಸು “ನಾನು ಭೂಮಿ (ಶಿಲುಬೆ) ಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರನ್ನೂ ನನ್ನ ಬಳಿಗೆ ಎಳಕೊಳ್ಳುವೆನು” ಎಂದು ಹೇಳಿದನು. ಯೇಸು ಶಿಲುಬೆಯ ಮೂಲಕ ಸಾಯುವ ಉದ್ದೇಶ ನಮ್ಮನ್ನು ತನ್ನೆಡೆಗೆ ಎಳಕೊಳ್ಳುವುದಾಗಿತ್ತು. ನಮ್ಮ ಸ್ವಂತ ಮಾರ್ಗಗಳು ಆರಂಭದಲ್ಲಿ ಆಕರ್ಷಕವಾಗಿರುವಂತೆ ತೋರಬಹುದು ಆದರೆ ಅವು ತೊಂದರೆಯೆಡೆಗೆ ನಡೆಸುತ್ತವೆ ಮತ್ತು ಶಾಂತಿಯ ಕೊರತೆಗೆ ಕಾರಣವಾಗುತ್ತವೆ. ನಾವು ನಮ್ಮ ಎಳೆಯುವಿಕೆಗೆ ಯೇಸುವನ್ನು ಅನುಮತಿಸಬೇಕು ಅಥವಾ ನಮ್ಮ ಸ್ವಂತ ಆಸೆಗಳ ಎಳೆಯುವಿಕೆ ಗುರಿಯಾಗುವುದನ್ನು ಮುಂದುವರಿಸಬೇಕು. ದೇವರೇ, ನೀನು ನಮ್ಮನ್ನು ಸ್ವಂತವಾಗಿಸಿಕೊಂಡ ಶಿಲುಬೆಯ ಕಡೆಗೆ ನೋಡುತ್ತೇನೆ.

whose-glory

ಯಾರ ಮಹಿಮೆ? – ಯೋಹಾನ 12:29-30 – “ದೇವರ ನಾಮ ಮಹಿಮೆಹೊಂದಲಿ ಎಂದು ಪರಲೋಕದಿಂದ ಒಂದು ಧ್ವನಿಯು ಬಂದಿತು. ಆಗ ಯೇಸು ಈ ಧ್ವನಿಯ ಪ್ರಮುಖ ಸತ್ಯವನ್ನು ನೀವು ಅರಿಯಬೇಕೆಂದು ಹೇಳಿದರು – ಕ್ರೈಸ್ತ ಜೀವಿತದ ಒಂದು ಮುಖ್ಯ ಉದ್ದೇಶ ದೇವರು ನಮ್ಮ ಜೀವನದ ಮೂಲಕ ಮಹಿಮೆಹೊಂದುತ್ತಾನೆ ಎಂಬುದಾಗಿದೆ. ನಾನು ಒಂದು ದಿನ ರೂ 100 ಸಂಪಾದನೆ ಮಾಡುವ ಸಂತೋಷದ ಮತ್ತು ತೃಪ್ತಿಯುಳ್ಳ ಮಹಿಳೆಯನ್ನು ಭೇಟಿಯಾಗಿದ್ದೆ. ಆಕೆಯು ನಂಬಿಗಸ್ತಳು ಮತ್ತು ತನ್ನ ನಾಳೆಗೆ ಸಂಪೂರ್ಣವಾಗಿ ದೇವರಲ್ಲಿ ವಿಶ್ವಾಸವಿಟ್ಟಿದ್ದಳು. ನಾವು ಆತನಲ್ಲಿ ತೃಪ್ತಿಪಡುವಾಗ ದೇವರು ಮಹಿಮೆಹೊಂದುತ್ತಾನೆ. ಹಾಗಾದರೆ ದೇವರು ಕೊಟ್ಟಿರುವುದರಲ್ಲಿಯೇ ನಾವು ತೃಪ್ತಿಪಡುವುದರ ಮೂಲಕ ಆತನನ್ನು ಮಹಿಮೆಪಡಿಸೋಣ.

pray-like-jesus

ಯೇಸುವಿನ ಹಾಗೆ ಪ್ರಾರ್ಥಿಸಿರಿ – ಯೋಹಾನ 12:27-28 – ಯೇಸು ದೇವರ ಚಿತ್ತ ಮತ್ತು ದೇವರ ಹೆಸರನ್ನು ಮಹಿಮೆಪಡಿಸಲು ಪ್ರಾರ್ಥಿಸಿದನು. ಆತನು ಶಿಲುಬೆಯ ಕಷ್ಟಗಳಿಗೆ ಒಳಗಾದಾಗಲೂ ಸಹ ಪ್ರಾರ್ಥಿಸಿದನು. ನಮ್ಮ ಪ್ರಾರ್ಥನೆ ಹೇಗಿದೆ? ನಾವು ಕಷ್ಟಗಳಿಗೆ ಒಳಗಾದಾಗ ದೇವರ ಚಿತ್ತ ನಡೆಯಲಿ ಎಂದು ಪ್ರಾರ್ಥಿಸುತ್ತೇವಾ? ದೇವರ ಮಕ್ಕಳಾದ ನಮಗೆ ಎಲ್ಲಾ ಕಾರ್ಯಗಳೂ ದೇವರ ಅನುಮತಿಯ ಮೇರೆಗೆ ನಡೆಯುತ್ತವೆ. ಯೋಬನು ಎಲ್ಲವನ್ನು ಕಳೆದುಕೊಂಡದ್ದು ಮತ್ತು ಪೌಲನು ಅನೇಕ ವೇಳೆ ಹೊಡೆತ ತಿಂದದ್ದು ಮತ್ತು ಜೈಲಿನಲ್ಲಿ ಎಸೆಯಲ್ಪಟ್ಟದ್ದನ್ನು ನೆನಪಿಸಿಕೊಳ್ಳಿ. ಯೇಸುವನ್ನು “ದುಃಖಿತ ಮನುಷ್ಯ” ನೆಂದು ಕರೆದರು ಮತ್ತು ಆತನು ನಿಮ್ಮ ಕಷ್ಟಗಳಿಗೆ ಸಹಾಯಮಾಡುವ ನಿಮ್ಮ ಸ್ನೇಹಿತನಾಗಿದ್ದಾನೆ. (ಯೇಶಾಯ 53:3)

follow-jesus

ಯೇಸುವನ್ನು ಹಿಂಬಾಲಿಸಿರಿ – ಯೋಹಾನ 12:26 – ರಲ್ಲಿ ಯೇಸು “ಯಾವನಾದರೂ ನನ್ನನ್ನು ಸೇವಿಸುವವನಾದರೆ ಅವನು ನನ್ನನ್ನು ಹಿಂಬಾಲಿಸಲಿ” ಎಂದು ಹೇಳಿದನು. ನಿಮ್ಮ ಜೀವಿತದ ಎಲ್ಲಾ ಗಳಿಗೆಯಲ್ಲೂ ಅಂದರೆ – ನೀವು ಶೋಧನೆಗೊಳಪಟ್ಟಾಗ, ಯಾರಾದರು ನಿಮ್ಮನ್ನು ನಿಂದಿಸಿದಾಗ, ಅಶುದ್ಧ ಆಲೋಚನೆಗಳು ಬರುವಾಗಲೂ ಸಹ ಯೇಸುವನ್ನು ಹಿಂಬಾಲಿಸಿರಿ. ಯೇಸುವನ್ನು ಹಿಂಬಾಲಿಸುವುದೆಂದರೆ ಎಲ್ಲಾ ಸಮಯದಲ್ಲೂ ಆತನೊಂದಿಗೆ ಅನ್ಯೋನ್ಯವಾಗಿರುವುದು. ಅಂದರೆ ಇರುವೆಯು ಮತ್ತೊಂದು ಇರುವೆಯನ್ನು ಹಿಂಬಾಲಿಸುವ ಹಾಗೆ. ಅನ್ಯೋನ್ಯವಾಗಿ ಹಿಂಬಾಲಿಸುವವರನ್ನು ತಂದೆಯು ಘನಪಡಿಸುತ್ತಾನೆ ಎಂದು ಯೇಸು ಹೇಳುತ್ತಾನೆ. ನೀವು ಕೃಪೆ ಮತ್ತು ಪ್ರೀತಿಯ ಮಾರ್ಗವನ್ನು ಕಂಡುಕೊಳ್ಳುವಂತೆ ನಾನು ಪ್ರಾರ್ಥಿಸುತ್ತೇನೆ – ಇದು ಯೇಸು ಹೇಳಿರುವ ಮಾರ್ಗವಾಗಿರುವುದರಿಂದ ನಾವೆಲ್ಲರೂ ಅದನ್ನು ಹಿಂಬಾಲಿಸೋಣ.

loss-to-gain-life

ಜೀವಿತವನ್ನು ಹಗೆಮಾಡುವುದು – ಯೋಹಾನ 12:25b – ರಲ್ಲಿ ಯೇಸು “ಯಾರು ಈ ಲೋಕದಲ್ಲಿ ತಮ್ಮ ಜೀವಿತವನ್ನು ಹಗೆಮಾಡುತ್ತಾರೋ ಅವರು ನಿತ್ಯಜೀವವನ್ನು ಪಡೆಯುತ್ತಾರೆ” ಎಂದು ಹೇಳಿದನು. ಇದು ಕ್ರೈಸ್ತ ಜೀವಿತದ ದೊಡ್ಡ ರಹಸ್ಯವಾಗಿದೆ. ಹದ್ದು ನೆಲದ ಮೇಲೆ ಆರಾಮದಾಯಕವಾಗಿ ನಡೆದಾಡುವುದಿಲ್ಲ. ಇದು ವಿಕಾರವಾಗಿ ಮತ್ತು ವಿಚಿತ್ರವಾಗಿರುತ್ತದೆ. ಆದರೆ ಅದು ಆಕಾಶದಲ್ಲಿ ಹಾರಾಡುವಾಗ ಆರಾಮದಾಯಕವಾಗಿರುತ್ತದೆ. ಕೊಲೊಸ್ಸೆ 3:2 ರಲ್ಲಿ ಪೌಲನು “ಮೇಲಿರುವಂಥವುಗಳ ಮೇಲೆ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ” ಎಂದು ಸಲಹೆಯನ್ನು ನೀಡುತ್ತಾನೆ. ಹಾಗಾದರೆ ನೀವು ಲೋಕದಲ್ಲಿನ ವಿಷಯಗಳು ಮತ್ತು ಜನರ ಮೇಲೆ ನಿಮ್ಮ ಮನಸ್ಸನ್ನು ಇಟ್ಟಿದ್ದೀರಾ?

secret-to-a-joyful-life

ಒಂದು ಸಂತೋಷದಾಯಕ ಜೀವನ ರಹಸ್ಯ – ಯೋಹಾನ 12:25 – ನೀವು ಇತರರನ್ನು ಕ್ಷಮಿಸಲು ಸಾಧ್ಯವಾಗುತ್ತಿಲ್ಲವಾ? ನೀವು ಒತ್ತಡಕ್ಕೊಳಗಾಗಿದ್ದೀರಾ? ದೇವರೊಂದಿಗೆ ವೈಯಕ್ತಿಕ ಸಮಯವನ್ನು ಕಳೆಯಲು ಮತ್ತು ಆತನ ವಾಕ್ಯವನ್ನು ಅಧ್ಯಾಯನ ಮಾಡಲು ಆಗುತ್ತಿಲ್ಲವೇ? ಈ ಎಲ್ಲಾ ಹೇಳಿಕೆಗಳನ್ನು ಹೇಳಿದ ಯೇಸು ನಿಮ್ಮ ಸಮಸ್ಯೆಗಳಿಗೆ ಉತ್ತರ ಹೊಂದಿರಬಹುದು. (ಇದನ್ನು ಸತ್ಯವೇದದಲ್ಲಿ ಸುಮಾರು 7 ಬಾರಿ ಉಲ್ಲೇಖಿಸಲಾಗಿದೆ ಆದ್ದರಿಂದ ದಯವಿಟ್ಟು ಈ ವಾಕ್ಯದ್ಲಲಿ ಸ್ವಲ್ಪ ಸಮಯವನ್ನು ಕಳೆಯಿರಿ). ನೀವು ಯೇಸುವಿಗಿಂತ ಹೆಚ್ಚಾಗಿ ಪ್ರೀತಿಸಿದ ವಿಷಯಗಳು ಯಾವುವು? ವಿಷಯಗಳೆಂದರೆ ನಿಮ್ಮ ಅಹಂ, ಕೆಲಸ, ನೋಟ, ಕುಟುಂಬ (ಗಲಾತ್ಯ 5:24). ದೇವರು ನಿಮಗೆ ಹೇರಳವಾದ ಜೀವಿತಕ್ಕೆ ಮಾರ್ಗವನ್ನು ತೋರಿಸುತ್ತಾನೆ ಮತ್ತು ಅದರಲ್ಲಿ ನಿಮ್ಮನ್ನು ನಡೆಸುತ್ತಾನೆ.

want-to-servw-god

ದೇವರ ಸೇವೆ ಮಾಡಲು ಬಯಸುವಿರಾ? – ಯೋಹಾನ 12:24 – ನೀವು ಇತರರಿಗೆ ಆಶೀರ್ವಾದವಾಗಿರಲು ಬಯಸುವುದಾದರೆ ಯೇಸು ಹೇಳಿದ ಹಂತಗಳನ್ನು ಅನುಸರಿಸಿರಿ. ಮೊದಲು ಬೀಜವನ್ನು ಭೂಮಿಗೆ ಹಾಕಲಾಗುತ್ತದೆ. ನಂತರ ಆ ಬೀಜವು ಸತ್ತ ಮೇಲೆ ಬಹಳ ಫಲಗಳನ್ನು ಕೊಡುತ್ತದೆ. ನಾವು ಈ ದಿನಗಳಲ್ಲಿ ರುಚಿನೋಡುವ ಮಾವಿನ ಹಣ್ಣು ಸಹ ಭೂಮಿಗೆ ಬಿದ್ದು, ಸತ್ತು ಮತ್ತು ತಾಳ್ಮೆಯಿಂದ ಫಲವನ್ನು ಕೊಟ್ಟ ಬೀಜದ ಒಂದು ಭಾಗವಾಗಿದೆ. ಉದಾಹರಣೆಗೆ, ದೇವರು ನೀವು ತಗ್ಗಿ ನಡೆಯುತ್ತಿದ್ದೀರಾ ಎಂದು ತಿಳಿಯಲು ನಿಮ್ಮ ಜೀವನದ ಪ್ರಸ್ತುತ ಪರಿಸ್ಥಿತಿಯನ್ನು ಅಥವಾ ಕೆಲವು ಜನರನ್ನು ಬಳಸುತ್ತಿರಬಹುದು. ನಾವು ಸ್ವಾರ್ಥತ್ವದ ವರ್ತನೆಗಳಿಗೆ ಸಾಯದಿದ್ದರೆ ನಾವು ಫಲ (ಸೇವೆ) ಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಮರೆಯದಿರಿ.

why-not-to-fear-copy

ಭಯ ಏಕೆ? – ಯೋಹಾನ 12:12-15– ನಮಗೋಸ್ಕರ ರಾಜನು ಬರುತ್ತಿರುವುದರಿಂದ ನಾವು ಭಯಪಡುವ ಅಗತ್ಯವಿಲ್ಲ. ಆತನು ಹೊಸ ಜೀವಿತವನ್ನು ನೀಡುವ ದೀನತೆಯ ರಾಜ. ಅದು ಉದ್ದೇಶ, ಸಂತೋಷ ಮತ್ತು ಆತನ ಪರಿಶುದ್ಧತೆಯಿಂದ ಕೂಡಿರುವ ಜೀವಿತ. ರಾಜನು ನಮಗೋಸ್ಕರ ಬಂದ ಕಾರಣ, ಇದು ಬಹಳ ಉಲ್ಲಾಸಿಸುವ ಮತ್ತು ಸಂತೋಷದಿಂದ ಕೂಗುವ ಸಮಯ (ಜಕರ್ಯ 9:9). ನೀವು ಯೇಸುವನ್ನು ನಿಮ್ಮ ದೇವರು ಮತ್ತು ರಾಜನನ್ನಾಗಿ ಅಂಗೀಕರಿಸುವಿರಾ? ಹಾಗಾದರೆ ಪ್ರತಿ ಭಯ ಮತ್ತು ಅನುಮಾನಗಳನ್ನು ದೂರತಳ್ಳಿ ದೇವರ ಪ್ರಸನ್ನತೆಯಲ್ಲಿ ಸಂತೋಷದಿಂದ ಕಾಣಿಸಿಕೊಳ್ಳಿರಿ. ಸ್ನೇಹಿತರೇ, ರಾಜನು ನಿಮ್ಮ ಹೃದಯಕ್ಕೆ ಬಂದ ಕಾರಣ ಸಂತೋಷದಿಂದ ಕೂಗಿರಿ.

how-do-you-look-like-copy

ನೀವು ಯಾರ ರೀತಿಯಲ್ಲಿರಲು ಬಯಸುತ್ತೀರಿ? – ಯೋಹಾನ 12:9-11– ಲಾಜರನ ಜೀವಿತವು ಅನೇಕ ಜನರು ಯೇಸುವಿನ ಮೇಲೆ ನಂಬಿಕೆ ಇಡಲು ಪ್ರಬಲ ಸಾಕ್ಷಿಯಾಗಿದೆ. ಈ ದಿನಗಳಲ್ಲಿ ಜನರು ನಿಮ್ಮ ನಡತೆಯ ಮೂಲಕ ಯೇಸು ನಿಮ್ಮಲ್ಲಿದ್ದಾನಾ ಎಂದು ನೋಡುತ್ತಾರೆ. ನಾವು ಒಳ್ಳೆಯ ಕ್ರೈಸ್ತನ ರೀತಿಯಲ್ಲಿ ನಟಿಸಬೇಕಾದ ಅಗತ್ಯವಿಲ್ಲ ಆದರೆ ನಾವು ಯೇಸುವನ್ನು ಹಿಂಬಾಲಿಸುವಾಗ ಯೇಸುವಿನ ರೀತಿಯಲ್ಲಿ ಬದಲಾಗುತ್ತೇವೆ. ಒಂದು ಮರವು ಫಲವನ್ನು ಕೊಡಲು ಕಠಿಣವಾಗಿ ಪ್ರಯತ್ನಿಸುವುದಿಲ್ಲ. ಅದು ಉತ್ತಮ ಮಣ್ಣಿನಲ್ಲಿ ಬೇರೂರಿದಾಗ, ಸೂರ್ಯನಿಂದ ಮತ್ತು ನೀರಿನಿಂದ ಪೌಷ್ಟಿಕತೆಯನ್ನು ಪಡೆದಾಗ ಮರವು ಸ್ವಯಂಚಾಲಿತವಾಗಿ ಹಣ್ಣನ್ನು ಉತ್ಪಾದಿಸುತ್ತದೆ. ಸ್ನೇಹಿತರೇ, ಯೇಸು “ನನ್ನ ಸಾಕ್ಷಿಗಳು” ಎಂದು ನಿಮ್ಮನ್ನು ಕರೆಯುತ್ತಾನೆ (ಅಪೋ 1:8).

Image processed by CodeCarvings Piczard ### FREE Community Edition ### on 2016-09-29 07:07:26Z | http://piczard.com | http://codecarvings.com

ಯೇಸುವಿಗೋಸ್ಕರ ವಿನಿಯೋಗಿಸಿರಿ – ಯೋಹಾನ 12:7-8 – ಮರಿಯಳು ತನ್ನ 11 ತಿಂಗಳ ಸಂಬಳವನ್ನು ಯೇಸುವಿನ ಪಾದಗಳಿಗೆ ಹಚ್ಚಿದ ತೈಲಕ್ಕೋಸ್ಕರ ವ್ಯರ್ಥ ಮಾಡಿದಳೆಂದು ಶಿಷ್ಯರು ಭಾವಿಸಿದರು. ಆದರೆ ಯೇಸು ಎಲ್ಲೆಲ್ಲಿ ಸುವಾರ್ತೆಯು ಸಾರಲ್ಪಡುವದೋ ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದು ಸಹ ಹೇಳಲ್ಪಡುವುದೆಂದು ಹೇಳಿದನು (ಮತ್ತಾಯ 26:13). ನೀವು ಯಾವ ರೀತಿ ಯೇಸುವಿನ ಮೇಲೆ ಭಕ್ತಿಯನ್ನು ತೋರಿಸುತ್ತೀರಿ? ವೈಯಕ್ತಿಕವಾಗಿ ಯೇಸುವಿನ ಜೊತೆ ಸಮಯವನ್ನು ಕಳೆಯದ ಕ್ರೈಸ್ತರು ಕೈಯಲ್ಲಿ ಒದ್ದಾಡುವ ಮೀನಿನ ಹಾಗೆ. ಅದು ತುಂಬಾ ಸಮಯ ಬದುಕುವುದಿಲ್ಲ. ಮರಿಯಳು ತನ್ನ ಕೈಲಾದದ್ದನ್ನು ಮಾಡಿದಳು (ಮಾರ್ಕ 14:8). ಆದೇ ರೀತಿ ನಾವು ಸಹ ನಮ್ಮ ಸಮಯದಲ್ಲಿ ಮತ್ತು ಜೀವಿತದಲ್ಲಿ ಏನ್ನನಾದರೂ ಮಾಡುತ್ತೀವೆಂದು ನೋಡಲು ಯೇಸು ಕಾಯುತ್ತಿದ್ದಾರೆ.

whats-your-intention

ನಿಮ್ಮ ಉದ್ದೇಶ ಏನು? – ಯೋಹಾನ 12:4 -6 – ಇಸ್ಕರಿಯೋತ ಯೂದನು ಬಡವರಿಗೋಸ್ಕರ ಚಿಂತಿಸುವವನ ಹಾಗೆ ಮಾತನಾಡಿದನು ಆದರೆ ಅವನು ಹಣವನ್ನು ಕದಿಯಲು ಆಲೋಚಿಸಿದನು. ದೇವರ ಮಕ್ಕಳಾದ ನಮ್ಮ ಉದ್ದೇಶ ಮತ್ತು ಮಾತುಗಳು ಸಹ ಒಂದೇ ರೀತಿಯಾಗಿ ಇರುತ್ತವೆ. ನಾವು ಯಾರಿಗಾದರೂ ಸಹಾಯ ಮಾಡಿ ತಿರುಗಿ ಏನನ್ನಾದರೂ ಎದುರು ನೋಡಿದರೆ ನಾವು ತಪ್ಪು ಉದ್ದೇಶದಿಂದ ಸಹಾಯ ಮಾಡುತ್ತಿದ್ದೇವೆಂದು ಅದರ ಅರ್ಥ (ಲೂಕ 6:34,35). ಉದಾಹರಣೆಗೆ, ರಾಜಕೀಯ ವ್ಯಕ್ತಿಗಳು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ ಆದರೆ ಆವರ ಉದ್ದೇಶಗಳು ನಮಗೆ ತಿಳಿದಿರುತ್ತವೆ. ನಮ್ಮ ಪ್ರೀತಿ ಶುದ್ಧ ಹೃದಯದಿಂದ ಇರಬೇಕು ಮತ್ತು ನಮ್ಮ ಮಾತುಗಳು ಕೃಪೆಯಿಂದ ತುಂಬಿರಬೇಕು (ಜ್ಞಾನೋಕ್ತಿ 22:11). ಆಮೆನ್.

give-god-your-best-copy

ದೇವರಿಗೆ ಉತ್ತಮವಾದದನ್ನು ನೀಡಿರಿ – ಯೋಹಾನ 12:1-3 – ಮರಿಯಳು ಬಹು ಬೆಲೆಯುಳ್ಳ ತೈಲವನ್ನು ಯೇಸುವಿನ ಪಾದಗಳಿಗೆ ಹಚ್ಚಿದಳು. ಯೇಸುವಿಗೆ ಬೆಲೆಯುಳ್ಳದ್ದನ್ನು ನೀಡುವುದೇ ಆಕೆಯ ಧ್ಯಾನವಾಗಿತ್ತು. ಆದರೆ ನೀವು ಯಾವ ಬೆಲೆಯುಳ್ಳದ್ದನ್ನು ಯೇಸುವಿಗೆ ಸಲ್ಲಿಸಲು ಬಯಸುವಿರಿ? ನಿಮ್ಮ ಪೂರ್ಣಹೃದಯದಿಂದ ಯೇಸುವನ್ನು ಹಿಂಬಾಲಿಸಿರಿ. ನಿಮ್ಮ ಉತ್ತಮ ಸಮಯವನ್ನು ಆತನಿಗೆ ನೀಡಿರಿ ಮತ್ತು ನಿಮ್ಮ ಜೀವಿತದ ಉತ್ತಮ ವರ್ಷಗಳನ್ನು ಆತನ ಸೇವೆಗೋಸ್ಕರ ನೀಡಿರಿ. ನಿಮ್ಮ ಬೆಲೆಯುಳ್ಳ ಸಮಯ, ಶಕ್ತಿ, ಹಣ ಮತ್ತು ಸ್ನೇಹಿತರಿದ್ದರೂ ಸಹ ನೀವು ದೇವರನ್ನು ಮತ್ತು ಮನುಷ್ಯರನ್ನು ಪ್ರೀತಿಸಿರಿ. ನಮ್ಮನ್ನು ನಾವು ತಿರಸ್ಕರಿಸಿಕೊಂಡು ಕ್ರಿಸ್ತನನ್ನು ಹಿಂಬಾಲಿಸದೆ ಹೋದರೆ ನಾವು ನಿಜವಾದ ಶಿಷ್ಯರಾಗಲು ಸಾಧ್ಯವಿಲ್ಲ (ಲೂಕ 9:23-25).

spiritual-attacks-copy

ಆತ್ಮೀಕ ದಾಳಿ – ಯೋಹಾನ 11:47-57 – ಯೇಸು ಲಾಜರನನ್ನು ಮರಣದಿಂದ ಎಬ್ಬಿಸಿದ ತಕ್ಷಣ ನಾಯಕರು ಮತ್ತು ಜನರು ಆತನನ್ನು ಬಂಧಿಸಲು, ಸಾರ್ವಜನಿಕವಾಗಿ ಅವಮಾನಿಸಲು ಮತ್ತು ಕೊಲ್ಲಲು ಪ್ರಯತ್ನಿಸಿದರು. ನೀವು ಹೃದಯಪೂರ್ವಕವಾಗಿ ಯೇಸುವನ್ನು ಹಿಂಬಾಲಿಸಲು ನಿರ್ಧಾರ ಕೈಗೊಂಡಾಗ, ಶೋಧನೆ ಮತ್ತು ಹೋರಾಟದ ಸಮಯ ಇದೆಯೆಂದು ನೀವು ಗಮನಿಸಿದ್ದೀರಾ. ಯೇಸುವನ್ನು ವಿರೋಧಿಸಿದ ಅದೇ ಶತ್ರು ಈ ದಿನ ಸಹ ಕೆಲಸ ಮಾಡುತ್ತಿದ್ದಾನೆ. ಆದರೆ ಸ್ನೇಹಿತರೇ ಸಂತೋಷಿಸಿರಿ, ನಮ್ಮ ಸಂಗಡ ಇರುವವನು ಲೋಕದಲ್ಲಿರುವವನಿಗಿಂತ ದೊಡ್ಡವನು. ದೇವರೇ ನಿಮಗೆ ಧನ್ಯವಾದಗಳು!!

Dramatic religious photo illustration of Good Friday and Easter Sunday Morning reflecting a prayerful moment of silence with a silhoutted person bowing his head, a warm sunrise rises over a foggy lake, and three crosses on a hill reflected in the water as well.

ಹೆಚ್ಚು ಅದ್ಭುತಕಾರ್ಯಗಳನ್ನು ನೋಡಲು ಪಶ್ಚಾತ್ತಾಪಪಡಿರಿ – ಯೋಹಾನ 11:41-46 – ಯೇಸು ಸತ್ತು ಹೋದ ಲಾಜರನನ್ನು ಎಬ್ಬಿಸಿದ್ದರಿಂದ ಜನರು ಆತನನ್ನು ನಂಬಿದರು(ವ42). ಮತ್ತಾಯ 11:20 ರಲ್ಲಿ ಯೇಸು ತಮ್ಮ ಜೀವಿತಗಳಲ್ಲಿ ಅದ್ಭುತಗಳ ಅನುಭವವನ್ನು ಪಡೆದು ಪಶ್ಚಾತ್ತಾಪ ಪಡದ ಜನರನ್ನು ಕಂಡು ಅಸಮಧಾನಗೊಂಡನು. ನಿಮ್ಮ ಜೀವಿತಗಳಲ್ಲಿ ದೇವರನ್ನು ಆರಾಧಿಸುವುದರ ಮೂಲಕ ಪ್ರತಿ ಕಾರ್ಯದಲ್ಲೂ ಪಶ್ಚಾತ್ತಾಪವನ್ನು ಅನುಸರಿಸಿರಿ. ಯೇಸುವಿನ ಅದ್ಭುತ ಕಾರ್ಯಗಳನ್ನು ನಿಮ್ಮ ಜೀವಿತದ ಅನುಮತಿಗೋಸ್ಕರ ತೆಗೆದುಕೊಳ್ಳಬೇಡಿರಿ. ಈ ದಿನ ನಾವು ಸ್ಪಲ್ಪ ಸಮಯ ಪ್ರಾರ್ಥನೆಯಲ್ಲಿ ಕಳೆಯುವುದರ ಮೂಲಕ ನಮ್ಮ ಜೀವಿತದಲ್ಲಿ ದೇವರಿಗೆ ಒಪ್ಪಿಸಿಕೊಡಬೇಕಾದ ಪ್ರದೇಶಗಳನ್ನು ಕಂಡುಕೊಂಡು ಅವುಗಳಿಗೋಸ್ಕರ ಪಶ್ಚಾತ್ತಾಪ ಪಡೋಣವೇ?

believe-to-see-glory

ನಂಬುವದಾದರೆ ಮಹಿಮೆಯನ್ನು ನೋಡುವಿರಿ – ಯೋಹಾನ 11:38-40 – ರಲ್ಲಿ ಯೇಸು “ನೀನು ನಂಬುವದಾದರೆ ದೇವರ ಮಹಿಮೆಯನ್ನು ನೋಡುವಿ” ಎಂದು ಹೇಳಿದನು. ಸಮಾಧಿಯಲ್ಲಿ ಕೆಟ್ಟ ವಾಸನೆ ಇದ್ದದ್ದರಿಂದ ಮಾರ್ಥಳಿಗೆ ಸಮಾಧಿಗೆ ಒಳಗೊಂಡ ಕಲ್ಲನ್ನು ಸರಿಸಲು ಇಷ್ಟವಿರಲಿಲ್ಲ. ಯೇಸುವಿನಲ್ಲಿ ನಂಬಿಕೆಯಿಡುವುದೆಂದರೆ ಯಾವುದೇ ಕಾರಣಗಳನ್ನು ನೀಡದೆ ಆತನು ಹೇಳುವ ಎಲ್ಲಾ ಕಾರ್ಯಗಳನ್ನು ಮಾಡುವುದು. ಆದ್ದರಿಂದ ನೀವು ಸಹ ನಂಬಿ ಆತನ ಕಾರ್ಯಗಳನ್ನು ಮಾಡುವುದಾದರೆ ನಿಮ್ಮ ಜೀವಿತದಲ್ಲಿ ದೇವರ ಮಹಿಮೆಯನ್ನು ಕಾಣಬಹುದು. ನೀವು ಅದನ್ನು ಮಾಡದೆ ಹೋದರೆ ನಿಮ್ಮ ಜೀವಿತದಲ್ಲಿ ದೇವರ ಮಹಿಮೆಯನ್ನು ಕಾಣಲು ಸಾಧ್ಯವಿಲ್ಲ. ಸ್ನೇಹಿತರೇ, ನಿಮ್ಮ ಜೀವಿತದಲ್ಲೇನಾದರೂ ಕಲ್ಲನ್ನು ಸರಿಸಬೇಕಾದ ಅಗತ್ಯವಿದೆಯಾ? ನೀವು ಪ್ರಾಮಾಣಿಕವಾಗಿ ಮತ್ತು ಪಶ್ಚಾತ್ತಾಪಪಟ್ಟು ಆತನನ್ನು ಹುಡುಕುವಾಗ ದೇವರು ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾನೆ.

god-knows-why

ಏಕೆ ದೇವರಿಗೆ ತಿಳಿದಿದೆ – ಯೋಹಾನ 11:36-38 – ರಲ್ಲಿ ಜನರು “ಯೇಸು ಲಾಜರನನ್ನು ಸಾಯದ ಹಾಗೆ ಮಾಡಲಾರದೆ ಇದ್ದನೇ”? ಎಂದು ಪ್ರಶ್ನಿಸಿದರು. ನಮಗೆ ನಮ್ಮ ಜ್ಞಾನ ಮತ್ತು ತಿಳುವಳಿಕೆ ಸೀಮಿತ ಎಂದು ಗೊತ್ತಿದ್ದರೂ ಸಹ, ಜನರು ಅನುಮಾನ ಮತ್ತು ಕಷ್ಟದ ಸಮಯದಲ್ಲಿ ದೇವರ ಜ್ಞಾನವನ್ನು ಪ್ರಶ್ನೆ ಮಾಡುತ್ತಾರೆ. ನಮ್ಮ ಆಲೋಚನೆ ಮತ್ತು ದೇವರ ಆಲೋಚನೆ ನಡುವಿನ ವ್ಯತ್ಯಾಸ ಸ್ವರ್ಗ ಮತ್ತು ಭೂಮಿಯ ನಡುವೆ ಇರುವ ದೂರ (ಯೇಶಾಯ 55:8,9). ಪ್ರೀತಿಯ ದೇವರ ಮಕ್ಕಳೇ, ನಿಮ್ಮ ಜೀವಿತದಲ್ಲಿ ಏನಾದರೂ ನಡೆದರೆ ಅದು ದೇವರ ಅಪರಿಮಿತ ಜ್ಞಾನದ ಅನುಮತಿಯಿಂದಲೇ ನಡೆಯುತ್ತದೆ. ಆದ್ದರಿಂದ ಆತನ ಜ್ಞಾನದಲ್ಲಿ ನಂಬಿಕೆಯಿಡೋಣ.

jesus-wept

ಯೇಸು ಕಣ್ಣೀರು ಬಿಟ್ಟನು – ಯೋಹಾನ 11:33-35 – ಮರಿಯಳು ಮತ್ತು ಇತರರು ಲಾಜರನನ್ನು ನೆನಪಿಸಿಕೊಂಡು ಅಳುವುದನ್ನು ಕಂಡು ಯೇಸು ಕಣ್ಣೀರು ಬಿಟ್ಟನು. ನಮ್ಮ ನೋವುಗಳ ನರಳುವ ಧ್ವನಿಯನ್ನು ಕೇಳುವ ಒಂದು ಹೃದಯ – ಇದೇ ಯೇಸುವಿನ ಹೃದಯ. ಜೀವನದಲ್ಲಿ ನಾವು ಸಂತೋಷ ಮತ್ತು ನೋವುಗಳನ್ನು ಅನುಭವಿಸುತ್ತಿರುತ್ತೇವೆ. ಆದರೆ ನೋವುಗಳು ನಮ್ಮನ್ನು ಪರಮ ಒಬ್ಬಂಟಿಯನ್ನಾಗಿ ಮಾಡುತ್ತದೆ. ಸ್ನೇಹಿತರೇ, ನಿಮ್ಮ ನೋವುಗಳಲ್ಲಿ ಎಂದಿಗೂ ನೀವು ಒಬ್ಬಂಟಿಯಾಗಿರುವುದಿಲ್ಲ. ಯೇಸುವಿನ ಶಾಂತಿ ನಿಮ್ಮ ಹೃದಯದಲ್ಲಿ ಇಳಿದು ನೋವನ್ನು ದೂರ ಮಾಡುವಂತೆ ನಾನು ಪ್ರಾರ್ಥಿಸುತ್ತೇನೆ. ಈ ಶಾಂತಿ ಯಾವುದೇ ವ್ಯಕ್ತಿ, ವಸ್ತು ಅಥವಾ ಅನುಭವ ನೀಡುವುದಿಲ್ಲ. ಯೋಹಾನ 14:27 – ಈ ವಚನವನ್ನು ಓದಿರಿ.

feet-of-jesus

ಯೇಸುವಿನ ಪಾದ – ಯೋಹಾನ 11:28-32 – ಆಕೆಯು ಅಳುವದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಾಳೆಂದು ಜನರು ಭಾವಿಸಿದರು. ಆದರೆ ಆಕೆ ಓಡಿ ಬಂದು ಯೇಸುವಿನ ಪಾಗಳಿಗೆ ಬಿದ್ದಳು. ಸಮಾಧಿಯು ನಮಗೆ ಉತ್ತರವನ್ನು ಒದಗಿಸಲು ಸಾಧ್ಯವಿಲ್ಲ ಮತ್ತು ಇದು ಕೇವಲ ಹಳೆಯ ನೆನಪುಗಳನ್ನು ಮತ್ತು ಕಣ್ಣೀರನ್ನು ತರುತ್ತದೆ. ಆದರೆ ನಾವು ಯೇಸುವಿನ ಪಾದಗಳ ಅಡಿಯಲ್ಲಿರುವಾಗ, ನಾವು ಸಮಾಧಾನ ಮತ್ತು ಹೊಸ ಜೀವಿತವನ್ನು ಪಡೆಯಬಹುದು. ಎಲ್ಲಿ ನೀವು ಸಮಾಧಾನವನ್ನು ಹುಡುಕಲು ಪ್ರಯತ್ನಿಸುತ್ತೀರಿ? ಸ್ನೇಹಿತರಲ್ಲಿ ಅಥವಾ ಮಾಧ್ಯಮದಲ್ಲಾ?. ಇಲ್ಲ, ಎಲ್ಲಾ ಸಮಯಗಳಲ್ಲೂ ನಾವು ಯೇಸುವಿನ ಪಾದಗಳಲ್ಲಿ ಬೀಳೋಣ – ತೊಂದರೆಗಿಂತ ಮುಂಚೆ, ತೊಂದರೆಯ ನಡುವೆ ಮತ್ತು ತೊಂದರೆ ಇಲ್ಲದಿರುವಾಗ. ಆತನು ಸಮಾಧಿಯಾಗಿರದೆ, ನಮ್ಮ ಜೀವನದ ನಂಬಿಕೆಯಾಗಿದ್ದಾನೆ.

life-exchange

ಬದಲಾವಣೆಯ ಜೀವಿತ – ಯೋಹಾನ 11:25-27 – ಯೇಸು ನಿಮಗೆ ಜೀವನ ಬದಲಾವಣೆಯ ಪ್ರಶ್ನೆಯನ್ನು ಕೇಳುತ್ತಾನೆ – “ಯಾವನಾದರೂ ಬದುಕುತ್ತಾ ನನ್ನಲ್ಲಿ ನಂಬಿಕೆಯಿಡುವದಾದರೆ ಅವನು ಎಂದಿಗೂ ಸಾಯುವದಿಲ್ಲ. ನೀವು ಇದನ್ನು ನಂಬುತ್ತೀರಾ?” ನೀವು ಇದಕ್ಕೆ “ಸರಿ” ಎನ್ನುವುದಾದರೆ, ನಾನು ನಿಮಗೆ ಇನ್ನೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ಕ್ರಿಸ್ತನಲ್ಲಿ ಜೀವಿಸಲು ಸಿದ್ಧರಿದ್ದೀರಾ? ಕ್ರಿಸ್ತನಲ್ಲಿ ಜೀವಿಸುವುದು ಎಂದರೆ ನಮ್ಮ ಗುರಿಗಳನ್ನು ಯೇಸುವಿನ ಗುರಿಗಳಾಗಿ, ನನ್ನ ಅಭಿಲಾಷೆಯನ್ನು ಆತನ ಅಭಿಲಾಷೆಯಾಗಿ, ನನ್ನ ಸೀಮಿತ ಪ್ರೀತಿಯನ್ನು ಆತನ ಅಪರಿಮಿತ ಪ್ರೀತಿಯಾಗಿ, ನನ್ನ ದುಖಃವನ್ನು ಆತನ ಶಾಂತಿಯಾಗಿ, ನನ್ನ ಭಯವನ್ನು ಆತನ ಭರವಸೆಯಾಗಿ ಬದಲಾಯಿಸುವುದು. ಸ್ನೇಹಿತರೇ, ಈ ದಿನವೇ ಹೊಸ ಜೀವಿತವನ್ನು ಆರಂಭಿಸಿರಿ.

regrets

ಚಿಂತಿಸುತ್ತಿದ್ದೀರಾ? – ಯೋಹಾನ 11:17-24 – ಮಾರ್ಥಳು ಮತ್ತು ಮರಿಯಳು (ವ 32) ರಲ್ಲಿ “ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದು ಹೇಳಿದರು. ಜನರು ದೇವರಿಗೆ “ಏಕೆ ಈಗೆ ದೇವರೇ?” ಅಥವಾ “ಏಕೆ ಹಾಗೆ ದೇವರೇ?” ಎಂದು ಪ್ರಶ್ನಿಸುತ್ತಾರೆ. ಆದರೆ ನಂಬಿಕೆಯಲ್ಲಿ ಜೀವಿಸುವ ಕ್ರೈಸ್ತರು ಹಾಗೆ ದೇವರಿಗೆ ಪ್ರಶ್ನೆ ಮಾಡುವುದಿಲ್ಲ. ಅವರು ಪ್ರತಿ ಕ್ಷಣದಲ್ಲೂ ದೇವರ ಯೋಜನೆಯನ್ನು ಸ್ವೀಕರಿಸಿ ವಿಧೇಯತ್ವದಲ್ಲಿ ನಡೆಯುತ್ತಿರುತ್ತಾರೆ. ಕಳೆದುಹೋದ ವಿಷಯಗಳ ಮೇಲೆ ದೇವರಿಗೆ ಪ್ರಶ್ನೆ ಮಾಡುವುದನ್ನು ನಿಲ್ಲಿಸಿ ಮತ್ತು ಯೇಸುವಿನ ನಾಮದಲ್ಲಿ ವಿಶ್ವಾಸದಿಂದ ಹೆಜ್ಜೆಯಿಡೋಣ. ಸ್ನೇಹಿತರೇ, ನಿಮ್ಮ ಯೋಜನೆಯ ಮೇಲೆ ನಂಬಿಕೆಯಿಡದೆ, ನಿಮ್ಮ ಜೀವಿತಕ್ಕಿರುವ ದೇವರ ಯೋಜನೆಯ ಮೇಲೆ ನಂಬಿಕೆಯಿಡಿರಿ.

vessel-for-god-to-use

ದೇವರು ಉಪಯೋಗಿಸುವ ಪಾತ್ರೆ – ಯೋಹಾನ 11:11-16 – ರಲ್ಲಿ ಯೇಸು “ಲಾಜರನು ಸತ್ತಿದ್ದಾನೆ, ನೀವು ನಂಬು ವಂತೆ ನಿಮಗೋಸ್ಕರ ನಾನು ಅಲ್ಲಿ ಇಲ್ಲದಿರುವದಕ್ಕೆ ಸಂತೋಷಪಡುತ್ತೇನೆ” ಎಂದು ಹೇಳಿದನು. ದೇವರು ಲಾಜರನ ಜೀವಿತ ಮತ್ತು ಮರಣವನ್ನು ತನ್ನ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡನು. ದೇವರ ಮಹಿಮೆಗೋಸ್ಕರ ಆತನು ನಿಮ್ಮನ್ನು ಉಪಯೋಗಿಸಿಕೊಳ್ಳಲು ಸಿದ್ಧರಿದ್ದೀರಾ ಮತ್ತು ಅದನ್ನು ಇಷ್ಟಪಡುತ್ತೀರಾ? ದೇವರಿಗೆ ಸಂಪೂರ್ಣವಾಗಿ ಶರಣಾಗುವ ಮತ್ತು ತನ್ನ ಜೀವಿತ ಏನೂ ಇಲ್ಲ ಎನ್ನುವ ಜನರನ್ನು ಮಾತ್ರ ಆತನು ಉಪಯೋಗಿಸಿಕೊಳ್ಳುತ್ತಾನೆ (ಪ್ರಕಟಣೆ 12:11). ನಿಮ್ಮ ಕಣ್ಣುಗಳು, ಕೈಗಳು, ಕಾಲುಗಳು, ಶಿಕ್ಷಣ, ಕೆಲಸ ಮತ್ತು ಹಣ – ಈ ಎಲ್ಲವೂ ದೇವರಿಗೆ ಸೇರಿದೆ ಎಂದು ಆತನ ಬಳಿ ಹೇಳಿ. ದೇವರೇ, ನೀವು ಬಯಸುವ ಹಾಗೆ ನನ್ನನ್ನು ಉಪಯೋಗಿಸಿರಿ.

follow-jesus

ಯೇಸುವನ್ನು ಹಿಂಬಾಲಿಸಿರಿ – ಯೋಹಾನ 11:7-10 – ಯೇಸು ತನ್ನ ಮೇಲೆ ಕಲ್ಲೆಸೆಯುವ ಜನರಿರುವ ಪಟ್ಟಣಕ್ಕೆ ಹೋಗುವುದ್ನನ್ನು ತಿಳಿದ ಶಿಷ್ಯರು ಗಾಬರು ಪಟ್ಟರು. ಈ ದಿನಗಳಲ್ಲಿಯೂ ಸಹ ನಾವು ಅನಿಶ್ಚಿತತೆ ಮತ್ತು ವೇದನೆಯ ಮಾರ್ಗವನ್ನು ಆರಿಸಿಕೊಳ್ಳಬೇಕೆಂದು ಯೇಸು ಬಯಸುತ್ತಾನೆ. ಇದನ್ನು ಕೇಳಿ ನಾವು ಗಾಬರಿ ಮತ್ತು ಆಶ್ಚರ್ಯ ಪಡಬಹುದು. ದೇವರು ಪೂರ್ಣ ಯೋಜನೆಯನ್ನು ತೋರಿಸುವುದಿಲ್ಲ ಆದರೆ ಆತನು ನಾವು ನಂಬಿಕೆಯಲ್ಲಿ ಒಂದು ಹೆಜ್ಜೆಯನ್ನು ತೆಗೆದುಕೊಳ್ಳಬೇಕೆಂದು ಬಯಸುತ್ತಾನೆ. ಒಂದು ವೇಳೆ ಶಿಷ್ಯರು ಯೇಸುವಿನ ಜೊತೆಯಲ್ಲಿ ಹೋಗದಿದ್ದಲ್ಲಿ ಅವರು ಅದ್ಭುತವನ್ನು ನೋಡಲು ಆಗುತ್ತಿರಲಿಲ್ಲ. ನಿಮ್ಮ ಅಪನಂಬಿಕೆಯಿಂದ ಮನಸಾಂತರ ಹೊಂದಿ ಮತ್ತು ಸಂಪೂರ್ಣವಾಗಿ ಯೇಸುವಿಗೆ ಬದ್ಧರಾಗಿರಿ. ಸ್ನೇಹಿತರೇ ಹೋಗಿ, ಆತನು ಏನನ್ನು ಮಾಡಲು ಬಯಸುತ್ತಾನೋ ಅದನ್ನೇ ಮಾಡಿರಿ.

why-delay

ಏಕೆ ಅಲಸ್ಯ? ಯೋಹಾನ 11:4-6 – ಯೇಸುವಿಗೆ ಲಾಜರನು ಅಸ್ವಸ್ಥನಾಗಿದ್ದಾನೆ ಎಂದು ತಿಳಿದರೂ ಸಹ ಏಕೆ ಅವನನ್ನು ಸಂಧಿಸಲು 2 ದಿನಗಳವರೆಗೆ ಅಲಸ್ಯ ತೋರಿದನು? ನಮಗೆ ಈ ರೀತಿಯ ಪ್ರಶ್ನೆಗಳು ಸಿಗಬಹುದು – ಏಕೆ ನನ್ನ ಕಾಯಿಲೆ ವಾಸಿಯಾಗಲಿಲ್ಲ? ಯಾವಾಗ ನಾನು ಈ ಕಷ್ಟದಿಂದ ಹೊರಬರುತ್ತೇನೆ?. ಇಲ್ಲಿ ಲಾಜರನ ಅನಾರೋಗ್ಯ ಮತ್ತು ಮರಣ ದೇವರ ಮಹಿಮೆಗೋಸ್ಕರ ಬಂದದ್ದಾಗಿದೆ. ದೇವರು ನಿಮ್ಮ ನೋವು ಮತ್ತು ವೇದನೆಗಳ ಮೂಲಕ ಮಹಿಮೆ ಹೊಂದುತ್ತಾನೆಂದು ಒಪ್ಪಿಕೊಳ್ಳಲು ನೀವು ಸಿದ್ಧರಿದ್ದೀರಾ? ಇದು ಅರ್ಥವಿಲ್ಲದ್ದಾಗಿ ನಿಮಗೆ ಅನ್ನಿಸಬಹುದು ಆದರೆ ದೇವರ ಆಲೋಚನೆ ಯಾವಾಗಲೂ ನಮ್ಮ ಆಲೋಚನೆಗಿಂತ ಉನ್ನತವಾದದ್ದು. ಯೇಸು ನಿಮಗೆ ಸ್ವಸ್ಥತೆ ಮತ್ತು ಆದರಣೆಯನ್ನು ನೀಡುತ್ತಾನೆ. ಆಮೆನ್.

who-is-your-first-aid-copy

ನಿಮ್ಮ ಪ್ರಾರ್ಥಮಿಕ ಚಿಕಿತ್ಸೆ ಯಾರು? – ಯೋಹಾನ 11:1-3 – ಇಲ್ಲಿ ನಾವು ಲಾಜರನ ಅಕ್ಕ “ನೀನು ಪ್ರೀತಿಮಾಡುತ್ತಿರುವವನು ಅಸ್ವಸ್ಥನಾಗಿದ್ದಾನೆ” ಎಂಬ ವರ್ತಮಾನವನ್ನು ಯೇಸುವಿಗೆ ಕಳುಹಿಸಿದಳು. ಯೇಸು ಲಾಜರನನ್ನು ಪ್ರೀತಿಸಿದನು ಆದರೆ ದೇವರು ಅನಾರೋಗ್ಯವನ್ನು ಅನುಮತಿಸಿದರು. ಆ ಸಹೋದರಿಯ ಮೊದಲ ಪ್ರತಿಕ್ರಿಯೆ ಯೇಸುವಿಗೆ ಅನಾರೋಗ್ಯದ ಬಗ್ಗೆ ತಿಳಿಸುವುದಾಗಿತ್ತು. ನಿಮ್ಮ ಅನಾರೋಗ್ಯ ಅಥವಾ ನಿಮ್ಮ ದೇಹದ ಸಮಸ್ಯೆಯ ನಿಮ್ಮ ಮೊದಲ ಪ್ರತಿಕ್ರಿಯೆ ಏನು? ನೀವು ಕಷ್ಟದಲ್ಲಿರುವಾಗ, ಮೊದಲು ಕ್ರಿಸ್ತನಿಗೆ ಮತ್ತು ಆತನ ಚಿತ್ತಕ್ಕೆ ಬದ್ಧತೆಯುಳ್ಳವರಾಗಿರಿ. ಒಮ್ಮೆ ನೀವು ಕ್ರಿಸ್ತನಿಗೆ ಒಪ್ಪಿಸಿಕೊಡುವಾಗ, ಆತನು ನಿಮ್ಮಲ್ಲಿ ಕ್ರಿಯೆ ಮಾಡುತ್ತಾನೆ ಮತ್ತು ಸೂಕ್ತವಾದದನ್ನೇ ಅನುಮತಿಸುತ್ತಾನೆಂದು ನಿಮಗೆ ತಿಳಿಯುತ್ತದೆ.

are-you-fully-in-copy

ನೀವು ಸಂಪೂರ್ಣವಾಗಿ ಒಳಗಿದ್ದೀರಾ? – ಯೋಹಾನ 10:39-42 – ಯೇಸು ಸಂದೇಹಪಡುವವರಿಂದ ದೂರ ಹೊರಟು ತನ್ನನ್ನು ನಂಬುವ ಜನರ ಬಳಿಗೆ ಹೋದನು. ನಮ್ಮ ಜೀವಿತವನ್ನು ಸಂಪೂರ್ಣವಾಗಿ ಸಮರ್ಪಿಸದಿದ್ದರೆ ಆತನ ಕ್ರಿಯೆಗಳನ್ನು ಅನುಭವಿಸಲು ಆಗುವುದಿಲ್ಲ. ನಮ್ಮ ಅವಿಶ್ವಾಸದಿಂದ ಯೇಸು ನಮ್ಮಿಂದ ದೂರವಾಗಿದ್ದಾರೆಂದು ಭಾವಿಸುತ್ತೇವೆ. ಸ್ನೇಹಿತರೇ, ನೀವು ನಂಬುವುದಾದರೆ ಯೇಸು ನಿಮ್ಮ ಸಮೀಪದಲ್ಲಿಯೇ ಇದ್ದಾರೆ. ನಿಮ್ಮ ಸಂದೇಹಗಳನ್ನು ದೂರ ತಳ್ಳಿ ಯೇಸುವಿನ ಸಮೀಪಕ್ಕೆ ಬನ್ನಿರಿ. ನೀವು ಯೇಸುವನ್ನು ನಂಬುವುದಾದರೆ, ಅದು ನಿಮ್ಮ ಹೃದಯಪೂರ್ವಕವಾಗಿರಬೇಕು. ರಸ್ತೆಯ ಮಧ್ಯದಲ್ಲಿ ನಿಲ್ಲಬೇಡಿರಿ. “ಸಮಸ್ತವೂ ಯೇಸು” ಅಥವಾ “ಸಮಸ್ತವೂ ಸ್ವಯಂ” ಇರಬೇಕೇ ಹೊರತು ಮಧ್ಯದಲ್ಲಿರಬೇಕಡಿರಿ.

work-of-god-inside-you

ನಿಮ್ಮೊಳಗೆ ದೇವರ ಕಾರ್ಯಗಳು ನಡೆಯುತ್ತವೆ – ಯೋಹಾನ 10:35-38 – ರಲ್ಲಿ ಯೇಸು ತನ್ನ ಕಾರ್ಯಗಳನ್ನು ನಂಬಲು ಹೇಳಿದನು. ಯೋಹಾನ 14:10 ರಲ್ಲಿ ಯೇಸು “ತನ್ನಲ್ಲಿ ವಾಸಿಸುತ್ತಿರುವ ತಂದೆಯು ಮಾಡಿದ ಕಾರ್ಯಗಳೇ ನನ್ನಿಂದ ಹೊರಬರುತ್ತವೆ” ಎಂದು ಹೇಳಿದನು. ನಾವು ಸಹ ಯೇಸುವಿನ ಅದೇ ಜೀವನವನ್ನು ಬಯಸೋಣವೇ? ಪವಿತ್ರಾತ್ಮನು ನಮ್ಮಲ್ಲಿ ತನ್ನ ಕಾರ್ಯಗಳನ್ನು ಮಾಡುವಾಗ ನಾವು ಅದಕ್ಕೆ ವಿಧೇಯರಾಗಬೇಕು. ಉದಾಹರಣೆಗೆ, ನೀವು ಕಠಿಣ ಪರಿಸ್ಥಿತಿಯಲ್ಲಿರುವಾಗ ನೀವು ನಿಮ್ಮ ಯೋಚನೆಯಂತೆ ಮಾಡುವ ಬದಲಿಗೆ ಅದನ್ನು ದೇವರಿಗೆ ಒಪ್ಪಿಸುಕೊಡುವಾಗ ಪವಿತ್ರಾತ್ಮನು ನಿಮ್ಮನ್ನು ನಡೆಸುತ್ತಾನೆ. ಹಾಗಾದರೆ ನೀವು ನಂಬಿಕೆಯನ್ನಿಟ್ಟು ನಿಮ್ಮ ಜೀವಿತದಲ್ಲಿ ಪವಿತ್ರಾತ್ಮನ ಕಾರ್ಯಗಳನ್ನು ಅನುಮತಿಸುವಿರಾ?

dont-search-at-wrong-places

ತಪ್ಪು ಸ್ಥಳಗಳಲ್ಲಿ ಹುಡುಕಬೇಡಿರಿ – ಯೋಹಾನ 10:31-34 – ಜನರಿಗೆ ಯೇಸು ದೇವರ ಹಾಗೆ ಕಾಣದಿದ್ದರಿಂದ ಅವರು ಆತನನ್ನು ಕೊಲ್ಲುವದಕ್ಕಾಗಿ ಕಲ್ಲುಗಳನ್ನು ತಕ್ಕೊಂಡರು. ಯೇಶಾಯ 53:2 ರಲ್ಲಿ ಹೇಳಿದಂತೆ, ಯೇಸು ಜನರ ಕಣ್ಣುಗಳಿಗೆ ಆಕರ್ಷಕವಾಗಿ ಕಾಣದಿದ್ದರಿಂದ ಆತನು ಅವರಿಂದ ತಿರಸ್ಕರಿಸಲ್ಪಟ್ಟನು. ಅನೇಕ ವೇಳೆ, ನಾವು ದೇವರನ್ನು ಆರಾಧಿಸಲು ಮತ್ತು ಕೊಂಡಾಡಲು ಸರಿಯಾದ ಮನಸ್ಥಿತಿ, ಸಂಗೀತ ಮತ್ತು ದೊಡ್ಡ ಸಭೆಗಳನ್ನು ಹುಡುಕುತ್ತೇವೆ. ನಿಮ್ಮ ದೈಹಿಕ ಭಾವಗಳಿಂದ ದೇವರನ್ನು ಆರಾಧಿಸಬೇಡಿರಿ. ನೀವು ನಿಮ್ಮ ಸ್ವಂತ ಕಲ್ಪನೆಯ ಪ್ರಕಾರ ದೇವರನ್ನು ನೋಡುತ್ತೀರಾ? ಮತ್ತಾಯ 6: 5,6 – ಇದು ದೇವರು ನಿಮ್ಮನ್ನು ನೋಡುವ ಸ್ಥಳವಾಗಿದೆ.

life-that-never-dies

ಜೀವಿತ ಎಂದಿಗೂ ಮರಣ ಹೊಂದುವುದಿಲ್ಲ – ಯೋಹಾನ 10:22-30 – ಯೇಸು ಕೊಡುವ ಜೀವಿತವನ್ನು ಸ್ವೀಕರಿಸುವವರು ಎಂದಿಗೂ ನಾಶವಾಗುವುದಿಲ್ಲ. ದಿನ ಕಳೆದಂತೆ ಮನುಷ್ಯನ ದೇಹದ ಆಯಸ್ಸು ಹೆಚ್ಚುತ್ತಲಿರುತ್ತದೆ ಮತ್ತು ಅದನ್ನು ಯಾರೂ ತಡೆಯಲು ಆಗುವುದಿಲ್ಲ. ಆದರೆ ಯೇಸು ನಮ್ಮ ಆತ್ಮಕ್ಕೆ ಕೊಡುವ ಜೀವಿತ ಎಂದಿಗೂ ಮರಣ ಹೊಂದುವುದಿಲ್ಲ. ಆತನ ಕೈಯಿಂದ ನಮ್ಮ ಜೀವಿತವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಸ್ನೇಹಿತರೇ, ಇದು ಯೇಸು ನಿಮಗೆ ಕೊಟ್ಟ ಒಂದು ವಾಗ್ಧಾನ ಮತ್ತು ಇದು ಯಾರೋ ಹೇಳಿದ ಮಾತುಗಳಲ್ಲ. ಈ ದಿನ ನಿಮ್ಮ ಆತ್ಮಕ್ಕೆ ವಿಶ್ರಾಂತಿಯನ್ನು ನೀಡಿರಿ, ಏಕೆಂದರೆ ಅದು ಯೇಸುವಿನ ಕೈಯಲ್ಲಿ ಇದೆ. ಅದು ಯಾವಾಗಲೂ ಯೇಸುವಿನ ಕೈಯಲ್ಲೇ ಇರುತ್ತದೆ. ಓಹ್, ಎಂತಹ ವೈಭವಯುತ ನೈಜತೆ.

jesus-laid-down-his-life

ಯೇಸು ತನ್ನ ಜೀವಿತವನ್ನು ನಮಗೋಸ್ಕರ ಸಮರ್ಪಿಸಿದನು – ಯೋಹಾನ 10:14-21 – “ಸಮರ್ಪಿಸುವುದು” ಎನ್ನುವುದರ ಅರ್ಥವೇನು? ಯೇಸು ಜನರನ್ನು ಸಂಧಿಸಲು ನಡೆದುಕೊಂದು ಹೋದನೇ ವಿನಹಃ ಜನರು ತನ್ನ ಬಳಿಗೆ ಬರಬೇಕೆಂದು ನಿರೀಕ್ಷಿಸಲಿಲ್ಲ. ಜನರು ದೇವರ ರಾಜ್ಯದ ಬಗ್ಗೆ ತಿಳಿದುಕೊಳ್ಳಬೇಕೆಂದು ಯೇಸು ಸ್ವಲ್ಪ ಹೊತ್ತು ಮಾತ್ರ ನಿದ್ದೆ ಮಾಡಿದನು. ಆತನು ಒಬ್ಬ ಮಹಿಳೆಯನ್ನು ಭೇಟಿ ಮಾಡಿ ಆಕೆಗೆ ಸಮಾಧಾನವನ್ನು ನೀಡಲು100 ಕಿ.ಮೀ ನಡೆದುಕೊಂದು ಹೋದನು. ಆತನು ಇವುಗಳನೆಲ್ಲಾ ಪ್ರೀತಿ ಮತ್ತು ಸಂತೋಷದಿಂದ ಮಾಡಿದನು. ನಾವು ಇನ್ನೂ ನಮ್ಮ ಸ್ವಂತ ಆಸಕ್ತಿ ಮತ್ತು ಜೀವನವನ್ನೇ ಬಯಸುತ್ತಿರುವುದರಿಂದ “ನಾನು ಯೇಸುವನ್ನು ಪ್ರೀತಿಸುತ್ತೇನೆ” ಎಂದು ಹೇಳಲು ಆಗುವುದಿಲ್ಲ. ನಮ್ಮ ಜೀವಿತವನ್ನು ಇತರರಿಗೋಸ್ಕರ ಸಮರ್ಪಿಸಿದ ಉದಾಹರಣೆಗಳೇನಾದರೂ ಇದ್ದರೆ ನನಗೆ 7022779911ಗೆ ಸಂದೇಶವನ್ನು ಕಳುಹಿಸಿ.

who-owns-you

ನಿಮ್ಮ ಯಜಮಾನ ಯಾರು? – ಯೋಹಾನ 10:12-13 – ಒಳ್ಳೆಯ ಕುರುಬನಾದ ಯೇಸು, ಕುರಿಗಳಿಗೆ(ನಮಗೆ) ಯಜಮಾನನಾಗಿದ್ದಾನೆ. ನಾವು ಯೇಸುವಿನ ಮಾಲೀಕತ್ವದ ಅಧೀನದಲ್ಲಿರುವಾಗ, ಆತನು ತನ್ನ ಪ್ರಾಣವನ್ನು ಕೊಟ್ಟು ನಮ್ಮನ್ನು ಕಾಪಾಡುತ್ತಾನೆ. ಆದರೆ ಯೇಸುವನ್ನು ಬಿಟ್ಟು ಬೇರೆ ಯಾರಾದರೂ ಸಹ ನಾವು ಕಷ್ಟದ ಸಮಯದಲ್ಲಿರುವಾಗ ನಮ್ಮನ್ನು ಬಿಟ್ಟು ದೂರ ಹೋಗುತ್ತಾರೆ. ನಿಮ್ಮನ್ನು ಯಾರಾದರೂ ಅಥವಾ ಯಾವುದಾದರೂ ನಿಯಂತ್ರಿಸುತ್ತಿದೆಯಾ? ಅದು ನಿಮ್ಮನ್ನು ರಕ್ಷಿಸುವುದಿಲ್ಲ ಆದರೆ ಯೇಸು ರಕ್ಷಿಸುತ್ತಾನೆ. ಈ ದಿನದಲ್ಲಿ ನೀವು ಈ ಸತ್ಯವನ್ನು ಕಲಿತುಕೊಂಡಿದ್ದೀರೆಂದು ನಂಬುತ್ತೇನೆ. ಯೇಸುವನ್ನು ನಿಮ್ಮ ಆತ್ಮದ ಕುರುಬನನ್ನಾಗಿ ಮತ್ತು ಯಜಮಾನನ್ನಾಗಿ ಅನುಮತಿಸಿರಿ. ನಿಮ್ಮ ಸತ್ಯವೇದವನ್ನು ತೆರೆದು ಈ ವಾಕ್ಯವನ್ನು ಓದಿರಿ 1ಕೊರಿಂಥ 6:19,20.

jesus-the-good-shepherd

ಯೇಸು ಒಳ್ಳೆಯ ಕುರುಬನು – ಯೋಹಾನ 10:11 – ಯೇಸು ನಮಗೆ ಒಳ್ಳೆಯ ಕುರುಬನಾಗಿದ್ದಾನೆ. ಒಬ್ಬ ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಾನೆ. ನೀವು ಗಮನಿಸಿದ್ದೀರಾ, ಈ ಭಾಗದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದರ ಬಗ್ಗೆ ಯೇಸು 5 ಬಾರಿ ಹೇಳಿದ್ದಾನೆ? ನಮಗೆ ನಿತ್ಯಜೀವವನ್ನು ಕೊಡಲು ಯೇಸು ತನ್ನ ಪ್ರಾಣವನ್ನು ಕೊಟ್ಟನು. ಶತ್ರುವು ಕದಿಯಲಾಗದ ಅಥವಾ ನಾಶಪಡಿಸಲಾಗದ ಒಂದು ಜೀವಿತ. ನಮಗೆ ಅರ್ಹತೆ ಇಲ್ಲದಿದ್ದರೂ ನಿತ್ಯಜೀವವು ಯೇಸುವನ್ನು ಅನುಸರಿಸುವ ಪ್ರತಿಯೊಬ್ಬರಿಗೂ ಸಹ ಕೊಡಲ್ಪಟ್ಟ ಒಂದು ವರ. 2 ಕೊರಿಂಥ 5:15 ನ್ನು ಗಮನವಿಟ್ಟು ನೋಡಿರಿ ಮತ್ತು ನಿಮ್ಮ ಆಲೋಚನೆಗಳನ್ನು ನನಗೆ ತಿಳಿಸಿ.

receive-the-life

ಜೀವಿತನ್ನು ಸ್ವೀಕರಿಸಿರಿ – ಯೋಹಾನ 10:7-10 – ಕುರಿಗಳ(ನಾವು) ಬಳಿಗೆ ಬರುವ ಇಬ್ಬರನ್ನು ಇಲ್ಲಿ ನಾವು ನೋಡಬಹುದು. ಒಬ್ಬರು ಕಳ್ಳ ಮತ್ತು ಮತ್ತೊಬ್ಬರು ಒಳ್ಳೆಯ ಕುರುಬನು(ಯೇಸು). ಕಳ್ಳನು ನಮ್ಮ ಸಂತೋಷವನ್ನು ಕದಿಯಲು, ನಮ್ಮನ್ನು ದ್ವೇಷಿಸುವವರನ್ನಾಗಿ ಮಾಡಲು ಮತ್ತು ನಮ್ಮ ಸಂಬಂಧಗಳನ್ನು ನಾಶಮಾಡಲು ಬರುತ್ತಾನೆ. ಆದರೆ ಯೇಸು ಒಡೆದುಹೋದದ್ದನ್ನು ಸರಿಪಡಿಸಲು ಮತ್ತು ನಮಗೆ ಪ್ರೀತಿ, ಸ್ವಾತಂತ್ರ ಮತ್ತು ಉದ್ದೇಶ ಪೂರ್ವಕವಾಗಿರುವ ಒಂದು ವಿಸ್ತಾರವಾದ ಜೀವಿತವನ್ನು ನೀಡಲು ಬರುತ್ತಾನೆ. ಚಿಂತೆ, ಅನುಮಾನ ಮತ್ತು ಭಯದಿಂದ ದೂರವಾಗಿರುವ ಒಂದು ಜೀವಿತ. ಸ್ನೇಹಿತರೇ, ಈ ದಿನವೇ ಬಂದು ಯೇಸು ಕೊಡುವ ಜೀವಿತವನ್ನು ತೆಗೆದುಕೊಳ್ಳಿರಿ. ನೀವು ಮಾತಾಡುವುದಕ್ಕೆ ಅಥವಾ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳುವುದಕ್ಕೆ ನನ್ನನ್ನು ಸಂಪರ್ಕಿಸಿ.

whose-voice-do-you-hear

ನಿಮಗೆ ಯಾರ ಸ್ವರ ಕೇಳುತ್ತದೆ? – ಯೋಹಾನ 10:4-6 – ನಾವು (ಕುರಿಗಳು) ಯೇಸುವನ್ನು (ಕುರುಬ) ಹಿಂಬಾಲಿಸುತ್ತೇವೆ, ಏಕೆಂದರೆ ಆತನ ಸ್ವರ ನಮಗೆ ತಿಳಿದಿದೆ. ನಿಮ್ಮ ಕ್ರೈಸ್ತ ಜೀವಿತದ ನಡತೆಯಲ್ಲಿ ನೀವು ಯೇಸುವಿನ ಸ್ವರವನ್ನು ಬಿಟ್ಟು ಬೇರೆ ಸ್ವರದಿಂದ ದೂರವಾಗಿ ಹೋಗುತ್ತಿದ್ದೀರಾ? ಅಥವಾ ನೀವು ಸುಳ್ಳು-ಕುರುಬನನ್ನು ಇಷ್ಟಪಟ್ಟು ಅವನನ್ನು ಹಿಂಬಾಲಿಸುತ್ತಿದ್ದೀರಾ? ಕೆಲವು ಉದಾಹರಣೆಗಳು 1) ಲೋಕದ ಜನರಿಂದ ಜೀವಿತದ ಮಾರ್ಗದರ್ಶನವನ್ನು ಪಡೆಯುವುದು ಯೇಸುವಿನ ಸ್ವರವಲ್ಲ. 2) ನಮ್ಮ ಜೀವನದ ಗುರಿಗಳನ್ನು ನಿಗದಿಪಡಿಸುವುದಕ್ಕೆ ಇತರರ ಜೀವಿತದ ಮೇಲೆ ಆಧಾರವಾಗಿದ್ದರೆ ನೀವು ನಿಮ್ಮ ಜೀವನದ ಯೇಸುವಿನ ಅನನ್ಯ ಯೋಜನೆಯನ್ನು ತಿರಸ್ಕರಿಸುತ್ತಿರುವಿರಿ.

jesus-knows-and-leads

ಯೇಸುವಿಗೆ ತಿಳಿದಿದೆ ಮತ್ತು ನಿಮ್ಮನ್ನು ನಡೆಸುತ್ತಾನೆ – ಯೋಹಾನ 10:1-3 – ಇಲ್ಲಿ, ಯೇಸು ನಮ್ಮನ್ನು ಕುರಿಗಳಿಗೆ ಮತ್ತು ತನ್ನನ್ನು ಕುರುಬನಿಗೆ ಹೋಲಿಸಿದ್ದಾನೆ. ಈ ವಚನಗಳಲ್ಲಿ 2 ಸತ್ಯಗಳನ್ನು ನಾವು ಕಲಿತುಕೊಳ್ಳಬಹುದು – 1) ಯೇಸುವಿಗೆ ನಿಮ್ಮ ಹೆಸರು ತಿಳಿದಿದೆ – ಆತನಿಗೆ ನಿಮ್ಮ ವ್ಯಕ್ತಿತ್ವವು ತಿಳಿದಿದೆ ಮತ್ತು ಆತನಿಗೆ ನಿಮ್ಮ ಬಗ್ಗೆ ನಿಮಗಿಂತ ಚೆನ್ನಾಗಿ ತಿಳಿದಿದೆ. ಆತನು ನಿಮ್ಮ ಜೊತೆ ಹತ್ತಿರದ ಅನ್ಯೋನ್ಯತೆಯಿಂದಿರಲು ಬಯಸುತ್ತಾನೆ. 2) ಯೇಸು ನಿಮ್ಮನ್ನು ನಡೆಸುತ್ತಾನೆ – ನೀವು ನಿಮ್ಮ ಈ ಜೀವಿತದಿಂದ ಬೇಸೆತ್ತು ಹೋಗಿದ್ದೀರಾ? ನೀವು ನಿಮ್ಮ ಇಷ್ಟದಂತೆ ನಡೆಯುತ್ತಿಲ್ಲ ಬದಲಿಗೆ ಯೇಸು ನಿಮ್ಮನ್ನು ನಡೆಸುತ್ತಿದ್ದಾನೆ. ನೀವು ನಿಮ್ಮ ಜೀವಿತದ ನಿಯಂತ್ರಣವನ್ನು ಯೇಸುವಿಗೆ ಒಪ್ಪಿಸುವಿರಾ? ಏಕೆಂದರೆ ಆತನು ನಿಮಗೆ ಅತ್ಯುತ್ತಮವಾದದ್ದನ್ನು ಮಾತ್ರ ಮಾಡುತ್ತಾನೆ.

blind-need-direction

ಕುರುಡರಿಗೆ ಮಾರ್ಗದರ್ಶನದ ಅಗತ್ಯವಿದೆ – ಯೋಹಾನ 9:40-41 – ರಲ್ಲಿ ಯೇಸು “ನಾವು ನೋಡುತ್ತೇವೆಂದು ನೀವು ಹೇಳುವದರಿಂದ, ನಿಮ್ಮ ಪಾಪವು ಉಳಿದಿದೆ” ಎಂದು ಹೇಳಿದರು. ಏಕೆ ನಮ್ಮ ಆಂತರಿಕ ಹೋರಾಟಕ್ಕೆ ಯಾವುದೇ ಕೊನೆಯಿಲ್ಲ? ಯೇಸು ಹೇಳಿದ ಹಾಗೆ, ನಮಗೆ ಎಲ್ಲಾ ತಿಳಿದಿದೆ (ನೋಡುತ್ತೇವೆ) ಎಂದು ಹೇಳುವಾಗ ಕೇವಲ ಬೇರೆ ಜನರು ಮಾತ್ರ ಬದಲಾಗುತ್ತಾರೆ. ಆದರೆ ಮಾರ್ಗದರ್ಶನ ಪಡೆಯುವ ಕುರುಡನ ರೀತಿಯಲ್ಲಿ ನಾವು ಯೇಸುವಿನ ಬಳಿಗೆ ಬರುವಾಗ, ನಾವು ನಮ್ಮ ಆಂತರಿಕ ಹೋರಾಟವಾದ ಕೋಪ, ಹೊಟ್ಟೆಕಿಚ್ಚು ಮತ್ತು ಆತಂಕವನ್ನು ಜಯಿಸಬಹುದು. ನಿಮ್ಮ ಜೀವಿತದಲ್ಲಿ ಯಾವುದಾದರೂ ಪಾಪಗಳು ದೀರ್ಘಕಾಲ ಉಳಿದಿವೆಯೇ? ಈ ದಿನ, ಯೇಸು ಈ ವಚನಗಳಲ್ಲಿ ಏನನ್ನು ಹೇಳುತ್ತಾರೆಂದು ನೋಡಿರಿ.

how-jesus-helps-the-blind

ಯೇಸು ಹೇಗೆ ಕುರುಡರಿಗೆ ಸಹಾಯ ಮಾಡುತ್ತಾನೆ? – ಯೋಹಾನ 9:37-39 – ರಲ್ಲಿ ಯೇಸು “ನೋಡದವರು ನೋಡುತ್ತಾರೆ ಮತ್ತು ನೋಡುವವರು ಕುರುಡರಾಗುತ್ತಾರೆ” ಎಂದು ಹೇಳಿದನು. ಯಾವ ವ್ಯಕ್ತಿ ತಮ್ಮ ಜೀವಿತದಲ್ಲಿನ ತಪ್ಪು ಪ್ರದೇಶಗಳನ್ನು ತೋರಿಸಲು ಯೇಸುವನ್ನು ಕೇಳುವುದಿಲ್ಲವೋ, ಆ ವ್ಯಕ್ತಿ ಕತ್ತಲೆಯಲ್ಲೇ ಉಳಿಯುತ್ತಾನೆ. ಉದಾಹರಣೆಗೆ, ಒಬ್ಬ ಕ್ರೈಸ್ತ ಪತಿಗೆ ತನ್ನ ಪತ್ನಿಯ ಮೇಲೆ ಕೋಪಪಡುವ ಅಭ್ಯಾಸವಿದೆ ಎಂದಿಟ್ಟುಕೊಳ್ಳಿ. ಆ ಪತಿ ಯೇಸುವಿನ ಬಳಿಗೆ ಬಂದು “ದೇವರೇ, ನಾನು ಕೆಲವು ಪಾಪಗಳಿಂದ ಕುರುಡನಾಗಿದ್ದೇನೆ, ದಯವಿಟ್ಟು ನನ್ನ ಪಾಪಗಳನ್ನು ನೋಡುವಂತೆ ನನ್ನ ಕಣ್ಣುಗಳನ್ನು ತೆರೆ” ಎಂದು ಕೇಳುವಾಗ, ಅವನು ತನ್ನ ಹೃದಯದಲ್ಲಿ ಬಿಡುಗಡೆ ಮತ್ತು ಸಮಾಧಾನವನ್ನು ಹೊಂದಿಕೊಳ್ಳುತ್ತಾನೆ. ಆದ್ದರಿಂದ ನೀವು ಸಹ ಈ ದಿನವೇ ಯೇಸುವನ್ನು ಕೇಳಿ!!

jesus-finds

ಯೇಸು ಕಂಡುಕೊಂಡನು – ಯೋಹಾನ 9:33-38 – ಜನರು ಆ ಮನುಷ್ಯನು ಪಾಪದಿಂದ ಕುರುಡನಾಗಿ ಹುಟ್ಟಿದ್ದಾನೆಂದು ಅವನನ್ನು ತಿರಸ್ಕರಿಸಿದರು. ಯೇಸು ಆ ಮಾತುಗಳನ್ನು ಕೇಳಿ, ತಕ್ಷಣವೇ ಅವನನ್ನು ಕಂಡುಕೊಂಡನು. ಯೇಸುವಿನ ಆತ್ಮ ಕಳೆದುಹೋದದ್ದನ್ನು ಹುಡುಕಿ ರಕ್ಷಿಸುತ್ತದೆ (ಲೂಕ 19:10). ನೀವು ಒಬ್ಬರೆ ಇರುವಾಗ ಅಥವಾ ಜನರಿಂದ ತಿರಸ್ಕರಿಸಲ್ಪಟ್ಟಾಗಲೂ ಸಹ ಎಂದಿಗೂ ನೀವು ಒಂಟಿಯಾಗಿರುವುದಿಲ್ಲ. ಯೇಸು ನಿಮ್ಮನ್ನು ಕಂಡುಕೊಂಡನು ಮತ್ತು ನೀವು ಆತನನ್ನು ನಂಬಬೇಕೆಂದು ಬಯಸುತ್ತಿದ್ದಾನೆ. ಗುಣಹೊಂದಿದ ಆ ಮನುಷ್ಯನ ರೀತಿಯಲ್ಲಿ, ನಾವು ಸಹ ಯೇಸುವನ್ನು ನಂಬಿ ಆತನನ್ನು ಆರಾಧಿಸೋಣ. ದೇವರೇ, ನಾನು ಮರಣದ ಕಣಿವೆಯಲ್ಲಿ ನಡೆಯುವಾಗಲೂ ಸಹ ನನ್ನ ಜೊತೆಯಲ್ಲಿ ಇದ್ದದ್ದಕ್ಕಾಗಿ ನಿಮಗೆ ಧನ್ಯವಾದಗಳು.

healed-man

ಗುಣಹೊಂದಿದ ಮನುಷ್ಯನು – ಯೋಹಾನ 9:28-32 – ಧಾರ್ಮಿಕ ಜನರು ವಾಸಿಯಾದ ಮನುಷ್ಯನನ್ನು ಹಿಂಸಿಸಲು ಪ್ರಾರಂಭಿಸಿದರು. ಅವನ ಪೋಷಕರು ಸಹ ಜನರನ್ನು ಕಂಡು ಭಯಭೀತರಾಗಿದ್ದರು, ಆದರೆ ಗುಣಹೊಂದಿದ ಮನುಷ್ಯನು ದೇವರ ಪರವಾಗಿ ನಿಂತನು. ದೇವರ ಬಗ್ಗೆ ತಿಳಿದುಕೊಳ್ಳುವುದು ಒಂದು ಸಂಗತಿಯಾದರೆ ಪ್ರತಿದಿನ ದೇವರಿಂದ ಬಿಡುಗಡೆಯನ್ನು ಅನುಭವಿಸುವುದು ಮತ್ತೊಂದು ಸಂಗತಿ. ಆದ್ದರಿಂದ ನಾವು ಎಲ್ಲಿಯಾದರೂ ನಿಂತು ದೇವರು ನಮ್ಮ ಜೀವನದಲ್ಲಿ ಮಾಡಿದ ಅದ್ಭುತಗಳ ಬಗ್ಗೆ ಧೈರ್ಯದಿಂದ ಹೇಳಬೇಕು. ದೇವರು ತನ್ನ ವೈಭವ, ವಿಮೋಚನೆ ಮತ್ತು ಅಧಿಕಾರದ ಉದಾಹರಣೆಯಾಗಿ ನಿಮ್ಮ ಜೀವಿತವನ್ನು ಉಪಯೋಗಿಸಬಹುದಾ? ದೇವರೇ, ನಾನು ನಿಮ್ಮ ಪರವಾಗಿ ನಿಲ್ಲುವಂತೆ, ಗುಣಪಡಿಸಲಾಗದ ಪಾಪಗಳಿಂದ ನನ್ನನ್ನು ಬಿಡಿಸು.

your-testimony

ನಿಮ್ಮ ಸಾಕ್ಷಿ – ಯೋಹಾನ 9:24-27 – ಆ ಮನುಷ್ಯನು ಸಂದೇಹ ಪಡುತ್ತಿದ್ದ ಜನರಿಗೆ “ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತೇನೆ” ಎಂದು ಹೇಳಿದನು. ಗುಣಹೊಂದಿದ ಮನುಷ್ಯನಿಂದ ಅದ್ಭುತವಾದ ಮಾತುಗಳು!! ಇದೇ ನಿಜವಾದ ಕ್ರೈಸ್ತ ಜೀವಿತ. ನಾವು ಈ ರೀತಿಯ ಅನೇಕ ಸಾಕ್ಷಿಗಳನ್ನು ಕೇಳಬೇಕೆಂದು ನಾನು ಪ್ರಾರ್ಥಿಸುತ್ತೇನೆ – ನಾನು ಇತರ ಜನರ ವಿಷಯಗಳು ಮತ್ತು ಶರೀರ ಭಾವದ ಆಸೆಗಳಿಂದ ಇದ್ದೆನು, ಆದಕೆ ಕ್ರಿಸ್ತನು ನನ್ನನ್ನು ಬಿಡುಗಡೆ ಮಾಡಿದನು. ನಾನು ಯಾವಾಗಲೂ ಚಿಂತೆ ಮತ್ತು ಆತಂಕವನ್ನು ಅನುಭವಿಸುತ್ತಿದ್ದೆನು, ಆದರೆ ಕ್ರಿಸ್ತನು ನನ್ನನ್ನು ಬಿಡುಗಡೆಗೊಳಿಸಿದನು. ಪದೇ ಪದೇ ನನ್ನ ಹೆಂಡತಿಯ ಜೊತೆ ಜಗಳವಾಡುತ್ತಿದ್ದೆನು, ಆದರೆ ಕ್ರಿಸ್ತನು ನಮ್ಮನ್ನು ಶಾಂತಿಯುತ ಜನರನ್ನಾಗಿ ಬದಲಾಯಿಸಿದನು. ಆಮೆನ್.

fear-of-rejection-copy

ಬಹಿಷ್ಕರಣೆಯ ಭಯ – ಯೋಹಾನ 9:17-23 – ಯೇಸು ತಮ್ಮ ಮಗನನ್ನು ಗುಣಪಡಿಸಿದನು ಎಂದು ಹೇಳಲು ಆ ಕುರುಡನ ತಂದೆ ತಾಯಿಗಳು ಭಯಪಟ್ಟರು. ಅವರು ಸಮಾಜದಿಂದ ಮತ್ತು ಅದರ ಸಂಪ್ರದಾಯಗಳಿಂದ ಯಹೂದ್ಯರು ತಮ್ಮನ್ನು ಬಹಿಷ್ಕರಿಸುತ್ತಾರೆಂದು ಭಯಭೀತರಾಗಿದ್ದರು. ದ್ವಿಮನಸುಳ್ಳ ಕ್ರೈಸ್ತರು ದೇವರ ಹೊಗಳಿಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಲು ಬಯಸುತ್ತಾರೆ(ಯೋಹಾನ 12:42,43). ಈ ದಿನ, ನೀವು ಜನರನ್ನು ಮೆಚ್ಚಿಸಲು ಅಥವಾ ಅವರ ಅನುಮತಿಯನ್ನು ಪಡೆದುಕೊಳ್ಳಲು ಕಠಿಣವಾಗಿ ಪ್ರಯತ್ನಿಸುತ್ತಿದ್ದೀರಾ ಎಂದು ತೋರಿಸುವಂತೆ, ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯುವುದರ ಮೂಲಕ ದೇವರನ್ನು ಕೇಳುತ್ತೀರಾ? ನಂಬಿಕೆಯು ಈ ಪ್ರಬಲ ಭಯವನ್ನು ಜಯಿಸುತ್ತದೆ. ನಂಬಿಕೆಯಿಲ್ಲದೆ ನಾವು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ (ಇಬ್ರಿಯ 11:6).

my-time-for-others

ಇತರರಿಗೆ ನನ್ನ ಸಮಯ – ಯೋಹಾನ 9:13-16 – ರಲ್ಲಿ ಯೇಸು ಸಬ್ಬತ್ ದಿನದಲ್ಲಿ ಕುರುಡನನ್ನು ಗುಣಪಡಿಸಿದರು ಆದರೆ ಧಾರ್ಮಿಕ ಜನರು ಅದಕ್ಕೆ ಅಸಮಾಧಾನಗೊಂಡರು. ಮತ್ತಾಯ 12:7 ರಲ್ಲಿ ಯೇಸು ಹೇಳಿದಂತೆ, ದೇವರು ಯಜ್ಞವನ್ನು ಬಯಸುವುದಕ್ಕಿಂತ ಕರುಣೆಯನ್ನು ಬಯಸುತ್ತಾನೆ. ನಾವು ವಿಶ್ರಾಂತಿ (ಸ್ವತಂತ್ರ) ದಿನದಲ್ಲಿ ಏನನ್ನು ಮಾಡುತ್ತೇವೆ? ಎಲ್ಲಾ ನಮ್ಮ ವಿಶ್ರಾಂತಿಯ ದಿನವೆಂದು ನಮ್ಮ ಸ್ವಂತ ಉದ್ದೇಶಕ್ಕಾಗಿ ಕಳೆಯುತ್ತೇವಾ? ನಾವು ನಮ್ಮ ಕುಟುಂಬ ಸದಸ್ಯರಲ್ಲದ ಇತರರಿಗೆ ಎಷ್ಟು ಸಮಯ, ಶಕ್ತಿ ಮತ್ತು ಗಮನವನ್ನು ವಾರದಲ್ಲಿ ಕೊಡುತ್ತೇವೆ? ನೀವು ಹತ್ತಿರದಿಂದ ಯೇಸುವನ್ನು ಹುಡುಕುವಾಗ, ನಿಮ್ಮ ಹೃದಯ ಆತನ ಹಾಗೆ ಪರಿಣಮಿಸುತ್ತದೆ – ಜನರಿಗೆ ಕರುಣೆ ತೋರಿಸುವಂತಹ ಒಂದು ಹೃದಯ.

vision-to-see-god

ದೇವರನ್ನು ನೋಡುವ ದರ್ಶನ – ಯೋಹಾನ 9:8-12 – ದೃಷ್ಟಿಪಡೆದುಕೊಂಡ ಮನುಷ್ಯನು “ಯೇಸು ಹೋಗಿ ತೊಳೆದುಕೊಳ್ಳಲು ಹೇಳಿದರು, ಆದ್ದರಿಂದ ನಾನು ಹೋಗಿ ತೊಳೆದುಕೊಂಡದ್ದರಿಂದ ದೃಷ್ಟಿ ಹೊಂದಿದೆನು” ಎಂದು ಹೇಳಿದನು. ಆ ಕುರುಡನಾಗಿದ್ದ ಮನುಷ್ಯನು ಕಾರಣಗಳನ್ನು ನೀಡಲಿಲ್ಲ ಅಥವಾ ಅಲಸ್ಯಮಾಡಲಿಲ್ಲ. ಅವನು ನೋಡಲು ಹತಾಶೆಯುಳ್ಳವನಾದ್ದರಿಂದ ತಕ್ಷಣ ಹೋದನು. ನೀವು ಸಹ ಆಧ್ಯಾತ್ಮಿಕ ಕುರುಡು ಅಥವಾ ಬಂಧನದಿಂದ ಹೊರಬರಲು ಹತಾಶೆಯುಳ್ಳವರಾಗಿದ್ದೀರಾ? ಯೇಸುವಿನ ಸ್ವರವನ್ನು ಕೇಳಿರಿ ಮತ್ತು ವಿಧೇಯತೆಯುಳ್ಳವರಾಗಿರಿ. ಕ್ಷಮಾಪಣೆ ಅಥವಾ ಅಲಸ್ಯವಿಲ್ಲದ ವಿಧೇಯತೆಯನ್ನು ಪಾಲಿಸೋಣ. ದೇವರೇ, ನಾನು ನಿಮ್ಮ ಅಂದ ಮತ್ತು ಮಹಿಮೆಯನ್ನು ನೋಡುವ ಕಣ್ಣುಗಳಿಗೋಸ್ಕರ ಹತಾಶೆಯುಳ್ಳವನಾಗಿದ್ದೇನೆ.

go-wash

ಹೋಗು, ತೊಳೆದುಕೋ – ಯೋಹಾನ 9:6-7 – ಯೇಸುವಿನ ಆದೇಶದ ಮೇರೆಗೆ, ಆ ಕುರುಡನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ತಿರುಗಿ ಬಂದನು. ಆದರೆ ಯೇಸುವಿನ ಬಳಿಗೆ ಬಂದ ಇನ್ನೊಬ್ಬ ಮನುಷ್ಯನು ವ್ಯಸನಗೊಂಡು ದುಃಖದಿಂದ ಹೊರಟುಹೋದನು (ಮಾರ್ಕ 10:17-27). ಯಾಕಂದರೆ ಅವನಿಗೆ ಬಹಳ ಆಸ್ತಿಯಿತ್ತು ಮತ್ತು ಅವನು ಆತ್ಮೀಕ ಕುರುಡನಾಗಿದ್ದನು. ನೀವು ದೇವರನ್ನು ನೋಡುವ ಅದ್ಭುತವನ್ನು ಕೈಚೆಲ್ಲಲು ಬಯಸುವಿರಾ? ನೀವು ನಿಜವಾದ ಸಂತೋಷ, ಶಾಂತಿ ಮತ್ತು ತೃಪ್ತಿಯನ್ನು ಯೇಸುವಿನಲ್ಲಿ ಆನಂದಿಸುವಿರಾ? ನೀವು ಯೇಸು ಎಂಬ ನದಿಯ ಬಳಿಗೆ ಬರುವುದಾದರೆ ನಿಮ್ಮ ಎಲ್ಲಾ ಕುರುಡುತನವು ಅಲ್ಲಿ ತೊಳೆಯಲ್ಪಡುವುದು. ದೇವರೇ, ಈ ದಿನವೇ ನಮ್ಮ ಕಣ್ಣುಗಳನ್ನು ತೆರೆ.

working-with-jesus

ಯೇಸುವಿನ ಜೊತೆ ಕೆಲಸ ಮಾಡಿರಿ – ಯೋಹಾನ 9:4-5 – ರಲ್ಲಿ ಯೇಸು “ನಾವು ಕೊನೆಯವರೆಗೂ ಹಗಲಿರುವಾಗ ದೇವರಿಗೋಸ್ಕರ ಕೆಲಸ ಮಾಡತಕ್ಕದ್ದು” ಎಂದು ಹೇಳಿದನು.1) ಬೆಳಕು ಲಭ್ಯವಿರುವ ತನಕ ದೇವರಿಗೋಸ್ಕರ ಕೆಲಸ ಮಾಡುವುದೇ ನಮ್ಮ ಕರೆಯಾಗಿದೆ. ಸಮಯ ಸ್ವಲ್ಪವಿರುವುದರಿಂದ ನಾವು ದೇವರ ಕೆಲಸವನ್ನು ಮುಂದೂಡಲು ಸಾಧ್ಯವಿಲ್ಲ. ದೇವರೊಂದಿಗಿನ ಸಮಯ ಮತ್ತು ದೇವರ ಸಮಯವನ್ನು ಹೊರತುಪಡಿಸಿ ಬೇರೆ ಎಲ್ಲವನ್ನೂ ಜೇವನದಲ್ಲಿ ಕಾಯಬಹುದು. 2) ಒಂದು ವಿಸ್ಮಯದ ವಿಷಯವೇನೆಂದರೆ ಯೇಸು “ನಾವು ಕೆಲಸ ಮಾಡಬೇಕು” ಎಂದು ನಾವು ಹೇಳುವಂತೆ ನಮ್ಮನ್ನು ಕರೆದಿದ್ದಾನೆ. ಆದ್ದರಿಂದ ದೇವರ ಮಹಿಮೆಗೋಸ್ಕರ ನೀವು ಮತ್ತು ಯೇಸು ಒಟ್ಟಿಗೆ ಕೆಲಸ ಮಾಡುತ್ತೀರಿ. ಸ್ನೇಹಿತರೇ, ನಾವು ಆಸೆಪಟ್ಟರೂ ಸಹ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾತ್ರಿ ಸಮೀಪಿಸುತ್ತದೆ.

why-suffering

ನೋವುಗಳು ಏಕೆ? – ಯೋಹಾನ 9:1-3 – ಒಬ್ಬ ಮನುಷ್ಯನು ತನ್ನ ಹುಟ್ಟಿನಿಂದಲೇ ಕುರುಡುತನದಿಂದ ಬಳಲುತ್ತಿದ್ದನು. ಜನರು ಅವನ ಪಾಪಗಳನ್ನು ದೂಷಿಸಿದರು. ಆದರೆ ಯೇಸು ಅವನ ಕುರುಡುತನವನ್ನು ನೋಡಿ “ದೇವರ ಕ್ರಿಯೆಗಳು ಇವನಲ್ಲಿ ಪ್ರಕಟವಾಗುವದಕ್ಕಾಗಿಯೇ ಇದಾಯಿತು” ಎಂದು ಹೇಳಿದನು. ಆದ್ದರಿಂದ ನೀವು ನೋವುಗಳನ್ನು ಹೇಗೆ ಕಾಣುತ್ತೀರಿ? ನಿಮ್ಮ ನೋವುಗಳು ದೇವರಿಗೆ ಮಹಿಮೆಯನ್ನು ತರುತ್ತವೆಯೇ. ನಾವು ಒಳ್ಳೆಯ ಕಾರ್ಯಗಳನ್ನು ಮಾಡುವಾಗ ನೋವನ್ನು ಅನುಭವಿಸಿದರೆ ನಾವು ಯೇಸುವಿನೊಂದಿಗೆ ಪಾಲುದಾರರಾಗುತ್ತೇವೆ. ಆದ್ದರಿಂದ ನಾವು ಸಹ ತಾಳ್ಮೆಯಿಂದ ನೋವನ್ನು ಅನುಭವಿಸೋಣ ಮತ್ತು ಎಲ್ಲಾ ವಿಷಯಗಳನ್ನು ದೇವರ ಚಿತ್ತದ ಮೇರೆಗೆ ಮಾಡೋಣ. ಸಮಯವನ್ನು ತೆಗೆದುಕೊಂಡು 1 ಪೇತ್ರ 2:21-24 ಈ ವಚನಗನ್ನು ಧ್ಯಾನಿಸಿರಿ. ಆಗ ನೀವು ಕಲಿತುಕೊಂಡ ವಿಷಯಗಳು ತಿಳಿಯುತ್ತವೆ.

jesus-for-you

ಕ್ರಿಸ್ತನು ನಿಮಗಾಗಿ – ಯೋಹಾನ 8:56-59 – ರಲ್ಲಿ ಯೇಸು “ಅಬ್ರಹಾಮನಿಗಿಂತ ಮುಂಚೆಯೇ ನಾನು ಇದ್ದೇನೆ” ಎಂದು ಹೇಳಿದನು. ದಯವಿಟ್ಟು ಇಬ್ರಿಯ 7:24,25 ನ್ನು ಸಹ ಓದುವುದರ ಮೂಲಕ ಯೇಸುವಿನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಿರಿ. ಯೇಸು ತನ್ನ ಮೂಲಕ ದೇವರ ಬಳಿಗೆ ಬರುವವರನೆಲ್ಲಾ ರಕ್ಷಿಸಲು ಶಕ್ತನಾಗಿದ್ದಾನೆ. ಆದ್ದರಿಂದ ನಮ್ಮ ಮಧ್ಯಸ್ತಿಕೆಗಾಗಿ ಯೇಸು ಈ ದಿನ ನಮ್ಮೊಂದಿಗೆ ಜೀವಿಸುತ್ತಿದ್ದಾನೆ. ಕೊನೆಯಲ್ಲಿ, ಸೈತಾನ ನಿಮ್ಮನ್ನು ವಿರೋಧಿಸುತ್ತಾನೆ ಮತ್ತು ಕೆಳಗೆ ಎಳೆದುಕೊಳ್ಳುತ್ತಾನೆ. ಆದರೆ ಯೇಸು ನಿಮ್ಮನ್ನು ಪ್ರೋತ್ಹಾಹಿಸಲು ಈ ಕ್ಷಣ ಮತ್ತು ಎಂದೆಂದಿಗೂ ನಿಮ್ಮ ಮಧ್ಯದಲ್ಲಿದ್ದಾನೆ. ನೀವು ಆತನ ಹತೋಟಿಯಲ್ಲಿರುವಾಗ ಸೈತಾನ ನಿಮ್ಮ ಮನಸ್ಸಿನ ಮೇಲೆ ಮಾಡುವ ಎಲ್ಲಾ ದಾಳಿಗಳು ವಿಫಲವಾಗುತ್ತವೆ.

know-and-obey

ದೇವರನ್ನು ಅರಿತುಕೊಂಡು ಆತನನ್ನು ಪರಿಪಾಲಿಸುವುದು – ಯೋಹಾನ 8:54-55 – ರಲ್ಲಿ ಯೇಸು “ನಾನು ಆತನನ್ನು ಅರಿತಿದ್ದೇನೆ; ಆತನ ಮಾತನ್ನು ಕೈಕೊಂಡಿದ್ದೇನೆ” ಎಂದು ಹೇಳಿದನು. ದೇವರನ್ನು ಅರಿಯುವುದು ಮತ್ತು ದೇವರನ್ನು ಪರಿಪಾಲಿಸುವುದು ಈ ಎರಡು ಬೇರೆ ಅಲ್ಲ. ನಾನು ದೇವರನ್ನು ಅರಿತಿರುವ ಕ್ರೈಸ್ತನು ಎಂದು ಹೇಳುವುದು ತುಂಬಾ ಸುಲಭ. ಆದರೆ ದೇವರನ್ನು ಪರಿಪಾಲಿಸುವ ಒಬ್ಬ ಕ್ರೈಸ್ತನಾಗಿರುವುದು ತುಂಬಾ ಉತ್ತಮವಾದದ್ದು. ಪರಿಪಾಲಿಸುವುದು ಎಂದರೆ ನಮ್ಮ ಇಷ್ಟದ ಬದಲಿಗೆ ದೇವರ ಚಿತ್ತವನ್ನು ನೆರವೇರಿಸುವುದು. ಈ ದಿನ, ಇದನ್ನು ಮಾಡೋಣ ಅದನ್ನು ಮಾಡೋಣ ಎಂದು ತುಂಬಾ ಆಲೋಚಿಸುತ್ತೇವೆ ಆದರೆ ಸಾಧ್ಯವಾದರೆ ಅವುಗಳನೆಲ್ಲಾ ನಮ್ಮ ಇಷ್ಟದಂತೆ ಆಗದೆ ದೇವರ ಚಿತ್ತದಂತೆ ಮಾಡೋಣ. ನೀವು ದೇವರ ಚಿತ್ತವನ್ನು ಪೂರೈಸಲು ಕ್ರಿಸ್ತನ ಕೃಪೆಯು ನಿಮ್ಮ ಮೇಲಿರುವಂತೆ ನಾನು ಪ್ರಾರ್ಥಿಸುತ್ತೇನೆ.

spiritual-death

ಆತ್ಮೀಕ ಮರಣ – ಯೋಹಾನ 8:52-53 – ರಲ್ಲಿ ಯೇಸು ಆತ್ಮೀಕ ಮರಣಕ್ಕೆ ಕಾರಣವಾಗುವ ಪಾಪದ ಬಗ್ಗೆ ಮಾತಾಡಿದನು. ಆದರೆ ಜನರು ಅದನ್ನು ದೈಹಿಕ ಮರಣ ಎಂದು ಅರ್ಥ ಮಾಡಿಕೊಂಡರು. ಅತ್ಮೀಕ ಮರಣವು ಆತ್ಮೀಕ ಜೀವನಕ್ಕೆ ವಿರುದ್ಧವಾಗಿದೆ. ಆತ್ಮೀಕ ಜೀವನ ಎಂದರೆ ದೃಢವಾದ ವಿಶ್ವಾಸದಿಂದ ದೇವರ ಸಮ್ಮುಖದಲ್ಲಿರುವುದು. ಆತ್ಮೀಕ ಮರಣ ಎಂದರೆ ದೇವರ ಸಮ್ಮುಖದಲ್ಲಿರುವ ದೃಢವಾದ ವಿಶ್ವಾಸದಿಂದ ದೂರವಾಗುವುದು. ಕೋಪ, ಕಹಿತನ, ಹೆಮ್ಮೆ ಈ ಎಲ್ಲಾ ಪಾಪಗಳು ದೇವರ ಸಮ್ಮುಖದ ಅಗಲಿಕೆಗೆ ಕಾರಣವಾಗಬಹುದು. ನೀವು ಯಾರ ಮೇಲೆಯಾದರೂ ಕೋಪಗೊಂಡರೆ, ನೀವು ದೇವರ ಗುಣವನ್ನು ನಿಮ್ಮಲ್ಲಿ ಕಳೆದುಕೊಂಡಿದ್ದೀರೆಂದು ಗಮನಿಸಿದ್ದೀರಾ?

avoiding-death

ಮರಣವನ್ನು ಕಾಣದಿರುವುದು – ಯೋಹಾನ 8: 51 – ರಲ್ಲಿ ಯೇಸು “ಒಬ್ಬನು ನನ್ನ ಮಾತನ್ನು ಕೈಕೊಂಡರೆ ಅವನು ಎಂದಿಗೂ ಮರಣವನ್ನು ಕಾಣುವದಿಲ್ಲ” ಎಂದು ಹೇಳಿದನು. ನಾವು ಕ್ರಿಸ್ತನ ಮಾತುಗಳನ್ನು ಪಾಲಿಸುವುದಾದರೆ ನಮ್ಮ ಆತ್ಮವು ಮರಣವನ್ನು ಕಾಣುವುದಿಲ್ಲ. ಆದರೆ ನಾವು ಪಾಲಿಸದಿದ್ದರೆ ಮತ್ತು ಸ್ವ ಚಿತ್ತದಂತೆ ನಡೆದರೆ ನಮ್ಮ ಆತ್ಮವು ನಾಶ ಮತ್ತು ಮರಣಹೊಂದುತ್ತದೆ (ಲೂಕ 15:24). ಆದ್ದರಿಂದ ಸ್ನೇಹಿತರೇ, ನೀವು ಪ್ರತಿದಿನ ಶೋಧನೆಯ ಮೂಲಕ ಹಾದು ಹೋಗುವುದು ಜೀವನ ಮತ್ತು ಸಾವಿನ ಒಂದು ವಿಷಯವಾಗಿದೆ. ನಾವು ಶೋಧನೆಯ ಮಧ್ಯದಲ್ಲಿ ವೈಯಕ್ತಿಕ ಪ್ರಾರ್ಥನೆಯಲ್ಲಿ ತೊಡಗುವಾಗ, ನಾವು ಪಾಪವನ್ನು ಜಯಿಸಬಹುದು. ಯೇಸು ಸಹ ಇದೇ ರೀತಿ ಮಾಡಿದನು ಮತ್ತು ಇದು ನಮಗೆ ಜಯಿಸಲು ಒಂದು ಉದಾಹರಣೆಯಾಗಿದೆ (ಲೂಕ 22:46).

bless-when-cursed-copy

ಶಪಿಸುವವರನ್ನು ಆಶೀರ್ವದಿಸಿರಿ – ಯೋಹಾನ 8:48-50 – ರಲ್ಲಿ ಜನರು ಯೇಸುವನ್ನು “ದೆವ್ವ ಮತ್ತು ಕೀಳುಜಾತಿಯವನು” ಎಂದು ಹೇಳಿದರು. ಜನರು ಯೇಸುವನ್ನು ನಿಂದಿಸಿದಾಗ ಆತನು ತೋರಿದ ಪ್ರತಿಕ್ರಿಯೆಯನ್ನು ನಾವು ಕಲಿತುಕೊಳ್ಳಬಹುದು. “ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ” ಎಂದು ಯೇಸು (ಲೂಕ 6:28) ರಲ್ಲಿ ಹೇಳುತ್ತಾನೆ. ಇದರ ಅರ್ಥ ಯಾರಾದರೂ ನಿಮ್ಮನ್ನು ನಿಂದಿಸಿದರೆ, ನೀವು ಅವರನ್ನು ನಿಮ್ಮ ಹೃದಯಪೂರ್ವಕವಾಗಿ ಆಶೀರ್ವದಿಸಿರಿ. ಪ್ರತಿಯಾಗಿ ಅವರು ಆಶೀರ್ವದಿಸಲ್ಪಡುತ್ತಾರೆ. ನೀವು ಆಶೀರ್ವದಿಸುವುದು ಕಠಿಣವೆಂದು ಭಾವಿಸಬಹುದು. ನಾವು ಪ್ರತಿಕ್ಷಣ ಪವಿತ್ರಾತ್ಮನ ಪ್ರಭಾವದಿಂದಿರುವಾಗ ಮಾತ್ರ ಇದು ಸಾಧ್ಯ. ನಿರ್ಣಯಕ್ಕೋಸ್ಕರ ಕೀರ್ತನೆ 120:2 ರಲ್ಲಿ ದಾವೀದನ ಪ್ರಾರ್ಥನೆಯನ್ನು ನೋಡಿರಿ.

truth-lasts

ಸತ್ಯವನ್ನು ಕಡೆಗಣಿಸುವಿಕೆ – ಯೋಹಾನ 8:45-47 – ರಲ್ಲಿ ಯೇಸು ತನ್ನ ಸತ್ಯವನ್ನು ಸೈತಾನನ ಸುಳ್ಳುಗಳೊಂದಿಗೆ ಹೋಲಿಸುತ್ತಾನೆ. ಆತನು “ನಾನು ಸತ್ಯವನ್ನು ಹೇಳಿದರೆ ನೀವು ನನ್ನನ್ನು ಯಾಕೆ ನಂಬುವದಿಲ್ಲ?” ಎಂದು ಜನರನ್ನು ಕೇಳಿದನು. ಕೆಲವು ವೇಳೆ ಯೇಸುವಿನ ಸತ್ಯವನ್ನು ಓದುವುದು ಸುಲಭ ಆದರೆ ಅದನ್ನು ಪರಿಪಾಲಿಸುವುದು ಕಠಿಣ. ಅದರೆ ಸೈತಾನನ ಸುಳ್ಳುಗಳು ಸಂತೋಷದ ವೇಷ ಧರಿಸಿಕೊಂಡು ತಕ್ಷಣ ಪ್ರತಿಕ್ರಿಯಿಸುವಂತೆ ಆಕರ್ಷಿಸುತ್ತದೆ. ಆದ್ದರಿಂದ ನಮ್ಮ ಜೀವನದ ಆತ್ಮೀಕ ಯುದ್ಧ ಯಾವುದೆಂದರೆ – ಮಾಂಸದ ಕಾರ್ಯಗಳು ಕ್ಷಣದಲ್ಲಿ ತೃಪ್ತಿಯನ್ನು ತರುತ್ತದೆ ಆದರೆ ದೇವರನ್ನು ಘನಪಡಿಸುವುದಿಲ್ಲ vs. ಪವಿತ್ರಾತ್ಮನ ಕಾರ್ಯಗಳು ಜೀವನದಲ್ಲಿ ತೃಪ್ತಿ, ಪ್ರೀತಿ, ಸಂತೋಷ ಮತ್ತು ಸಮಾಧಾನವನ್ನು ಒದಗಿಸುತ್ತದೆ.

deceived-no-more

ಇನ್ನು ಮೇಲೆ ನೀವು ಮೋಸಗೊಳಪಡುವುದಿಲ್ಲ – ಯೋಹಾನ 8:44 – ರಲ್ಲಿ ಯೇಸು ಸೈತಾನನನ್ನು ಕೊಲೆಗಾರ ಮತ್ತು ಸುಳ್ಳಿನ ತಂದೆ ಎಂದು ಕರೆಯುತ್ತಾನೆ. ಕೊಲೆಗಾರ ಏಕೆಂದರೆ ಅವನು ನಮ್ಮ ಆತ್ಮಗಳನ್ನು ಕೊಲ್ಲಲು ಬಯಸುತ್ತಾನೆ. ಸುಳ್ಳುಗಾರ ಏಕೆಂದರೆ ಅವನು ಒಳ್ಳೆಯದನ್ನು ಕೆಟ್ಟದೆಂದೂ ಮತ್ತು ಕೆಟ್ಟದ್ದನ್ನು ಒಳ್ಳೆಯದೆಂದು ಹೇಳುತ್ತಾನೆ. ಅವನು ಒಬ್ಬ ಮೋಸಗಾರ ಮತ್ತು ಅನೇಕರು ಸೈತಾನನ ಪಾಶಕ್ಕೆ ಸಿಲುಕಿದ್ದಾರೆ. ನೀವು ನಿಮ್ಮ ಜೀವಿತದಲ್ಲಿ ಸೈತಾನನಿಂದ ಮೋಸಗೊಳಪಟ್ಟ (ಮೋಸಗೊಳಗಾಗುತ್ತಿರುವ) ಸಂಗತಿಗಳು ಇದೆಯಾ? ಸ್ನೇಹಿತರೇ, ಇನ್ನು ಸೈತಾನನಿಂದ ಮೋಸಗೊಳಪಡುವ ಅಗತ್ಯವಿಲ್ಲ. ಏಕೆಂದರೆ ನಮ್ಮ ಜೊತೆಯಲ್ಲಿರುವವನು ನಮಗೆ ವಿರೋಧವಾಗಿರುವ ಸೈತಾನನನಿಗಂತ ದೊಡ್ಡವನು. ಕ್ರಿಸ್ತನು ಮಾತ್ರ ಸೈತಾನನ ಸುಳ್ಳುಗಳನ್ನು ಬಯಲುಮಾಡಲು ಸಾಧ್ಯ.

listen-to-god

ದೇವರ ಸ್ವರವನ್ನು ಕೇಳಿರಿ – ಯೋಹಾನ 8:42-43 – ರಲ್ಲಿ ಯೇಸು ನೀವು ನನ್ನ ಸ್ವರವನ್ನು ಕೇಳದೆ ಇರುವುದರಿಂದ ನಿಮಗೆ ಅರ್ಥವಾಗುವುದಿಲ್ಲ ಎಂದು ಹೇಳಿದನು. ಈ ದಿನದಲ್ಲಿ ನೀವು ಯಾರ ಸ್ವರವನ್ನು ಕೇಳುತ್ತಿದ್ದೀರಾ? ನಿಮ್ಮ ಸ್ನೇಹಿತರು ಅಥವಾ ನಿಮ್ಮ ಆತ್ಮಸಾಕ್ಷಿ ಅಥವಾ ಸಾಮಾಜಿಕ ಮಾಧ್ಯಮ ಅಥವಾ ಶತ್ರುವಿನ ಸ್ವರವೇ? ದೇವರ ಸ್ವರವನ್ನು ಕೇಳಲು ನಾನು/ನೀವು ಎಷ್ಟು ಸಮಯವನ್ನು ಕಳೆಯುತ್ತಿದ್ದೇವೆ? ಯೇಸು ಹೇಳಿದ್ದು ನಿಜ, ನನಗೆ ದೇವರ ವಿಷಯಗಳು ಅರ್ಥವಾಗುವುದಿಲ್ಲ ಏಕೆಂದರೆ ನಾನು ಗ್ರಹಿಸಿಕೊಳ್ಳುವುದಕ್ಕೆ ಸಮಯವನ್ನು ನೀಡುತ್ತಿಲ್ಲ. ನಾವು ಸತ್ಯವೇದ ಓದುವುದರ ಮೂಲಕ ಮತ್ತು ವೈಯಕ್ತಿಕ ಪ್ರಾರ್ಥನೆಯ ಮೂಲಕ ದೇವರ ಸ್ವರವನ್ನು ಕೇಳುವುದಕ್ಕೆ ಸಮಯವನ್ನು ಕೊಡುತ್ತೇವಾ?

group-or-personel-faith

ಗುಂಪು ನಂಬಿಕೆ ಮತ್ತು ವೈಯಕ್ತಿಕ ನಂಬಿಕೆ? – ಯೋಹಾನ 8:39-41 – ರಲ್ಲಿ ಜನರು “ನಾವು ಅಬ್ರಹಾಮನ ಮಕ್ಕಳು ಮತ್ತು ದೇವರ ಮಕ್ಕಳು” ಎಂದು ಹೇಳುತ್ತಾ ಯೇಸುವನ್ನು ಕೊಲ್ಲಲು ಬಯಸಿದರು. ನಾವು ಉತ್ತಮ ಕುಟುಂಬದ ಸದಸ್ಯರು, ಉತ್ತಮ ಸಭೆಯವರಾಗಿರಬಹುದು ಆದರೆ ಈ ವಿಷಯಗಳು ನಮ್ಮನ್ನು ರಕ್ಷಿಸಲು ಆಗುವುದಿಲ್ಲ. ನಾವು ಯೇಸುವಿನ ಮೇಲೆ ಇಡುವ ನಮ್ಮ ವೈಯಕ್ತಿಕ ನಂಬಿಕೆಯು ನಮ್ಮನ್ನು ರಕ್ಷಿಸುತ್ತದೆ. ದೇವರೇ, ನಾನು ಅನೇಕ ಒಳ್ಳೆಯ ಗುಂಪುಗಳಲ್ಲಿ ಒಂದು ಭಾಗವಾಗಿದ್ದೇನೆ ಆದರೆ ವೈಯಕ್ತಿಕವಾಗಿ ಪ್ರತಿಕ್ಷಣ ನಿಮ್ಮನ್ನು ಹಿಂಬಾಲಿಸಲು ಬಯಸುತ್ತೇನೆ. ಆದ್ದರಿಂದ ನನ್ನ ವೈಯಕ್ತಿಕ ಜೀವನ, ಚಿಂತನೆಗಳು ಮತ್ತು ಕ್ರಮಗಳಿಂದ ನಿಮಗೆ ವೈಭವವನ್ನು ತರಲು ನನ್ನ ನಂಬಿಕೆಯನ್ನು ಇಂದು ಬಲಪಡಿಸಲು.

has-it-entered

ವಾಕ್ಯವು ಪ್ರವೇಶಿಸಿದೆಯೇ? – ಯೋಹಾನ 8:37-38 – ರಲ್ಲಿ ಯೇಸು “ನನ್ನ ವಾಕ್ಯಗಳು ನಿಮ್ಮಲ್ಲಿ ಯಾವುದೇ ಪ್ರಗತಿಯನ್ನು ಉಂಟುಮಾಡಲಿಲ್ಲ” ಎಂದು ಯೇಸು ಅವಿಶ್ವಾಸಿಗಳಿಗೆ ಹೇಳಿದನು. ದೇವರ ವಾಕ್ಯಗಳು ನಿಮ್ಮ ಜೀವಿತದಲ್ಲಿ ಪ್ರಗತಿಯನ್ನು ತಂದಿದೆಯೇ? ಸ್ವಾರ್ಥತ್ವದಿಂದ ನಿಸ್ವಾರ್ಥ ವರ್ತನೆಯೆಡೆಗೆ ಪ್ರಗತಿ. ಕತ್ತಲೆಯ ಆತ್ಮದಿಂದ ಬೆಳಕಿನೆಡೆಗೆ ಪ್ರಗತಿ. ಈ ದಿನವೇ ಕೀರ್ತನೆ 119:130ನ್ನು ಧ್ಯಾನಿಸಿರಿ. ಬೆಂಕಿಯನ್ನು ಆರಂಭಿಸಲು, ನಮಗೆ ಶಾಖ, ಇಂಧನ ಮತ್ತು ಘರ್ಷಣೆಯ ಅಗತ್ಯವಿದೆ. ನಮ್ಮ ಕ್ರೈಸ್ತ ಜೀವಿತವು ಪ್ರಗತಿಹೊಂದಲು ನಮಗೆ ಯೇಸುವಿನ ವಾಕ್ಯ ಮತ್ತು ಪವಿತ್ರಾತ್ಮನನ್ನು ಅವಲಂಬಿಸಿ ನಡೆಯುವ ವಿಧೇಯತ್ವದ ಅಗತ್ಯವಿದೆ. “ದೇವರ ವಾಕ್ಯದ ಪ್ರವೇಶವು ಬೆಳಕನ್ನು ತರುತ್ತದೆ”.

true-freedom

ನಿಜವಾದ ಸ್ವಾತಂತ್ರ್ಯ – ಯೋಹಾನ 8:35-36 – ರಲ್ಲಿ ಯೇಸು “ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನೀವು ಬಿಡುಗಡೆಯಾಗುವಿರಿ” ಎಂದು ಹೇಳಿದನು. ಯೇಸು ನಮಗೆ ನಿಜವಾದ ಮತ್ತು ಪೂರ್ಣ ಸ್ವಾತಂತ್ರ್ಯವನ್ನು ಕೊಡಲು ಬಯಸುತ್ತಾನೆ. ಉದಾಹರಣೆಗೆ, ಒಂದು ಚಿಕ್ಕ ಪಂಜರದಲ್ಲಿರುವ ಹಕ್ಕಿಯನ್ನು ನೀವು ದೊಡ್ಡ ಪಂಜರಕ್ಕೆ ಬದಲಾಯಿಸಬಹುದು ಆದರೆ ಅದು ಪೂರ್ಣ ಸ್ವಾತಂತ್ರ್ಯ ಅಲ್ಲ. ನಾವು ಸರಿಸಲಾಗದಿರುವಂತಹ ಬಂಧನದ ಬಾಗಿಲುಗಳನ್ನು ಮುರಿಯಲು ಯೇಸು ಈ ಲೋಕಕ್ಕೆ ಬಂದನು. ನಿಮ್ಮ ಜೀವಿತದಲ್ಲಿ ಪೂರ್ಣ ಸ್ವಾತಂತ್ರ್ಯದ ಅಗತ್ಯವಿದೆಯಾ? ಹಾಗಾದರೆ ಒಂದು ಕಾಗದದ ತುಂಡನ್ನು ತೆಗೆದುಕೊಂಡು ಅದರಲ್ಲಿ ಬರೆಯಿರಿ. ನೀವು ಸ್ವತಂತ್ರರಾಗಲು ಯೇಸುವಿನಲ್ಲಿ ಪ್ರಾರ್ಥಿಸಿರಿ. ದೇವರೇ, ನಾನು ಪೂರ್ಣ ಸ್ವಾತಂತ್ರ್ಯಕ್ಕೋಸ್ಕರ ನಿಮ್ಮ ಬಳಿಗೆ ಬರುತ್ತೇನೆ.

sins-slaves

ಪಾಪಕ್ಕೆ ಗುಲಾಮರು – ಯೋಹಾನ 8:34 – ಜನರು ತಾವು ಸ್ವತಂತ್ರರಾಗಿದ್ದೇವೆಂದು ಹೇಳಿದಾಗ, ಯೇಸು ಅವರಿಗೆ ಪಾಪ ಮಾಡುವವನು ಪಾಪಕ್ಕೆ ಗುಲಾಮನಾಗಿದ್ದಾನೆ ಎಂದು ಹೇಳಿ ಸ್ಪಸ್ಟಪಡಿಸಿದನು. ಪಾಪವು ಬಾಹ್ಯ ಸ್ವಾತಂತ್ರ್ಯದ ಭರವಸೆಯನ್ನು ಕೊಡುತ್ತದೆ ಆದರೆ ಆಂತರಿಕ ಗುಲಾಮಗಿರಿಯನ್ನು ನೀಡುತ್ತದೆ. ಯೇಸು ನಮ್ಮನ್ನು ಗುಲಾಮತನದಿಂದ ಬಿಡಿಸಲು ಮತ್ತು ಆಂತರಿಕ ಸ್ವತಂತ್ರವನ್ನು ನೀಡುವುದಕ್ಕೋಸ್ಕರ ಬಂದನು (ರೋಮಾ 6:6). ಸ್ವಾತಂತ್ರದ ರೂಪದಲ್ಲಿ ವೇಷಧರಿಸಿರುವ ಪಾಪದ ಗುಲಾಮತನದಿಂದ ದೇವರು ನಿಮ್ಮನ್ನು ಬಿಡಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಉದಾಹರಣೆಗೆ, ನಾವು ಸ್ವತಂತ್ರ ನೀಡುತ್ತದೆ ಎಂದು ಭಾವಿಸಿದ್ದ ಕೆಲಸ ನಮ್ಮನ್ನು ಹೊಟ್ಟೆಕಿಚ್ಚು, ಹೆಮ್ಮೆ ಅಥವಾ ದೇವರಿಂದ ದೂರ ಸರಿಯುವಂತೆ ಮಾಡುತ್ತದೆ.

desire-to-be-free

ಸ್ವತಂತ್ರರಾಗುವ ಆಸೆ – ಯೋಹಾನ 8:33 – ನಾವು ಬಂಧನದಲ್ಲಿದ್ದೇವೆಂದು ಒಪ್ಪಿಕೊಳ್ಳುವುದು, ಹಾನಿಕಾರಕ ಅಭ್ಯಾಸ, ಚಟ ಅಥವಾ ನಡವಳಿಕೆಯಿಂದ ಸ್ವತಂತ್ರರಾಗಲು ಪ್ರಥಮ ಹೆಜ್ಜೆಯಾಗಿದೆ. ಇಲ್ಲಿ ನಾವು ಜನರು ತಾವು ಉತ್ತಮರಾಗಿದ್ದೇರೆಂದು ಯೇಸುವಿನ ಜೊತೆ ವಾದ ಮಾಡುವುದನ್ನು ನೋಡಬಹುದು. ಲೂಕ 5:30-32 ರಲ್ಲಿ ನೋಡುವ ಪ್ರಕಾರ ಯೇಸು ಆತ್ಮೀಕವಾಗಿ ಅನಾರೋಗ್ಯದಲ್ಲಿದ್ದವರಿಗೆ ವೈದ್ಯರಾಗಿದ್ದಾರೆ. ನಾವು ಯೇಸುವಿನ ಜೊತೆ ಕುಳಿತು ಪ್ರಾಮಾಣಿಕವಾಗಿ ನಮ್ಮ ದಾಸತ್ವವನ್ನು ಹೇಳೋಣವೇ? ಆತನು ಮಾತ್ರ ನಮ್ಮ ಅನಾರೋಗ್ಯವನ್ನು ಗುಣಪಡಿಸಲು ಸಾಧ್ಯ( ದೈಹಿಕವಾಗಿ ಮತ್ತು ಮಾನಸಿಕವಾಗಿ). ಇನ್ನೂ ಹೆಚ್ಚು ನಿರೀಕ್ಷಿಸಬೇಡಿ ಮತ್ತು ಸ್ವತಂತ್ರರಾಗಲು ಇತರ ಮಾರ್ಗಗಳನ್ನು ಪ್ರಯತ್ನಿಸಬೇಡಿ. ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು.

knowing-jesus

ಯೇಸುವನ್ನು ಅರಿತುಕೊಳ್ಳಿರಿ – ಯೋಹಾನ 8:32b – ರಲ್ಲಿ ಯೇಸು “ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು” ಎಂದು ಹೇಳಿದನು. ಸತ್ಯವನ್ನು ಅರಿತುಕೊಳ್ಳುವುದು ಎಂಬುದರ ಅರ್ಥವೇನು? ಇದರ ಅರ್ಥ 1) ಆತನ ಬಗ್ಗೆ ಓದುವುದರಿಂದ ಮಾತ್ರವಲ್ಲದೆ, ಆತನ ಕೃಪೆ ಮತ್ತು ಪ್ರೀತಿಯನ್ನು ಅನುಭವಿಸುವುದರ ಮೂಲಕ ನಾನು ಯೇಸುವನ್ನು ಅರಿತಿದ್ದೇನೆ. 2) ನನ್ನ ಜೀವಿತದ ಎಲ್ಲಾ ಕಾರ್ಯಗಳಲ್ಲೂ ಸತ್ಯವನ್ನು ಅರಿಯುವುದಕ್ಕೆ ನಾನು ಪ್ರತಿದಿನ ಯೇಸುವಿನ ಬಳಿಗೆ ಬರುತ್ತೇನೆ. 3) ಯೇಸುವನ್ನು ತುಂಬಾ ಹತ್ತಿರದಿಂದ ಅರಿತುಕೊಳ್ಳುವುದರಿಂದ ಆತನ ಕ್ರಿಯೆ ನನ್ನನ್ನು ಸ್ವತಂತ್ರನನ್ನಾಗಿಸುತ್ತದೆ. ಸ್ನೇಹಿತರೇ, ಯೇಸುವನ್ನು ವೈಯಕ್ತಿಕವಾಗಿ ಅರಿತುಕೊಳ್ಳುವುದರ ಮೂಲಕ ನೀವು ಪ್ರತಿದಿನ ಸ್ವತಂತ್ರರಾಗುತ್ತಾ ಬರುವುದನ್ನು ಗಮನಿಸಬಹುದು. ಎಂತಹ ಮಹಿಮೆಯುಳ್ಳ ಜೀವನ !!

want-to-be-set-free

ನೀವು ಸ್ವತಂತ್ರರಾಗಬೇಕೇ? – ಯೋಹಾನ 8:32 – ಶಿಷ್ಯರು ವೈಯಕ್ತಿಕವಾಗಿ ಯೇಸುವನ್ನು ಸತ್ಯವೆಂದು ತಿಳಿದುಕೊಂಡಾಗ ಗುಲಾಮತನದಿಂದ ಮತ್ತು ಸೆರೆವಾಸದ ಜೀವನದಿಂದ ಸ್ವತಂತ್ರರಾಗುತ್ತಾರೆ. ಏಕೆ? ಏಕೆಂದರೆ ಯೇಸು ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ, ಸೆರೆಯವರಿಗೆ ಬಿಡುಗಡೆಯನ್ನು ಮತ್ತು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಬಂದನು (ಯೇಶಾಯ 61:1b). ಸತ್ಯದಾಯಕನಾಗುರುವ ಯೇಸು ಮಾತ್ರ ನಮ್ಮನ್ನು ಸ್ವತಂತ್ರರನ್ನಾಗಿಸಲು ಸಾಧ್ಯ. ದೇವರೇ, ನನ್ನನ್ನು ಗುಲಾಮತನಕ್ಕೆ ಎಳೆದೊಯ್ಯುವ ನನಗೆ ತಿಳಿದಿರುವ ಮತ್ತು ತಿಳಿಯದಿರುವ ವಿಷಯಗಳನ್ನು ತೋರಿಸು. ನನಗೆ ಪೂರ್ಣ ಸ್ವಾತಂತ್ರ್ಯ ಬೇಕು ಮತ್ತು ನಾನು ಸಂಪೂರ್ಣವಾಗಿ ಸ್ವತಂತ್ರನಾಗುವ ತನಕ ನಿನ್ನ ಬಳಿಗೆ ಬರಬೇಕು.

Scene 07/53 Exterior Galilee Riverside; Jesus (DIOGO MORCALDO) is going to die and tells Peter (DARWIN SHAW) and the other disciples this not the end.

ವಿಶ್ವಾಸಿ ಅಥವಾ ಶಿಷ್ಯ? – ಯೋಹಾನ 8:31 – ನಾವು ಮೊದಲ ಬಾರಿ ಯೇಸುವಿನ ಬಳಿಗೆ ಬಂದಾಗ ವಿಶ್ವಾಸಿಗಳಾಗಿರತ್ತೇವೆ. ಆದರೆ ನಾವು ಯೇಸುವಿನ ಜೊತೆ ಸಾಗಿದಾಗ ಆತನ ಶಿಷ್ಯರಾಗುತ್ತೇವೆ. ದಯವಿಟ್ಟು ಲೂಕ 14:25-35 ನ್ನು ಓದಿರಿ, ಒಬ್ಬ ಶಿಷ್ಯನು ತನ್ನ ಕುಟುಂಬಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸುತ್ತಾನೆ, ಶ್ರಮದ ಶಿಲುಬೆಯನ್ನು ಹೊರುತ್ತಾನೆ, ತನಗಿರುವುಗಳನೆಲ್ಲಾ ಯೇಸುವಿನ ನಿಮಿತ್ತ ಕೊಡುತ್ತಾನೆ ಎಂದು ಶಿಷ್ಯನಾಗುವುದರ ಬಗೆಗೆ ಯೇಸು ಹೇಳಿದ್ದನ್ನು ತಿಳಿದುಕೊಳ್ಳಿರಿ. ಇವು ಯೇಸು ಹೇಳಿದ ಕಠಿಣವಾದ ಮಾತುಗಳು ಆದರೆ ಶಿಷ್ಯನಾಗುವುದಕ್ಕೆ ಆತನು ನಮಗೆ ಬಲವನ್ನು ಕೊಡುತ್ತಾನೆ. ಈ ದಿನ ಶಿಷ್ಯರಿಗೋಸ್ಕರ ಯೇಸು ಹುಡುಕುತ್ತಿದ್ದಾನೆ. ಆತನು ನಿಮ್ಮನ್ನು ಸಹ ಶಿಷ್ಯನನ್ನಾಗಿ ಪರಿಗಣಿಸಬಹುದಾ?

obedience-of-jesus

ಯೇಸುವಿನ ವಿಧೇಯತ್ವ – ಯೋಹಾನ 8:28-30 – ರಲ್ಲಿ ಯೇಸು “ತಂದೆಯು ಮೆಚ್ಚುವವುಗಳನ್ನೇ ನಾನು ಯಾವಾಗಲೂ ಮಾಡುತ್ತೇನೆ” ಎಂದು ಹೇಳಿದನು. ಇಲ್ಲಿ ಯಾವಾಗಲೂ ಎನ್ನುವ ಪದ ಮುಖ್ಯವಾದುದ್ದಾಗಿದೆ. ಕೆಲವೊಮ್ಮೆ ಅಥವಾ ಆರಾಮದಾಯಕವಾಗಿರುವಾಗ ಮಾತ್ರ ವಿಧೇಯತೆಯಿಂದಿರುವುದಲ್ಲ. ಯೇಸು ಯಾವಾಗಲೂ ತಂದೆಗೆ ವಿಧೇಯನಾಗಿದ್ದನು – ಜನರು ಆತನನ್ನು ವಿರೋಧಿಸಿದಾಗ, ಆತನು ದಣಿದಾಗ, ಆತನು ಶೋಧನೆಗೂಳಪಟ್ಟಾಗ ಮತ್ತು ಆತನಿಗೆ ಇಷ್ಟವಿಲ್ಲದಿದ್ದಾಗ. ನಿಮ್ಮ ದಿನಚರಿಯಲ್ಲಿ ದೇವರನ್ನು ಮೆಚ್ಚಿಸಲಾಗದಂತಹ ಸಮಯ ಯಾವುದಾದರೂ ಇದೆಯಾ? ಯಾವಾಗಲೂ ವಿಧೇಯರಾಗಿರಲು ದೇವರಿಂದ ಬಲವನ್ನು ಕೇಳಿ. ಇದರಿಂದ ನಿಮ್ಮ ಜೀವಿತದ ಮೂಲಕ ದೇವರು ಮಹಿಮೆಹೊಂದುತ್ತಾರೆ.

how-to-speak

ಹೇಗೆ ಮಾತನಾಡಬೇಕು? – ಯೋಹಾನ 8:26-27 – ಯೇಸು ಮಾತನಾಡುವುದಕ್ಕೆ ಅನೇಕ ವಿಷಯಗಳಿದ್ದರೂ ತಂದೆ ಹೇಳಿದವುಗಳನ್ನು ಮಾತ್ರ ಮಾತಾಡಿದನು. ನಾವು ಹೇಗೆ ಮಾತಾಡುತ್ತಿದ್ದೇವೆ?ದೇವರ ಆತ್ಮನು ಹೇಳಲು ಬಯಸಿದವುಗಳನ್ನೇ ಮಾತನಾಡಲು ನಾವು ಯೇಸುವಿನಿಂದ ಕಲಿತುಕೊಳ್ಳಬಹುದು. ದೇವರೇ, ನನ್ನ ಮಾತುಗಳು ದಯೆ, ಕರುಣೆ ಮತ್ತು ಪ್ರೀತಿಯಿಂದ ತುಂಬಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನನ್ನನ್ನು ಕೇಳುವುದಕ್ಕೆ ಚುರುಕಾಗಿ ಮತ್ತು ಮಾತನಾಡುವುದರಲ್ಲಿ ನಿಧಾನವಾಗಿರಿಸಿರಿ (ಯಾಕೋಬ 1:19). ನನ್ನ ಮಾತುಗಳು ನಿಮ್ಮ ಮನಸ್ಸನ್ನು ಪ್ರತಿಬಿಂಬಿಸಬೇಕು. ಅವು ಸಾಂತ್ವನ ನೀಡಬೇಕೇ ಹೊರತು ಕಠಿಣಪಡಿಸಕೂಡದು, ಶಾಂತಿ ಪಡಿಸಬೇಕೇ ಹೊರತು ವಿಭಾಗಿಸಬಾರದು, ಸ್ತುತಿಸಬೇಕೇ ಹೊರತು ದೂರು ಹೇಳಬಾರದು. ಯೇಸುವಿನ ನಾಮದಲ್ಲಿ. ಆಮೆನ್.

words-of-love

ಪ್ರೀತಿಯ ಮಾತುಗಳು – ಯೋಹಾನ 8:24 – ರಲ್ಲಿ ಯೇಸು “ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು. ಯೇಸುವಿಗೆ ಮಾತ್ರ ಆತ್ಮ ಸಾವಿನ ಬಗ್ಗೆ ಈ ಮಾತುಗಳನ್ನು ಮಾತನಾಡುವ ಹಕ್ಕಿದೆ. ಏಕೆಂದರೆ ಆತನು ನಮ್ಮ ಪಾಪಗಳನ್ನು ಹೊತ್ತುಕೊಂಡನು ಮತ್ತು ನಮಗೋಸ್ಕರ ಮರಣ ಹೊಂದಿದನು. ಈ ಎಚ್ಚರಿಕೆ ನಮ್ಮ ಆತ್ಮದ ಬಗ್ಗೆ ಆತನಿಗಿರುವ ಪ್ರೀತಿ ಮತ್ತು ಕಾಳಜಿ ತುಂಬಿರುವ ಮಾತುಗಳನ್ನು ತೋರ್ಪಡಿಸುತ್ತದೆ. ಏಕೆಂದರೆ ಸೈತಾನನು “ನೀವು ಖಂಡಿತವಾಗಿ ಸಾಯುವದಿಲ್ಲ” (ಆದಿಕಾಂಡ 3:4) ಎಂದು ಹೇಳಿ ಜನರನ್ನು ಮೋಸಪಡಿಸುತ್ತಾನೆ. ಉದಾಹರಣೆಗೆ, ಸೈತಾನನು ಪಾಪವು ಸುಖದಾಯಕ ಎಂದು ಹೇಳುತ್ತಾನೆಯೇ ಹೊರತು ಅದರ ಫಲಿತಾಂಶವನ್ನು ಹೇಳುವುದಿಲ್ಲ. ಆದ್ದರಿಂದ ನಾವು ಯೇಸುವಿನ ಮಾತುಗಳನ್ನು ಮಾತ್ರ ಕೇಳೋಣ.

heavenly-life

ಪರಲೋಕದ ಜೀವಿತ – ಯೋಹಾನ 8:23 – ರಲ್ಲಿ ಯೇಸು “ನೀವು ಈ ಲೋಕದವರು, ನಾನು ಈ ಲೋಕದವನಲ್ಲ” ಎಂದು ಅವಿಶ್ವಾಸಿಗಳಿಗೆ ಹೇಳಿದನು. ಯೇಸುವಿನ ಹಿಂಬಾಲಕರಾದ ನಮ್ಮ ಗುರಿ ಈ ಲೋಕದ್ದಾಗಿರಬಾರದು. ಏಕೆಂದರೆ ಈ ಲೋಕದ ಬಗ್ಗೆ ನಮಗೆ ತಿಳಿದಿದೆ ಮತ್ತು ಈ ಲೋಕ ಸಂಬಂಧವಾದ ಆಸೆಗಳು ಬರುತ್ತಲೇ ಇರುತ್ತವೆ (1 ಯೋಹಾನ 2:15-17 ನ್ನು ಓದಿರಿ). ಸ್ನೇಹಿತರೇ, ಈ ಲೋಕದ ವಸ್ತುಗಳು ಮತ್ತು ವಿಷಯಗಳನ್ನು ಬಿಗಿಯಾಗಿ ಹಿಡಿದುಕೊಳ್ಳಬೇಡಿ. ನಮ್ಮ ಆತ್ಮ ಈ ಲೋಕಕ್ಕೋಸ್ಕರ ಮಾಡಿದಲ್ಲ. ದೇವರೇ, ಈ ಲೋಕದಲ್ಲಿ ನನ್ನ ಹಿಡಿತವನ್ನು ಲಘುವಾಗಿ ನಿರ್ವಹಿಸಲು ನನಗೆ ಸಹಾಯ ಮಾಡಿ. ಅಂದರೆ ಒಬ್ಬ ಪ್ರಯಾಣಿಕ 10 ಚೀಲಗಳ ಬದಲಿಗೆ 1 ಚೀಲವನ್ನು ಹೊರುವ ಹಾಗೆ.

livig-with-christ

ಯೇಸುವಿನ ಜೊತೆ ಜೀವಿಸಿರಿ – ಯೋಹಾನ 8:21-22 – ರಲ್ಲಿ ಯೇಸು “ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದು ಅವಿಶ್ವಾಸಿಗಳಿಗೆ ಹೇಳಿದನು. ನಾನು ಒಂದು ಕ್ಷಣ ಸಹ ಯೇಸುವಿನ ಸಮ್ಮುಖದಿಂದ ದೂರವಿರಲು ಬಯಸುವುದಿಲ್ಲ. ಈ ದಿನ ಈ ವಾಕ್ಯವನ್ನು ನಿಧಾನವಾಗಿ ಓದಿರಿ – ಯೋಹಾನ 14:1,2 – ಯೇಸುವಿನ ಹಿಂಬಾಲಕರಾದ ನಮಗೆ ಇದು ಒಂದು ದೊಡ್ಡ ವಾಗ್ಧಾನವಾಗಿದೆ. ಆತನು ನಮೆಲ್ಲರಿಗೋಸ್ಕರ ಒಂದು ಸ್ಥಳವನ್ನು ಸಿದ್ಧಪಡಿಸಿದ್ದಾನೆ ಮತ್ತು ನಾವು ಶಾಶ್ವತವಾಗಿ ಆತನೊಂದಿಗೆ ಇರುತ್ತೇವೆ. ದೇವರೇ, ನೀವು ನಮಗೆ ಸ್ಥಳವನ್ನು ಸಿದ್ಧ ಮಾಡುವ ಹಾಗೆ, ಈ ಭೂಮಿಯಲ್ಲಿ ಇರುವ ಕಾಲವೆಲ್ಲಾ ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಆರಾಧಿಸಬೇಕು.

personal-prayer

ಈ ದಿನ ವೈಯಕ್ತಿಕ ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯೋಣ. ಈ ಪ್ರತಿದಿನದ ಧ್ಯಾನಗಳು ನಮ್ಮ ಜೀವಿತದಲ್ಲಿ ಪ್ರಭಾವ ಬೀರಬೇಕೆಂದು ಪ್ರಾರ್ಥನೆ ಮಾಡಬೇಕು. ನಾನು ಪ್ರಾರ್ಥನೆ ಮಾಡಿದಾಗ, ನಾನು ನನ್ನ ಸ್ವಂತ ಪ್ರವೃತ್ತಿಗಳನ್ನು ನಂಬುವುದಿಲ್ಲ ಬದಲಿಗೆ ನಾನು ಸಮಸ್ತವನ್ನು ದೇವರಿಗೆ ಅರ್ಪಿಸುತ್ತೇನೆ ಎಂದು ಅರ್ಥ. ಆದ್ದರಿಂದ ಆತನು ನನ್ನಿಂದ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾನೆ. ಏಕೆಂದರೆ ನಾನು ಬೆಲೆ (ಯೇಸುವಿನ ಅಮೂಲ್ಯವಾದ ರಕ್ತ)ಯಿಂದ ಕೊಂಡುಕೊಳ್ಳಲ್ಪಟ್ಟಿದ್ದೇನೆ ಮತ್ತು ನನ್ನ ಶರೀರ ನನಗೆ ಸಂಬಂಧಿಸಿದಲ್ಲ (1ಕೊರಿಂಥ 6:19,20). ಈ ದಿನ ನಾವು ಪ್ರಾರ್ಥಿಸುವುದಕ್ಕೆ ಮತ್ತು ದೇವರ ಸ್ವರವನ್ನು ಕೇಳುವುದಕ್ಕೆ ಒಂದು ನಿಶಬ್ಧ ಸ್ಥಳವನ್ನು ಹುಡುಕೋಣ. ನೀವು ಏನನ್ನು ಕಲಿತುಕೊಂಡಿರಿ ಎಂದು ನನಗೆ ತಿಳಿಸಿ.

know-god

ದೇವರನ್ನು ಅರಿತುಕೊಳ್ಳಿರಿ – ಯೋಹಾನ 8:19-20 – ರಲ್ಲಿ ಯೇಸು “ನೀವು ನನ್ನನ್ನು ಅರಿತುಕೊಂಡಿದ್ದರೆ ನನ್ನ ತಂದೆಯನ್ನು ಸಹ ಅರಿತುಕೊಳ್ಳುತ್ತಿದ್ದಿರಿ” ಎಂದು ಹೇಳಿದನು. ದೇವರ ಪ್ರೀತಿ ಮತ್ತು ಕೃಪೆಯನ್ನು ನಮ್ಮ ಜೀವನದಲ್ಲಿ ಅನುಭವಿಸುತ್ತಿರುವುದು ಅತಿದೊಡ್ಡ ಆಶೀರ್ವಾದವಾಗಿದೆ. ನೀವು “ದೇವರು ಒಳ್ಳೆಯವನಾಗಿದ್ದಾನೆ ಎಂದು ರುಚಿನೋಡುವ ತನಕ” ನಿಮಗೆ ತೃಪ್ತಿಯಾಗುವುದಿಲ್ಲ. ಉದಾಹರಣೆಗೆ, ನೀವು ಸ್ವೀಕರಿಸುವ ಮತ್ತು ಇತರರಿಗೆ ದೇವರ ಪ್ರೀತಿಯನ್ನು ನೀಡುವ ನೀರಿನ ಟ್ಯಾಂಕ್ ಹಾಗೆ. ಆತನು ಎಲ್ಲಾ ಕತ್ತಲೆಯ ಹಿಡಿತದಿಂದ ನೀವು ಗೆಲ್ಲಲು ತನ್ನನ್ನೇ ತ್ಯಾಗ ಮಾಡಿದ್ದರಿಂದ ನೀವು ಜೀವನದಿಯಲ್ಲಿ ಚಿತ್ರಿಸಿದ ನೀರಾಗಿದ್ದೀರಿ. ಆತನು ಪ್ರಥಮವಾಗಿ ನಮ್ಮನ್ನು ಪ್ರೀತಿಸಿದರಿಂದ ನಾವೂ ಸಹ ಪ್ರೀತಿಸುತ್ತೇವೆ.

dont-judge

ನ್ಯಾಯ ತೀರಿಸಬೇಡಿ – ಯೋಹಾನ 8:15-18 – ರಲ್ಲಿ ಯೇಸು “ನನ್ನ ತೀರ್ಪು ನಿಜವಾದದ್ದು” ಎಂದು ಹೇಳಿದನು. ಆದರೆ ಧಾರ್ಮಿಕ ಜನರು ಯೇಸುವಿಗೆ ತಪ್ಪಾಗಿ ತೀರ್ಪು ನೀಡಿದರು. ನಾವು ತ್ವರಿತವಾಗಿ ಮತ್ತು ತಪ್ಪಾಗಿ ಜನರನ್ನು ನ್ಯಾಯ ತೀರಿಸುವುದು ನಮ್ಮ ಜೀವಿತದಲ್ಲಿನ ಒಂದು ಹೋರಾಟವಾಗಿದೆ. 1 ಕೊರಿಂಥ 4:5 ರಲ್ಲಿ ಹೇಳಿದಂತೆ, ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ. ಆದ್ದರಿಂದ ನಾವು ಜನರನ್ನು ನ್ಯಾಯತೀರಿಸದಂತೆ ಮತ್ತು ದೇವರು ನ್ಯಾಯತೀರಿಸುವ ದಿನದ ತನಕ ತಾಳ್ಮೆಯಿಂದಿರಲು ನಮಗೆ ಕೃಪೆಯ ಅಗತ್ಯವಿದೆ. ಯೇಸು ನಮಗೆ ನ್ಯಾಯತೀರಿಸಲಿಲ್ಲ ಬದಲಿಗೆ ನಮ್ಮನ್ನು ರಕ್ಷಿಸಿದನು ಆದ್ದರಿಂದ ನಾವು ಸಹ ನ್ಯಾಯತೀರಿಸಬಾರದು (ಯೋಹಾನ 3:17).

walk-in-light

ಬೆಳಕಿನಲ್ಲಿ ನಡೆಯಿರಿ – ಯೋಹಾನ 8:13,14 – ಯೇಸು ತಮಗೆ ಬೆಳಕಾಗಿದ್ದಾನೆಂದು ಧಾರ್ಮಿಕ ಜನರು ನಂಬಲಿಲ್ಲ. ಅವರು ತಮ್ಮದೇ ಆದ ರೀತಿಗಳಲ್ಲಿ ನಂಬಿಕೆ ಇಟ್ಟಿದ್ದರು. ನಮಗೆ 2 ಆಯ್ಕಗಳಿವೆ, ಒಂದು ನಮ್ಮ ಆಯ್ಕೆಗಳನ್ನು ನಾವು ನಿಯಂತ್ರಿಸುವುದಾದರೆ ಆಸೆಗಳು. ಮತ್ತೊಂದು, ನಮ್ಮ ಎಲ್ಲಾ ಆಸೆಗಳನ್ನು ಮತ್ತು ನಿರ್ಧಾರಗಳ ಮೇಲೆ ಯೇಸುವಿನ ಪ್ರಭಾವವಿರುವಾಗ. ನಾವು ಸಹ ನಮ್ಮದೇ ಆದ ರೀತಿಗಳನ್ನು ಬಳಸುವುದರಿಂದ ಯೇಸುವನ್ನು ಹಿಂಬಾಲಿಸುವುದು ನಮಗೆ ಕಠಿಣವಾಗಿರುತ್ತದೆ. ಇದು ಕೊಳಕು ಬಟ್ಟೆಗಳನ್ನು ತೊಳೆದು ಸೂರ್ಯನ ಬೆಳಕಿನಲ್ಲಿ ನೇತು ಹಾಕುವ ರೀತಿ, ಬೆಳಕು ಮತ್ತು ಯೇಸುವಿನ ಪ್ರಭಾವದ ಮೂಲಕ ನಮ್ಮ ಎಲ್ಲಾ ಆಸೆಗಳನ್ನು ಮತ್ತು ನಿರ್ಧಾರಗಳನ್ನು ಪಡೆಯೋಣ.

follow-the-light

ಬೆಳಕನ್ನು ಹಿಂಬಾಲಿಸಿರಿ – ಯೋಹಾನ 8:12b – ರಲ್ಲಿ ಯೇಸು “ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ, ಆದರೆ ಜೀವದ ಬೆಳಕನ್ನು ಹೊಂದುವನು” ಎಂದು ಹೇಳಿದನು. ಹಿಂದಿನ ದಿನ ನಾವು ನೋಡಿದ ಹಾಗೆ, ನಾವು ಯೇಸುವನ್ನು ಹಿಂಬಾಲಿಸುವುದನ್ನು ನಿಲ್ಲಿಸುವುದು ಈ ಪ್ರಪಂಚದ ದೇವರ ಬಯಕೆಯಾಗಿದೆ. ದೇವರ ಜೊತೆ ಸಮಯವನ್ನು ಕಳೆಯದಂತೆ ಆವನು ನಮ್ಮನ್ನು ತಡೆಯುತ್ತಾನೆ – ವೈಯಕ್ತಿಕ ಪ್ರಾರ್ಥನೆ ಮತ್ತು ದೇವರ ವಾಕ್ಯದ ಧ್ಯಾನ. ಅವನು ನಮ್ಮನ್ನು ಇತರ ಭಕ್ತರೊಂದಿಗೆ ಸಮಯ ಕಳೆಯುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಆತನನ್ನು ಹಿಂಬಾಲಿಸಲು ಅಡ್ಡಿಯಾಗುವ ಕತ್ತಲೆಯ ಪಡೆಗಳೊಂದಿಗೆ ಹೋರಾಡಲು ದೇವರ ಬಳಿ ಶಕ್ತಿಯನ್ನು ಕೇಳಿರಿ. ಬನ್ನಿರಿ, ಈ ದಿನವೇ ಯೇಸುವಿನೊಂದಿಗೆ ಸಮಯವನ್ನು ಕಳೆಯೋಣ.

do-yo-see-the-light-copy

ನೀವು ಬೆಳಕನ್ನು ನೋಡಿದ್ದೀರಾ? – ಯೋಹಾನ 8:12a – ರಲ್ಲಿ ಯೇಸು “ನಾನೇ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು. ಯೇಸುವಿನ ಬೆಳಕು ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತಪ್ಪಿಸಲು ಮತ್ತು ನಮಗೆ ದಾರಿ ತೋರಿಸಲು ಸಹಾಯ ಮಾಡುತ್ತದೆ. ಆದರೆ ಯೇಸುವಿನ ಬೆಳಕನ್ನು ನೋಡದಂತೆ ಯಾರೋ ಒಬ್ಬರು ನಮ್ಮನ್ನು ಮಂಕು ಮಾಡಿದ್ದಾನೆ(2 ಕೊರಿಂಥ 4:4). ಅವನನ್ನೇ ಈ ಪ್ರಪಂಚದ ದೇವರು ಎಂದು ಕರೆಯಲಾಗುತ್ತದೆ. ಅವನ ಕೆಲಸ ಯೇಸುವಿನ ಬೆಳಕನ್ನು ನೋಡದಂತೆ ದೇವರ ಜನರನ್ನು ಕುರುಡು ಮಾಡುವುದಾಗಿದೆ. ಯೇಸುವಿನ ಬೆಳಕನ್ನು ಮತ್ತು ಮಹಿಮೆಯನ್ನು ನೋಡದಂತೆ ವ್ಯಪಾರ ಮತ್ತು ಲೋಕದ ಮೇಲಿನ ಕಾಳಜಿ ಎನ್ನುವ ಕುರುಡು ನಿಮ್ಮನ್ನು ತಡೆಮಾಡದಂತೆ ನಾನು ಪ್ರಾರ್ಥಿಸುತ್ತೇನೆ.

how-to-sin-no-more

ಇನ್ನು ಪಾಪಮಾಡದೆ ಇರುವುದು ಹೇಗೆ? – ಯೋಹಾನ 8: 10-11 – ರಲ್ಲಿ ಯೇಸು “ಹೋಗು, ಇನ್ನು ಮೇಲೆ ಪಾಪಮಾಡಬೇಡ” ಎಂದು ಹೇಳಿದನು. “ಇನ್ನು ಮೇಲೆ ಪಾಪಮಾಡಬೇಡ” ಎಂಬುದರ ಅರ್ಥವೇನು? ಇದರ ಅರ್ಥ ಯೇಸು ಆಕೆಯ ಜೀವಿತವನ್ನು ಮಾರ್ಪಡಿಸಿಕೊಳ್ಳುವಂತೆ ಪ್ರೋತ್ಸಹಿಸಿದನು. ಯೇಸು ಆಕೆಯ ಕಳೆದುಹೋದ ಜೀವಿತವನ್ನು ಖಂಡಿಸಲಿಲ್ಲ ಆದರೆ ವಿಶ್ವಾಸದಿಂದ ಮುಂದೆ ಹೋಗುವಂತೆ ಪ್ರೋತ್ಸಹಿಸಿದನು. ಈ ದಿನ ನೀವು ಕ್ರಿಸ್ತನಲ್ಲಿರುವಾಗ, ನೀವು ಖಂಡಿಸಲ್ಪಡುವುದಿಲ್ಲ (ರೋಮ 8:1) ಆದರೆ ಆತನ ಕೃಪೆಯ (ರೋಮ 6:14) ಮೂಲಕ ಪಾಪವನ್ನು ಜಯಿಸಲು ಬಲವನ್ನು ಹೊಂದಿಕೊಳ್ಳಬಹುದು. ಒಂದು ವೇಳೆ ನಿಮ್ಮ ಗತಕಾಲವು ನಿಮ್ಮನ್ನು ಮುಂದಕ್ಕೆ ಹೋಗದಂತೆ ತಡೆಯುತ್ತಿದ್ದರೆ, ತಕ್ಷಣ ಪಾಪವನ್ನು ಜಯಿಸಲು ಯೇಸುವಿನ ಬಳಿ ಸಹಾಯವನ್ನು ಪಡೆಯಿರಿ.

obeying-conscience

ಮನಸಾಕ್ಷಿಯನ್ನು ಪರಿಪಾಲಿಸುವುದು – ಯೋಹಾನ 8: 9 – ಕಠಿಣ ಹೃದಯವನ್ನು ಹೊಂದಿರುವ ಜನರು ಕಲ್ಲುಗಳನ್ನು ಬಿಟ್ಟುಬಿಟ್ಟರು. ಏಕೆ? ಏಕೆಂದರೆ ಅವರು ನವಿರಾದ ಆತ್ಮಸಾಕ್ಷಿಯನ್ನು ಹೊಂದಿ್ದದರು. ದೇವರ ಮಕ್ಕಳಾಗಿರುವ ನಮ್ಮ ಮನಸಾಕ್ಷಿ ದೇವರ ಪ್ರೀತಿಯಲ್ಲಿ ಮತ್ತು ಆತ್ಮದಲ್ಲಿ ಸುತ್ತಬೇಕಾದ ಅಗತ್ಯವಿದೆ. ಆದ್ದರಿಂದ ದೇವರು ಸತ್ಯವೇದದ ಮೂಲಕ ಅಥವಾ ಪ್ರಾರ್ಥನೆ ಸಮಯದಲ್ಲಿ ನಮ್ಮ ಜೊತೆ ಮಾತನಾಡುವಾಗ ತಕ್ಷಣ ಪಚ್ಚಾತ್ತಾಪ ಅಥವಾ ಧ್ವೇಷದ ಕಲ್ಲುಗಳನ್ನು ಬಿಟ್ಟುಬಿಡಬೇಕು. ಮತ್ತು ನಾವು ನವಿರಾದ ಮನಸಾಕ್ಷಿಗೋಸ್ಕರ ಮಾತ್ರವಲ್ಲದೆ ಯೇಸುವಿನ ರಕ್ತದ ಜೊತೆ ಸಿಂಪಡಿಸಿದ ಆತ್ಮಸಾಕ್ಷಿಗಾಗಿ ಪ್ರಾರ್ಥನೆ ಮಾಡೋಣ. ಇದು ಆಜ್ಞಾಧಾರಕ ಮತ್ತು ಆನಂದ ಜೀವಿತದ ಒಂದು ಆರಂಭ. ಆಮೆನ್.

drop-the-stone

ಆ ಕಲ್ಲನ್ನು ಬಿಟ್ಟುಬಿಡಿ – ಯೋಹಾನ 8: 7-8 – ಯೇಸು ಯಾವುದೇ ಪಾಪ ಮಾಡಲಿಲ್ಲವಾದರೂ ಸಹ ಆ ಸ್ತ್ರೀಯ ಮೇಲೆ ಕಲ್ಲನ್ನು ಎಸೆಯಲಿಲ್ಲ. ನಾವು ಮತ್ತೊಬ್ಬರನ್ನು ದೂಷಿಸಲು 1000 ಕಾರಣಗಳಿರಬಹುದು ಆದರೆ ಅವರನ್ನು ಪ್ರೀತಿಸಲು ಒಂದು ಕಾರಣವಿದೆ. ಯೇಸುವಿನ ಆತ್ಮವನ್ನು ಹೊಂದಿರುವ ಮನುಷ್ಯರಾಗಿರುವ ನಾವು ಹೇಗೆ ಎಸೆಯಲು ಕಲ್ಲನ್ನು ಆಯ್ಕೆಮಾಡಬಹುದು? ಕಲ್ಲನ್ನು ಎಸೆಯುವುದು ನಮ್ಮ ರಕ್ಷಕನ ಹೃದಯವಲ್ಲ. ಆದ್ದರಿಂದ ನನ್ನನ್ನು ಯಾರಾದರೂ ನೋಯಿಸಿದರೂ ಆಥವಾ ಧ್ವೇಷಿಸಿದರೂ ಸಹ ನಾನು ಕಲ್ಲನ್ನು ಹಿಡಿಯುವುದಿಲ್ಲ ಅಥವಾ ಎಸೆಯುವುದಿಲ್ಲ. ದೇವರೇ, ನಿಮ್ಮ ಮನಸ್ಸನ್ನು ತಿಳಿದುಕೊಂಡು ಮ್ತತು ನಿಮ್ಮ ಪ್ರೀತಿಯಲ್ಲಿ ನೆಲೆಸಲು ಸಹಾಯ ಮಾಡು.

accuser-or-forgiver

ಕ್ಷಮಿಸುವುದು ಅಥವಾ ದೂಷಿಸುವುದು – ಯೋಹಾನ 8: 3-6 – ಇಲ್ಲಿ ನಾವು ಧಾರ್ಮಿಕ ಜನರು ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ದೂಷಿಸುವುದನ್ನ ನೋಡಬಹುದು. ದೂಷಿಸುವ ಆತ್ಮಕ್ಕೆ ಕ್ಷಮಾಪಣೆಯೇ ಇಲ್ಲ. ಅದು ಯಾವಾಗಲೂ ಇತರರ ತಪ್ಪನ್ನು ಹುಡುಕಲು ಪ್ರಯತ್ನಿಸುತ್ತಿರುತ್ತದೆ ಮತ್ತು ಯಾವಾಗಲೂ ಕೆಟ್ಟದಾಗಿ ಊಹಿಸುತ್ತಿರುತ್ತದೆ. ಸೈತಾನನು ಸಹ ಜನರನ್ನು ಹಗಲಿರುಳು ದೂಷಿಸಿತ್ತಿರುತ್ತಾನೆ (ಪ್ರಕಟಣೆ 12:10). ನಮಗೆ ದೂಷಿಸುವ ಆತ್ಮ ಬೇಡ ಬದಲಿಗೆ ಕ್ಷಮಿಸುವ ಯೇಸುವಿನ ಆತ್ಮ ನಮಗೆ ಬೇಕು. ದೇವರೇ, ಈ ದಿನದಿಂದ ಇತರರ ತಪ್ಪುಗಳನ್ನು ಹುಡುಕುವ ಸ್ವಭಾವದಿಂದ ಬಿಡುಗಡೆಯನ್ನು ಕೊಡಿ ಮತ್ತು ಸಮಸ್ತವನ್ನು ನಿಮಗೆ ಸಮರ್ಪಿಸುವ ಹೃದಯವನ್ನು ದಯಪಾಲಿಸಿ. ಪ್ರೀತಿಸುವ ನಿಮ್ಮ ಹೃದಯವು ನನಗೆ ಬೇಕು.

listen

ಯೇಸುವನ್ನು ಆಲಿಸಿರಿ – ಯೋಹಾನ 8: 1-2 – ವಿರೋಧದ ನಡುವೆಯೂ ಸಹ ಯೇಸು ಬೆಳಿಗ್ಗೆಯೇ ಭೋದಿಸಲು ಕುಳಿತುಕೊಂಡನು. ಇದು ಶಿಕ್ಷಕರು ಕೋಣೆಯಲ್ಲಿ ಬಂದಾಗ ವಿದ್ಯಾರ್ಥಿಗಳು ಹಾಜರಿಲ್ಲದಿರುವ ರೀತಿಯಾಗಿದೆ. ನಾವು ಯಾವಾಗಲೂ ಯೇಸುವಿನಿಂದ ಕಲಿತುಕೊಳ್ಳಲು ಹಾಜರಾಗಿರೋಣ. ಇತರರನ್ನು ನಿಸ್ವಾರ್ಥವಾಗಿ ಪ್ರೀತಿಸಲು, ನಮ್ಮ ಚಿತ್ತವನ್ನು ತ್ಯಾಗ ಮಾಡಲು ಮತ್ತು ಸ್ವಾರ್ಥತ್ವದಿಂದ ಬಿಡುಗಡೆ ಈ ಎಲ್ಲವನ್ನು ನಮಗೆ ಬೇರೆ ಯಾರೂ ಹೇಳಿಕೊಡುವುದಿಲ್ಲ? ಯೇಸು ನಿಮಗೆ ಅನೇಕ ಸತ್ಯಗಳನ್ನು ಬಹಿರಂಗ ಮಾಡಬೇಕೆಂದು ಆಶಿಸುತ್ತಾನೆ. ಈ ದಿನ ಸ್ವಲ್ಪ ಸಮಯವನ್ನು ತೆಗೆದುಕೊಂಡು ಯೋಹಾನ 8 ನ್ನು ಓದಿರಿ ಮತ್ತು ದೇವರ ಸ್ವರವನ್ನು ಕೇಳಿರಿ. ದೇವರೇ, ನನ್ನ ಕಿವಿಗಳನ್ನು ತೆರೆಯಿರಿ.

spiritual-growth

ಆತ್ಮೀಕ ಬೆಳವಣಿಗೆ – ಯೋಹಾನ 7: 50-53b – ಆತ್ಮೀಕವಾಗಿ ಬೆಳೆಯುವುದರ ಅರ್ಥವೇನು? ಉದಾಹರಣೆಗೆ, ನೀವು ಅನ್ಯಾಯವಾಗಿ ಇತರರನ್ನು ನ್ಯಾಯತೀರಿಸಲು ಕಾರಣವಾದ ನಿಮ್ಮ ಜೀವನದಲ್ಲಿರುವ ಕೆಲವು ಸಾಧನೆಗಳ ಬಗ್ಗೆ ನಿಮಗೆ ರಹಸ್ಯವಾಗಿ ಹೆಮ್ಮೆ ಇರಬಹುದು. ಆದರೆ ಈಗ, ದೇವರು ದೀನತೆಯ ಬಗ್ಗೆ ಹೇಳಿಕೊಟ್ಟಿರಬಹುದು. ಆದ್ದರಿಂದ ನಾವು ಈಗ ತಗ್ಗಿಸಿಕೊಳ್ಳುತ್ತಿದ್ದೇವೆ ಏಕೆಂದರೆ ಎಲ್ಲವನ್ನೂ ನಾವು ದೇವರ ಕೃಪೆಯ ಮೂಲಕ ಪಡೆದುಕೊಳ್ಳುತ್ತಿದ್ದೇವೆ ಮತ್ತು ನಮ್ಮ ಹೆ್ಗಗಳಿಕೆಗೆ ನಮಗೆ ಯಾವುದೇ ಹಕ್ಕಿಲ್ಲ(1 ಕೊರಿಂಥ 4: 7). ನಾವು ದೇವರ ಇಷ್ಟಾನುಸಾರವಾಗಿ ನಡೆಯುವಾಗ, ನಿಮ್ಮ ಜೀವಿತದಲ್ಲಿ ಸರಿಯಿಲ್ಲದ ಇತರ ಜಾಗಗಳಲ್ಲಿ ಆತನು ಕೆಲಸ ಮಾಡುತ್ತಾನೆ. ಬನ್ನಿ, ಯೇಸುವಿನಿಂದ ಕಲಿತುಕೊಳೋಣ!!

grow-dont-stand

ನಿಲ್ಲಬೇಡಿರಿ, ಬೆಳೆಯಿರಿ – ಯೋಹಾನ 7: 50-53a – ನಿಕೋದೇಮನು ಬಹಿರಂಗವಾಗಿ ಯೇಸುವನ್ನು ಬೆಂಬಲಿಸಿದನು. ಇದಕ್ಕೂ ಮುಂಚೆ ಅವನು ಯೇಸುವಿನ ಗುಪ್ತ ಹಿಂಬಾಲಕನಾಗಿದ್ದನು. ಇಲ್ಲಿ ನಾವು ಯೇಸುವಿನ ಮೇಲಿರುವ ತನ್ನ ನಂಬಿಕೆಯಲ್ಲಿ ಬೆಳೆಯು್ತತಿರುವುದನ್ನು ನೋಡಬಹುದು. ನಾವು ಜೀವನದಲ್ಲಿ ವೃತ್ತಿ, ಜ್ಞಾನ, ಶಿಕ್ಷಣ ಈಗೆ ಎಲ್ಲ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಆದರೆ ದೇವರಲ್ಲಿ ಬೆಳೆಯುವುದು ಮತ್ತು ಆತನ ಹೃದಯದ ಬಗ್ಗೆ ತಿಳಿದುಕೊಳ್ಳುವುದನ್ನು ಹೆಚ್ಚಿಸುವುದು ತುಂಬಾ ಮುಖ್ಯವಾದುದ್ದಾಗಿದೆ. ನಾವು ನಾಳೆ ಒಂದು ಆತ್ಮೀಕ ಬೆಳವಣಿಗೆಯ ಉದಾಹರಣೆಯನ್ನು ನೋಡೋಣ. ಈ ದಿನ ನೀವು ಪ್ರಾರ್ಥನೆಯಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದರ ಮೂಲಕ ದೇವರ ಅಂತರಂಗವನ್ನು ತಿಳಿದುಕೊಳ್ಳುವಂತೆ ಮತ್ತು ಆತನ ಕೃಪೆಯಲ್ಲಿ ಬೆಳೆಯುವಂತೆ ದೇವರನ್ನು ಕೇಳಿ. ಯೇಸುವಿನ ನಾಮದಲ್ಲಿ, ಆಮೆನ್.

follow-jesus-not-releigion

ಧರ್ಮವನ್ನು ಪಾಲಿಸದೆ ಯೇಸುವನ್ನು ಪಾಲಿಸಿ – ಯೋಹಾನ 7:47-49 – ಯೇಸುವನ್ನು ದ್ವೇಶಿಸಿದ ಪರಿಸಾಯರು “ಸಂಪ್ರದಾಯವನ್ನು ಅರಿಯದ ಜನರು ಶಾಪಗ್ರಸ್ತರು” ಎಂದು ಹೇಳಿದರು. ಧರ್ಮವನ್ನು ಪಾಲಿಸುವುದೆಂದರೆ ಸಂಪ್ರದಾಯವನ್ನು ತಿಳಿಯುವುದು ಮತ್ತು ಅದನ್ನು ಇರಿಸಿಕೊಳ್ಳುವುದಾಗಿದೆ. ಆದರೆ ಯೇಸುವನ್ನು ಪಾಲಿಸುವುದೆಂದರೆ ಆತನನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವುದು. ನಿಮ್ಮ ಜೀವನದಲ್ಲಿ, ನೀವು ಸಂಪ್ರದಾಯದ ನಿಮಿತ್ತ ಏನಾದರೂ ಮಾಡುತ್ತಿದ್ದೀರಾ? ಉದಾಹರಣೆಗೆ, ಸತ್ಯವೇದ ಓದುವುದು ಒಂದು ಸಂಪ್ರದಾಯವಾಗಿ ಇರಬಹುದು. ಆದರೆ ಯೇಸುವಿನ ಅನುಯಾಯಿಗೆ, ಯೇಸುವಿನ ಹೃದಯವನ್ನು ತಿಳಿದುಕೊಳ್ಳುವುದು ಮತ್ತು ದೇವರ ಮಾತುಗಳನ್ನು ಕೇಳುವುದು ಒಂದು ರೋಮಾಂಚಕಾರಿ ಸಮಯವಾಗಿರುತ್ತದೆ.

words-of-jesus

ಯೇಸುವಿನ ಮಾತುಗಳು – ಯೋಹಾನ 7:45-46 – ಯೇಸುವನ್ನು ಬಂಧಿಸಲು ಬಯಸಿದ ಅಧಿಕಾರಿಗಳು “ಈ ರೀತಿಯ ಮಾತುಗಳನ್ನು ಯಾವುದೇ ವ್ಯಕ್ತಿ ಹಿಂದೆಂದೂ ಆಡಲಿಲ್ಲ” ಎಂದು ಹೇಳಿದರು. ಯೇಸುವಿನ ಮಾತುಗಳು ಹೃದಯವನ್ನು ಬದಲಾಯಿಸಬಹುದಂತಹ ಪ್ರಬಲವಾಗಿಯೂ ಮತ್ತು ಮಗುವಿಗೆ ಅರ್ಥವಾಗುವಂತಹ ಸರಳವಾಗಿಯೂ ಇದ್ದವು. ಯೋಹಾನ 6:63 ರಲ್ಲಿ ಯೇಸು ಹೇಳಿದಂತೆ, ಆತನ ಮಾತುಗಳು ನಂಬುವವರಿಗೆ ಆತ್ಮವಾಗಿಯೂ ಮತ್ತು ಜೀವವಾಗಿಯೂ ಇವೆ. ನಂಬುವುದು ಎಂದರೆ ನಾವು ಪ್ರತಿದಿನ ಕೇಳುವ ಅಭಿಪ್ರಾಯಗಳಿಗಿಂತ ಮತ್ತು ಆಲೋಚನೆಗಳಿಗಿಂತ ಯೇಸುವಿನ ಮಾತುಗಳನ್ನು ವಿಶ್ವಾಸಿಸಿ ಮತ್ತು ಅದನ್ನು ಅನುಸರಿಸುವುದಾಗಿದೆ. ಪ್ರತಿದಿನ ವಾಕ್ಯಗಳನ್ನು ವೇಗವಾಗಿ ಓದದೆ ನಿಧಾನವಾಗಿ ಧ್ಯಾನಿಸಿ ಆತನ ಮಹಿಮೆಯನ್ನು ಹೊಂದಿರಿ.

who-is-jesus

ಯೇಸು ಯಾರು? – ಯೋಹಾನ 7: 40-44 – ಯೇಸು ಒಬ್ಬ ಪ್ರವಾದಿ, ಒಳ್ಳೆಯ ಮನುಷ್ಯನು ಅಥವಾ ಕ್ರಿಸ್ತನು ಎಂದು ಜನರು ಹೇಳಿದರು. ನಿಮ್ಮ ವೈಯಕ್ತಿಕವಾಗಿ ಯೇಸು ಯಾರು? ಆತನು ನಮ್ಮ ದೇವರು ಮತ್ತು ರಕ್ಷಕನು. ಆತನು ನಮ್ಮ ಪಾಪಗಳಿಂದ ನಮ್ಮನ್ನು ರಕ್ಷಿಸಿದನು ಮತ್ತು ಬಿಡಿಸಿದನು ಆದ್ದರಿಂದ ಆತನು ನಮಗೆ ರಕ್ಷಕನಾಗಿದ್ದಾನೆ. ನಮ್ಮನ್ನು ನಡೆಸಿ ಮತ್ತು ನಮ್ಮ ಜೀವನದ ಎಲ್ಲಾ ವಿಷಯಗಳ ಮೇಲೆ ಆಧ್ಯತೆಯನ್ನು ತೆಗೆದುಕೊಂಡದ್ದರಿಂದ ಆತನು ನಮಗೆ ದೇವರಾಗಿದ್ದಾನೆ (2 ಪೇತ್ರ 3:18). ನಾವು ಏನನ್ನು ಮಾಡುವಂತೆ ಆತನು ಹೇಳುತ್ತಾನೆ. ನಾವು ಏನನ್ನು ಕಲಿಯುವಂತೆ ಆತನು ಭೋದಿಸುತ್ತಾನೆ. ಆತನು ಎಲ್ಲಿ ನಡೆಸುತ್ತಾನೋ, ಅಲ್ಲಿಗೆ ನಡೆಯುತ್ತೇನೆ. ಯೇಸು ನನ್ನ ಸ್ವಯಂ, ಕುಟುಂಬ, ಮತ್ತು ಎಲ್ಲವುಗಳಿಗಿಂತ ಮೊದಲ ಸ್ಥಾನದಲ್ಲಿರುವಂತೆ ನಾನು ಪ್ರಾರ್ಥಿಸುತ್ತೇನೆ. ಆಮೆನ್.

ತಲೆಯ ಜ್ಞಾನದಿಂದಿರದೆ ಹೃದಯ ಜ್ಞಾನದಿಂದಿರಿ – ಯೋಹಾನ 7: 40-43 – ಯೇಸುವನ್ನು ಸಂಶಯ ಪಟ್ಟ ಜನರಿಗೆ ಗ್ರಂಥದ ಜ್ಞಾನವಿತ್ತು. ಏಕೆಂದರೆ ಅವರು ತಮ್ಮ ಜೀವನಲ್ಲಿ ದೇವರ ವಾಕ್ಯದ ಬಲದ ಪ್ರಭಾವಕ್ಕೆ ಒಳಗಾಗಿರಲಿಲ್ಲವಾದ್ದರಿಂದ ಅದು ತಲೆಯ ಜ್ಞಾನವಾಗಿತ್ತು. ಸತ್ಯವೇದದ ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದರಿಂದ ಪ್ರಯೋಜನವಿಲ್ಲ, ಇದು ನಮ್ಮ ಹೃದಯದಲ್ಲಿ ಯಾವುದೇ ರೀತಿಯ ಕೆಲಸ ಮಾಡುವುದಿಲ್ಲ. ಅಂದರೆ ದೇವರ ಮುಂದೆ ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ (ಯಾಕೋಬ 2:19). ದೇವರೇ, ನಿನಗೆ ಆಪ್ತನಾಗಿರಲು ಮತ್ತು ಬದಲಾಗಲು ನನಗೆ ಹೃದಯ-ಜ್ಞಾನದ ಅಗತ್ಯವಿದೆ ಮತ್ತು ನಿನ್ನ ವಾಕ್ಯದ ಕೆಲಸಗಳನ್ನು ಅನುಮತಿಸಲು ನನಗೆ ಕೃಪೆಯ ಅಗತ್ಯವಿದೆ.

ಸ್ವೀಕರಿಸಲು ವಿಶ್ವಾಸಿಸಿರಿ – ಯೋಹಾನ 7:39 – ಯೇಸು ಜೀವನದಿಯ ಬಗ್ಗೆ ಮಾತನಾಡುತ್ತಿದ್ದಾಗ ಆತನು ಪವಿತ್ರಾತ್ಮನ ಬಗ್ಗೆ ಹೇಳುತ್ತಿದ್ದನು. ಇಲ್ಲಿ ಕ್ರೈಸ್ತ ಜೀವಿತವನ್ನು ಜೀವಿಸಲು 2 ಮಾರ್ಗಗಳಿವೆ – 1) ಸ್ವಾರ್ಥಿ ಜೀವನದ ಮೇಲೆ ಜಯ ಇಲ್ಲದೆ ನಮ್ಮ ಸ್ವಂತ ಬಲದಿಂದ ಜೀವಿಸುವ ಜೀವಿತ. 2) ಪವಿತ್ರಾತ್ಮನ ಬಲವು ನಮ್ಮ ಜೀವನದಲ್ಲಿ ಕ್ರಿಯೆ ನಡೆಸಿ ಸ್ವಾರ್ಥತ್ವವನ್ನು ಜಯಿಸುವ ಜೀವಿತ. ನಾವೆಲ್ಲರೂ ಪವಿತ್ರಾತ್ಮನ ಬಲದಿಂದ ಜೀವಿಸುವಂತೆ ಯೇಸು ನಿರೀಕ್ಷಿಸುತ್ತಾನೆ. ಆದ್ದರಿಂದ ಆತನು, ನಾನು ನಿಮಗೋಸ್ಕರ ಸಹಾಯಕನನ್ನು ಕಳುಹಿಸುತ್ತೇನೆ (ಯೋಹಾನ 14:16) ಎಂದು ಹೇಳಿದನು. ಈ ದಿನವೇ ನಾವು ನಂಬಿಕೆಯಿಂದ ಪ್ರಾರ್ಥಿಸುವುದರಿಂದ ಬಲವನ್ನು ಸ್ವೀಕರಿಸೋಣವೇ?

from-thirt-to-flowing

ಬಾಯಾರಿಕೆಯಿಂದ ಹರಿಯುವವರೆಗೆ – ಯೋಹಾನ 7:38b – ನಾವು ನಮ್ಮ ಭಾವನೆಗಳು ಮತ್ತು ಆಸೆಗಳ ಆಧಾರದ ಮೇಲೆ ಅಥವಾ ಪವಿತ್ರಾತ್ಮನನ್ನು ಆಧರಿಸಿ ಕ್ರೈಸ್ತ ಜೀವನವನ್ನು ನಡೆಸಬಹುದು. ನೀವು ಒಂದು ಕಡಿದಾದ ರಸ್ತೆಯ ಮೇಲೆ ಪ್ರಯಾಣ ಮಾಡುತ್ತಿದ್ದರೆ, ನೀವು ಒಂದು ಬೈಸಿಕಲ್ ಜೊತೆ (ಸ್ವಯಂ) ಕಷ್ಟಪಡಬಹುದು ಅಥವಾ ಮೋಟಾರು ಚಾಲಿತ (ಪವಿತ್ರಾತ್ಮ) ಬೈಕು ಬಳಸಬಹುದು. 2016 ರಲ್ಲಿ ನೀವು ಪವಿತ್ರಾತ್ಮನ ಅಧಿಕಾರವನ್ನು ಹೊಂದಿರುವ ಜೀವನವನ್ನು ಜೀವಿಸಬೇಕೆಂದು, ಯೇಸುವಿನ ಮೂಲಕ ಸಂತೋಷಕರವಾದ ಮತ್ತು ದೇವರಿಗೆ ಹತ್ತಿರದ ಸಂಬಂಧವನ್ನು ಹೊಂದಿರುವ ಜೀವಿತವನ್ನು ಜೀವಿಸಬೇಕೆಂದು, ಸಂಪೂರ್ಣವಾಗಿ ಸಣ್ಣ ಮತ್ತು ದೊಡ್ಡ ವಿಷಯಗಳನ್ನು ದೇವರಿಗೆ ಸಲ್ಲಿಸಿದ ಒಂದು ಆಶೀರ್ವಾದದ ಜೀವನ ನಿಮ್ಮದಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ.